ಮೈಸೂರು: ತನಗೆ ಮದುವೆ ಮಾಡಿಕೊಡಿ ಅಂದಿದ್ದಕ್ಕೆ ತಂದೆಯೇ ಮಗನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟು ಕೊಲೆಗೈದ ಘಟನೆ ಕುವೆಂಪುನಗರದಲ್ಲಿ ನಡೆದಿದೆ.
ಬರ್ಬರವಾಗಿ ಕೊಲೆಯಾದ ವ್ಯಕ್ತಿಯೇ ಕುವೆಂಪುನಗರ ಡಿವಿಸಿ ಬಡವಾಣೆಯ ನಿವಾಸಿ ದೇವರಾಜ್(32). ಈತ ಕುಡಿತದ ಚಟಕ್ಕೆ ದಾಸನಾಗಿದ್ದ ಈತ ಹಲವಾರು ಚಟಗಳನ್ನು ಮೈಗೂಡಿಸಿಕೊಂಡಿದ್ದನು. ನಿನ್ನೆ ರಾತ್ರಿ ನನಗೆ ವಯಸ್ಸಾಗಿದೆ ಮದುವೆ ಮಾಡಪ್ಪಾ ಎಂದು ತಂದೆ ಜೊತೆ ಜಗಳಕ್ಕಿಳಿದಾಗ ಕೋಪಗೊಂಡ ತಂದೆ ಕೃಷ್ಣಪ್ಪ(64) ಬುದ್ದಿವಾದ ಹೇಳಿ ಕಳುಹಿಸಿದ್ದಾರೆ. ತಡರಾತ್ರಿ ಮಗನ ಮೇಲೆ ಸಿಟ್ಟುಕೊಂಡ ಅಪ್ಪನು ಕುಡಿದ ಅಮಲಿನಲ್ಲಿ ರಾತ್ರಿ ರೂಮಿನಲ್ಲಿ ಮಲಗಿದ್ದ ಮಗನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ರೂಮಿನ ಬಾಗಿಲು ಹಾಕಿಕೊಂಡಿದ್ದಾನೆ.
ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪ್ಪನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.