ಮೈಸೂರು: 2012 ರಲ್ಲಿ ನಗರದ ಕೀರ್ತಿ ಫಿಲ್ಮ್ ಇನ್ಸ್ ಟ್ಯೂಷನ್ ಗೆ ಸಂಬಂಧಿಸಿದಂತೆ ಕೋರ್ಟ್ ಬಂಧನ ವಾರೆಂಟ್ ಹೊರಡಿಸಿದ್ದು ಇಂದು ಮೈಸೂರಿನ ನ್ಯಾಯಾಲಯಕ್ಕೆ ನಟ ಮಂಡ್ಯ ರಮೇಶ್ ಹಾಜರಾಗುತ್ತಿದ್ದು ಬಂಧನ ಭೀತಿ ಎದುರಿಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವೈಯುಕ್ತಿಕ ದ್ವೇಷದಿಂದ ಖಾಸಗಿ ಸುದ್ದಿ ವಾಹಿನಿಯಲ್ಲಿ ಸಂಸ್ಥೆಯ ವಿರುದ್ಧ ಹೇಳಿಕೆ ನೀಡಿ ಸಂಸ್ಥೆಗೆ ಮಾನ ಹಾನಿಯುಂಟು ಮಾಡಿದ್ದಾರೆ ಎಂದು ಕೀರ್ತಿ ಫಿಲ್ಮ್ ಇನ್ಸೂಟಿಟ್ ಮುಖ್ಯಸ್ಥ ರಾಚಪ್ಪ ಅವರ ಮಂಡ್ಯ ರಮೇಶ್ ಹಾಗೂ ಅಂದಿನ ಖಾಸಗಿ ವಾಹಿನಿ ವರದಿಗಾರನ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.
ಈ ಪ್ರಕರಣದ ಹಿನ್ನಲೆಯಲ್ಲಿ ಮೈಸೂರಿನ 1 ನೇ ಮುಖ್ಯ ನ್ಯಾಯಾಲಯವು ನಟ ಮಂಡ್ಯ ರಮೇಶ್ ವಿರುದ್ಧ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಇದಕ್ಕೆ ಸ್ಪಂದಿಸದ ಹಿನ್ನಲೆಯಲ್ಲಿ ವಾರೆಂಟ್ ಜಾರಿಗೊಳಿಸಿತ್ತು, ವಾರೆಂಟ್ ಗೂ ಸೂಕ್ತ ರೀತಿ ಸ್ಪಂದಿಸದೇ ಕೋರ್ಟ್ ಗೆ ಗೈರು ಹಾಜರಾಗಿದ್ದರು. ಈ ಹಿನ್ನಲೆಯಲ್ಲಿ ನ್ಯಾಯಾಲಯವು ಮಂಡ್ಯ ರಮೇಶ್ ಗೆ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದೆ. ಪರಿಣಾಮ ಬಂಧನದ ಭೀತಿ ಎದುರಿಸುತ್ತಿರುವ ನಟ ರಮೇಶ್ ಇಂದು ಕೋರ್ಟ್ ಹಾಜರಾಗಬೇಕಿದ್ದು ಹಾಜರಾಗುವ ಸಂಧರ್ಭದಲ್ಲಿ ಬಂಧನವಾಗುವ ಸಾಧ್ಯತೆ ಇದೆ.