ಮೈಸೂರು: ಮೈಸೂರು ತಾಲೂಕಿನ ಆಯರಹಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಹೆಚ್. ಮಹದೇವನಾಯ್ಕ ಮೂರು ಮತಗಳಿಂದ ಗೆಲ್ಲುವ ಮೂಲಕ ಜಿಲ್ಲೆಯ ಅಚ್ಚರಿಯ ಫಲಿತಾಂಶ ಕಂಡ ವಿಶೇಷ ಅಭ್ಯರ್ಥಿ ಎನಿಸಿಕೊಂಡರು.
ಮೈಸೂರು ತಾಲೂಕಿನ ಆಯರಹಳ್ಳಿ ಕ್ಷೇತ್ರದ ಬಿಜೆಪಿಯಿಂದ ಕಣಕ್ಕಿಳಿದಿದ್ದ ಮಹದೇವ ನಾಯಕ 2112 ಮತಗಳಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ 2109 ಇನ್ನೂ ಪಕ್ಷೇತ್ರರ ಅಭ್ಯರ್ಥಿ 1700 ಮತಗಳಿಸಿದ್ದು ಈ ತಾಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿದ್ದು ಬಿಜೆಪಿ ಅಭ್ಯರ್ಥಿ 3 ಮತಗಳ ಅಂತರದಿಂದ ಗೆದ್ದು ಗೆಲುವಿನ ನಗೆ ಬೀರಿದ್ದು ವಿಶೇಷ.
ಜಯಪುರ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಕಣದಲ್ಲಿ ನಡೆದಿದ್ದ ವಾರ್ ವಾರ್ಗಿತ್ತಿಯರ ವಾರ್ನಲ್ಲಿ ಜೆಡಿಎಸ್ ನ ಪ್ರೇಮಕುಮಾರ್ ಗೆದ್ದಿದ್ದು ಕಾಂಗ್ರೆಸ್ ನ ತಮ್ಮ ಹಿರಿಯ ವಾರಿಗಿತ್ತಿ ಚೆನ್ನಮ್ಮ ಅವರನ್ನು 519 ಮತಗಳ ಅಂತರದಿಂದ ಸೋಲಿಸುವ ಮೂಲಕ ವಾರ್ ವಾರ್ಗಿತ್ತಿ ವಾರ್ನಲ್ಲಿ ಪ್ರೇಮ ಕುಮಾರಿ ಪಾರಾಗಿದ್ದಾರೆ.
ಪ್ರಬಲ ಪೈಪೋಟಿಗಳ ನಡುವೆಯು ಚಾಮುಂಡೇಶ್ವರಿ ಕ್ಷೇತ್ರಗಳ ಜಿಲ್ಲಾ ಪಂಚಾಯತ್-ತಾಲೂಕು ಪಂಚಾಯತ್ ನಲ್ಲಿ ಜೆಡಿಎಸ್ ಅನ್ನು ಅತಿ ಹೆಚ್ಚು ಸ್ಥಾನ ಗೆಲ್ಲಿಸಿಕೊಂಡ ಶಾಸಕ ಜಿಟಿ ದೇವೇಗೌಡ ತನ್ನ ಪತ್ನಿಯನ್ನು ಬಿಳಕೆರೆ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿಗೆ ಕಣಕ್ಕಿಳಿಸಿದ್ದರು. ಆದರೆಲ್ಲಿ ಪತ್ನಿ ಸೋಲು ಅನುಭವಿಸುವ ಮೂಲಕ ಕ್ಷೇತ್ರವನ್ನೇ ಗೆಲ್ಲಿಸಿಕೊಂಡ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಪತ್ನಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾಗಿದ್ದು ಅವರಿಗೆ ತೀವ್ರ ಮುಖಭಂಗವಾಗಿರುವುದು ವಿಶೇಷ.