ಮೈಸೂರು: ಲೋಕ ಕಲ್ಯಾಣಕ್ಕಾಗಿ ಹನುಮಾನ್ ಚಾಲಿಸ್ ಬೃಹತ್ ಪರಾಯಣ ಯಗ್ನದ ಪ್ರಚಾರ ರಥದಲ್ಲಿ ಹನುಮಾನ್ ವೇಷಧಾರಿಯಾಗಿ ನೆದರ್ಲ್ಯಾಂಡ್ ನ ಚಿನಿಕುರುಳಿ ಅಲಿಯಾಸ್ ಚಾನ್ಫಿಲಪ್ ಗಮನ ಸೆಳೆದರು.
ಮೈಸೂರಿನ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ 1008 ಹನುಮಾನ್ ಚಾಲಿಸ್ ಪಾರಾಯಣ ಮಹಾಯಜ್ಞ ಮುಂದಿನ ತಿಂಗಳು 6 ರಂದು ನಡೆಯಲಿದ್ದು, ಇದರ ಪ್ರಚಾರಾರ್ಥವಾಗಿ ಇಂದು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀಗಳು ಪತ್ರಿಕಾಗೋಷ್ಟಿ ನಡೆಸಿ ನಂತರ ಹನುಮಾನ್ ಚಾಲಿಸ್ ಪ್ರಚಾರ ರಥವನ್ನು ಉದ್ಘಾಟನೆ ಮಾಡಿದರು.
ಮೂಲತಃ ನೆದರ್ಲ್ಯಾಂಡ್ ದೇಶದವರಾದ ಚಿನಿಕುರುಳಿ ಸುಮಾರು 15 ವರ್ಷಗಳಿಂದ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಬರುತ್ತಿದ್ದು, ಇವರಿಗೆ ಹಿಂದೂ ಧರ್ಮದ ಬಗ್ಗೆ ಎಲ್ಲಿಲ್ಲದ ಪ್ರೀತಿ. ಪ್ರತಿ ವರ್ಷಕ್ಕೆ ಒಂದು ಬಾರಿ ಆಗಮಿಸುವ ಈತ ಇಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು, ವೇದ ಪಠಣ, ಧತ್ತಪೂಜೆಯಲ್ಲಿ ಭಾಗವಹಿಸುತ್ತಾರೆ. ಅಲ್ಲದೆ ದತ್ತ ಪೀಠದಲ್ಲಿ ಇರುವ ಬೃಹತ್ ಆಕಾರದ ಹುನುಮಾನ್ ಪೂರ್ತಿಗೆ ನಿತ್ಯ ಪೂಜೆ ಸಲ್ಲಿಸುತ್ತಾರೆ. ಆಂಗ್ಲ ಭಾಷೆಯಲ್ಲಿರುವ ಹನುಮಾನ್ ಚಾಲಿಸ್ ಪಾರಾಯಣದಿಂದ ಆಕರ್ಷಿತನಾಗಿರುವ ಈತ ಹನುಮಾನ್ ಚಾಲಿಸ್ ಯಜ್ಞದ ಪ್ರಚಾರ ರಥದಲ್ಲಿ ಹನುಮಂತನಾಗಿ ವೇಷ ಹಾಕಿಕೊಂಡು ದಿನವಿಡೀ ರಥದಲ್ಲಿ ಮೈಸೂರು ನಗರವನ್ನು ಸಂಚರಿಸುತ್ತಿದ್ದಾರೆ.