News Kannada

ಮೈಸೂರು

ಗೊತ್ತುಗುರಿಯಿಲ್ಲದೆ ತೆವಳುತ್ತಾ ಸಾಗುವ ಬುರಾಕ್ಸಿಂಗ್! - 1 min read

ಗೊತ್ತುಗುರಿಯಿಲ್ಲದೆ ತೆವಳುತ್ತಾ ಸಾಗುವ ಬುರಾಕ್ಸಿಂಗ್!

ಮೈಸೂರು: ಅವನ ಎರಡು ಕಾಲು ಸ್ವಾಧೀನ ಕಳೆದುಕೊಂಡಿದೆ ಹೀಗಾಗಿ ತೆವಳುತ್ತಾ ಸಾಗುವುದು ಅನಿವಾರ್ಯ.


ಅವನ ಹೆಸರು ಬುರಾಕ್ಸಿಂಗ್. ಮೂಲತಃ ಛತ್ತೀಸ್ ಗಢದವನು ಟ್ರಕ್ ಡ್ರೈವರ್ ಆಗಿದ್ದನಂತೆ. ಒಮ್ಮೆ ಅವಘಡವಾಯಿತಂತೆ ಆ ಅವಘಡದಲ್ಲಿ ಆತ ಬದುಕಿ ಬಂದನಾದರೂ ಕಾಲುಗಳು ಮಾತ್ರ ಸ್ವಾಧೀನದಲ್ಲಿರಲಿಲ್ಲ. ಮನೆಯವರಿಗೆ ಹೊರೆಯಾದ ಅದೊಂದು ದಿನ ಹಾಗೆ ಅಲ್ಲಿಂದ ಹೊರಟು ಬಂದವನು ಅದು ಹೇಗೋ ಕರ್ನಾಟಕ ತಲುಪಿದ. ಯಾರಾದರು ತಮ್ಮ ಗಾಡಿಯಲ್ಲಿ ಕರೆದುಕೊಂಡರೆ ಹೋಗುತ್ತಾನೆ. ಆದರೆ ನಿರ್ದಿಷ್ಟ ಗುರಿಯಿಲ್ಲದೆ ಹಾಗೆಯೇ ಸುಮ್ಮನೆ ತೆವಳುತ್ತಾ ಸಾಗುವ ಈತನ ಕಥೆಯೇ ವಿಚಿತ್ರ. ಹಿಂದಿ ಭಾಷೆ ಬಿಟ್ಟರೆ ಬೇರೆ ಯಾವುದೇ ಭಾಷೆ ಬರಲ್ಲ.

ಹಸಿವಾದಾಗ ಯಾವುದಾದರು ಹೋಟೆಲ್ ಮುಂದೆ ಕೈಯ್ಯೊಡ್ಡುತ್ತಾನೆ. ಅವರು ಏನಾದರು ತಿನ್ನಲು ಕೊಟ್ಟರೆ ಅದನ್ನು ತಿಂದು ಹಸಿವು ತಣಿಸಿಕೊಳ್ಳುತ್ತಾನೆ. ಅಲ್ಲಿಂದ ಮುಂದೆ ತೆವಳುತ್ತಾ ಮುಂದೆ ಸಾಗುತ್ತಾನೆ. ಬೆನ್ನು ಮೇಲೆ ಎರಡು ಬ್ಯಾಗ್ ನೇತು ಹಾಕಿಕೊಂಡಿದ್ದಾನೆ. ಕಳೆದ ಕೆಲವು ದಿನಗಳ ಹಿಂದೆ ಮಡಿಕೇರಿಯಲ್ಲಿ ಕಾಣಿಸಿಕೊಂಡ ಈತ ಸುಮಾರು 4 ದಿನಗಳ ಕಾಲ ತೆವಳುತ್ತಾ ಕುಶಾಲನಗರದಲ್ಲಿ ಕಾಣಿಸಿಕೊಂಡಿದ್ದನು. ಆ ನಂತರ ಈ ವ್ಯಾಪ್ತಿಯಲ್ಲಿ ಆತ ಕಂಡು ಬಂದಿಲ್ಲ. ಇಷ್ಟಕ್ಕೂ ಆತನಿಗೆ ಇಂತಹ ಸ್ಥಳಕ್ಕೆ ಹೋಗ ಬೇಕೆಂದೇನೂ ಇಲ್ಲ ಹೀಗಾಗಿ ಯಾವ ರಸ್ತೆಯಲ್ಲಿ ಹೋಗ ಬೇಕೋ ಆ ರಸ್ತೆಯಲ್ಲಿ ಸಾಗುತ್ತಾನೆ.

ಯಾರಾದರು ದಾನಿಗಳು ಮುಂದೆ ಬಂದು ಅವನಿಗೆ ಸಹಾಯ ಮಾಡುವುದರ ಮೂಲಕ ಯಾವುದಾದರೂ ಅನಾಥಶ್ರಮಕ್ಕೆ ಸೇರಿದರೆ ಬಹುಶಃ ಒಳ್ಳೆಯದಾಗಬಹುದೇನೋ ಆದರೆ ಆತ ಎಲ್ಲಿದ್ದಾನೋ ಗೊತ್ತಿಲ್ಲ. ಆದರೆ ಯಾವುದಾದರೂ ರಸ್ತೆಯಲ್ಲಿ ತೆವಳುತ್ತಾ ಸಾಗುವುದು ಕಂಡು ಬಂದರೂ ಬರಬಹುದು.

See also  ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಮೂರು ಆನೆಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು