ಮೈಸೂರು: ಲೋಕಲ್ ಫೈಟ್ ಮುಗಿದು ಮತಪೆಟ್ಟಿಗೆ ಸ್ಟ್ರಾಂಗ್ ರೂಂ ಸೇರಿರುವ ಹಿನ್ನಲೆಯಲ್ಲಿ ಗ್ರಾಮಗಳ ಅರಳಿಕಟ್ಟೆಯಲ್ಲಿ ಪರಸ್ಪರ ಗೆಲುವು-ಸೋಲಿನ ಲೆಕ್ಕಾಚಾರ ಜೋರಾಗಿದ್ದು, ಬೆಟ್ಟಿಂಗ್ ಭರಾಟೆಯೂ ಸಹ ನಡೆದಿದೆ.
ಹಳೆ ಮೈಸೂರು ಪ್ರಾಂತ್ಯದಲ್ಲಿ ಮೂರು ಪಕ್ಷಗಳ ತ್ರಿಕೋನ ಸ್ಪರ್ಧೆ ನಡೆದಿದ್ದು, ಕಾಂಗ್ರೆಸ್, ಜೆಡಿಎಸ್ ಬಿಜೆಪಿಗಳಲ್ಲಿ ಇನ್ನಿಲ್ಲದ ಪೈಪೋಟಿ ನಡೆದಿದೆ. ಜಿಲ್ಲೆಯ 49 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲೂ ಬಿರುಸಿನ ಮತದಾನ ನಡೆದಿದ್ದು, ನಾಳೆ ಮತ ಎಣಿಕೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಗೆಲುವಿನ ಲೆಕ್ಕಾಚಾರದಲ್ಲಿ 25 ಸಾವಿರ ಬೆಟ್ಟಿಂಗ್ ನಡೆದಿದ್ದು ಕೆಲವೆಡೆ ಲಕ್ಷಗಟ್ಟಲೇ ಬೆಟ್ಟಿಂಗ್ ಸಹ ನಡೆಯುತ್ತಿದ್ದು, ಹಲವಾರು ಮಂದಿ ಕುರಿ, ಮೇಕೆ, ಜಮೀನು, ಟ್ರ್ಯಾಕ್ಟರ್ ಗಳನ್ನೇ ಬಾಜಿ ಕಟ್ಟಿದ್ದಾರೆ.