ಮೈಸೂರು: ಪತ್ರಕರ್ತರೊಬ್ಬರಿಗೆ ತಮ್ಮ ಕ್ರೆಡಿಟ್ ಕಾರ್ಡ್ ವಾಪಾಸ್ ನೀಡಿದ್ದಕ್ಕೆ ಅವರ ಅಕೌಂಟ್ ನಲ್ಲಿದ್ದ ಬಾಲೆನ್ಸ್ ಒಂದು ಪೈಸೆ ಹಣವನ್ನು ಚೆಕ್ ಮೂಲಕ ಕಳುಸಹಿಸುವ ಮೂಲಕ ಹೆಚ್ಎಸ್ ಬಿಸಿ ಬ್ಯಾಂಕ್ ಪ್ರಾಮಾಣಿಕ ಪ್ರದರ್ಶನ ಮಾಡಲು ಹೋಗಿ ಮೂರ್ಖತನ ಪ್ರದರ್ಶಿಸಿ ಪೇಚಿಗೆ ಸಿಲುಕಿಕೊಂಡ ಘಟನೆ ನಡೆದಿದೆ.
ಮೈಸೂರಿನ ದಿ ಹಿಂದೂ ಪತ್ರಿಕೆಯ ಹಿರಿಯ ವರದಿಗಾರರಾದ ಆರ್. ಕೃಷ್ಣ ಕುಮಾರ್ ಬಹಳ ದಿನಗಳ ಹಿಂದೆ ತಮ್ಮ ಹೆಚ್ಎಸ್ ಬಿಸಿ ಕ್ರೆಡಿಟ್ ಕಾರ್ಡನ್ನು ಬಳಸುವುದನ್ನು ನಿಲ್ಲಿಸಿದ್ದರು. ಕೊನೆಗೆ ಒಂದು ದಿನ ಬ್ಯಾಂಕಿಗೆ ಹೋಗಿ ತಮ್ಮ ಕ್ರೆಡಿಟ್ ಕಾರ್ಡನ್ನು ಹಿಂದುರುಗಿಸಿದ್ದರು. ಉಳಿದ ಹಣವನ್ನು ಅಕೌಂಟ್ ಗೆ ತುಂಬಿ ತಮ್ಮ ಕ್ರೆಡಿಟ್ ಅಕೌಂಟ್ ಅನ್ನು ಮುಕ್ತಾಯಗೊಳಿಸಿದರು. ಆದರೆ ಸ್ಪಲ್ಪದಿನಗಳ ನಂತರ ಬ್ಲೂಡಾರ್ಟ್ ಕೊರಿಯರ್ ನಲ್ಲಿ ಕೃಷ್ಣಕುಮಾರ್ ಅವರಿಗೆ ಚೆಕ್ ಒಂದು ಬಂದಿದೆ. ಚೆಕ್ ನಲ್ಲಿ ನಿಮ್ಮ ಕ್ರೆಡಿಟ್ ಅಕೌಂಟ್ ಬ್ಯಾಲೆನ್ಸ್ ಒಂದು ಪೈಸೆ ಅಂತಾ ಮೈಸೂರಿನ ಹೆಚ್ಎಸ್ ಬಿಸಿ ಬ್ಯಾಂಕ್ ಚೆಕ್ವೊಂದನ್ನು ಕಳುಹಿಸಿದೆ.
ಹೆಚ್ಎಸ್ ಬಿಸಿ ಬ್ಯಾಂಕೊಂದನ್ನು ತಮ್ಮ ಪ್ರಾಮಾಣಿಕತೆಯನ್ನು ತೋರಿಸಲು ಹೋಗಿ ಪೇಚಿಗೆ ಸಿಲುಕಿಕೊಂಡಿದ್ದು ಈಗ 1 ಪೈಸೆ ಹಣವನ್ನು ಡ್ರಾ ಮಾಡಿಕೊಳ್ಳುವುದು ಹೇಗೆ ಎಂದು ಪತ್ರಕರ್ತರ ಪ್ರಶ್ನೆಯಾಗಿದ್ದು, ಇದಕ್ಕೆ ಒಂದು ಪೈಸೆ ಮೊತ್ತದ ಚೆಕ್ ನೀಡಿದ ಬ್ಯಾಂಕ್ ಉತ್ತರಿಸಬೇಕಿದೆ.