ಮೈಸೂರು: ಏಳುವರ್ಷಕ್ಕೊಮ್ಮೆ ದರ್ಶನ ಕೊಡುವ ಈ ದೇವಿಗೆ ಹಾಕಿದ ಸೀರೆ, ಹೂವಿನ ಹಾರವೂ ಏಳು ವರ್ಷ ಕಳೆದರೂ ಮಾಸೋದಿಲ್ಲ ಬಾಡೋದಿಲ್ಲ ಹಾಗಾದ್ರೆ ಈ ದೇವಿಯ ಪವಾಡವೇನು…?
ಮೈಸೂರಿನಿಂದ 10 ಕಿಲೋ ಮೀಟರ್ ದೂರವಿರುವ ವರುಣಾ ಗ್ರಾಮದಲ್ಲಿ ನೆಲೆಸಿರುವ ಪುರಾತನ ದೇವಾಲಯವೇ ವಳಗೆರೆದೇವಮ್ಮ ದೇವಾಲಯ. ದೇವಾಲಯ ಸ್ಥಾಪನೆ ಬಗ್ಗೆ ಕೇಳಿದರೆ ಕೆಲವು ಚೋಳ ಕಾಲದಲ್ಲಿ ನಿರ್ಮಿಸಿದ ದೇವಾಲಯವೆಂದರೆ ಇನ್ನೂ ಕೆಲವರು ಅದಕ್ಕಿಂತ ಹಿಂದಿನ ದೇವಾಲಯ ಎನ್ನುತ್ತಾರೆ. ವಳಗೆರೆದೇವಮ್ಮ ದೇವತೆ ಹೆಸರು ಹೇಗೆ ವಿಶಿಷ್ಟವೋ ಹಾಗೆ ಈ ದೇವರು ಪಥ್ಯವೂ ಸಹ ಅಷ್ಟೇ ವಿಶಿಷ್ಟ ವಿಭಿನ್ನ. ಅದರಲ್ಲೂ ಭಕ್ತರಿಗೆ ಈಕೆ ದರ್ಶನಕ್ಕೆ ಸಿಗೋದು ಕೇವಲ ಏಳೂ ವರ್ಷಕ್ಕೆ ಒಮ್ಮೆ ಮಾತ್ರ.
ವರುಣಾ ಗ್ರಾಮದಲ್ಲಿ ನೆಲೆನಿಂತಿರುವ ಈ ದೇವಾಲಯದ ಬಾಗಿಲು ತೆಗೆಯುವುದು ಬರೋಬ್ಬರಿ ಏಳು ವರ್ಷಕ್ಕೊಮ್ಮೆ ಅದು ಅರ್ಚಕ ಅಥವಾ ಗ್ರಾಮಸ್ಥರ ಕನಸಿನಲ್ಲಿ ಕಾಣಿಸಿಕೊಂಡ ಬಳಿಕ ಜೋತಿಷ್ಯರಲ್ಲಿ ಶಾಸ್ತ್ರ ಕೇಳಿದ ಬಳಿಕವಷ್ಟೇ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಒಮ್ಮೆ ಬಾಗಿಲು ತೆರೆದರೆ ನಾಲ್ಕು ಮಂಗಳವಾರಗಳಂದು ಸುತ್ತಲ ಹತ್ತು ಹಳ್ಳಿ ಮಂದಿ ಮಡಿಲಕ್ಕಿ ತುಂಬಿ ಈ ದೇವತೆಯನ್ನು ಪೂಜಿಸಿ ತಂಪೆರುತ್ತಾರೆ. ಒಮ್ಮೆ ಬಾಗಿಲು ತೆರೆದರೆ ಮತ್ತೆ ಒಂದು ತಿಂಗಳ ತೆರೆಯುವ ದೇವಾಲಯಕ್ಕೆ ಬಾಗಿಲು ಮುಚ್ಚಿದರೆ ಇನ್ನೊಮ್ಮೆ ಬಾಗಿಲು ತೆರೆಯುವುದು ಏಳೂ ವರ್ಷದ ಬಳಿಕವಷ್ಟೇ.
ಇಂತಹ ವಿಶಿಷ್ಟ ವಳಗೆರೆದೇವಮ್ಮ ವರುಣಾದಲ್ಲಿ ನೆಲೆಸಲು ಒಂದು ಪುರಾಣ ಇತಿಹಾಸವಿದೆ. ಬಹಳ ಹಿಂದೆ ವರುಣಾಕೆರೆಯಲ್ಲಿ ಪ್ರವಾಹ ಉಂಟಾಗಿ ಅಪಾರಿ ಹಾನಿಯಾಗುತ್ತಿತ್ತು ಹಾಗೊಮ್ಮೆ ಈ ದೇವಿ ಗ್ರಾಮಸ್ಥರ ಕನಸಿನಲ್ಲಿ ಬಂದ ನನ್ನನ್ನು ಇಲ್ಲಿ ಪ್ರತಿಷ್ಟಾಪಿಸಿದರೆ ನಿಮ್ಮ ಕಷ್ಟ ನಿವಾರಣೆಯಾಗುವುದು ಎಂದಿದಕ್ಕೆ ಅಂದು ಊರಿನ ಮಂದಿ ದೇವಾಲಯ ನಿರ್ಮಿಸಿದರು ಎಂಬ ಪ್ರತೀತಿ ಇದೆ. ಅಂದಿನಿಂದ ದೇವಿಯ ಕೃಪೆಯಿಂದ ಪ್ರವಾಹವೇ ನಿಂತಿತು ಎನ್ನುತ್ತಾರೆ ಊರಿನ ಹಿರಿಯರು.
ಪೂಜೆಯೂ ವಿಶಿಷ್ಟ
ಸಾಮಾನ್ಯವಾಗಿ ದೇವರಿಗೆ ಪೂಜೆ ಸಲ್ಲಿಸುವ ಬಗ್ಗೆ ನಿಮಗೆ ಗೊತ್ತಿದೆ ಆದರೆ ಈ ದೇವಿಯ ಪೂಜೆಯೂ ವಿಭಿನ್ನವಾಗಿದ್ದು ಮಡಿಲಕ್ಕಿ ತುಂಬುವುದೆಂದರೆ ಈ ದೇವತೆಗೆ ಬಹಳ ಇಷ್ಟವಂತೆ. ಏಳು ವರ್ಷಕ್ಕೊಮ್ಮೆ ಬಾಗಿಲು ತೆರೆದ ದೇವಿಗೆ ಹತ್ತ್ತೂರ ಸಮಂಗಲಿಯರು ಮಡಿಲಕ್ಕಿ ತುಂಬಿ ಪೂಜೆಸಿದರೆ, ಬಾಯಿ ಬೀಗ ಹಾಕಿ ತಂಪು ಎರೆಯುತ್ತಾರೆ. ಇನ್ನೂ ಪುರುಷರು ದೇವಿಗೆ ತೋಟದಿಂದಲೇ ನೇರವಾಗಿ ಬಾಳೆಗೊನ್ನೆಯನ್ನೇ ಪೂಜೆ ಇಟ್ಟರೇ, ತೆಂಗಿನಕಾಯಿಯನ್ನು ಸಿಪ್ಪೇ ಸಮೇತ ತಂದಿಡುವುದು ಈಕೆಯ ವಿಶೇಷ.
ದೀಪದಲ್ಲೂ ತನ್ನ ಪಾವಿತ್ರತ್ಯ ಉಳಿಸಿಕೊಂಡಿರುವ ದೇವಿಗೆ ರೈತರು ಜಮೀನಿನಿಂದ ನೇರವಾಗಿ ಎಳ್ಳನ್ನು ತಂದು ದೇವಾಲಯದ ಆವರಣದಲ್ಲಿ ಗಾಣಹಾಕಿ ಅದರಲ್ಲಿ ಎಣ್ಣೆ ತಯಾರಿಸಿ ದೀಪ ಹಚ್ಚುತ್ತಾರೆ. ಇನ್ನೂ ದೇವಿಯ ಫೋಟೊ-ವಿಡಿಯೋವನ್ನು ತೆಗೆಯುವುದನ್ನು ನಿಷೇಧಿಸಿರುವ ಮಂದಿ ಹಾಗೊಮ್ಮೆ ತೆಗೆದರೆ ಅದರಲ್ಲಿ ದೇವಿಯ ಪ್ರತಿರೂಪವೇ ಕಾಣುವುದಿಲ್ಲ. ಹಾಗೊಂದುವೇಳೆ ತೆಗೆದವರಿಗೂ ಒಳ್ಳೇಯದಾಗುವುದಿಲ್ಲವೆಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ.
ಹಾಗಾಗಿ ಬರಿಗಣ್ಣಿನಿಂದ ಮಾತ್ರ ದೇವಿಯನ್ನು ನೋಡಲು ಅವಕಾಶವಿದ್ದು, ಒಂದೊಮ್ಮೆ ಬಾಗಿಲು ಹಾಕುವ ಮುನ್ನ ದೇವಿಗೆ ಹೊಸ ಸೀರೆ, ಹೂವಿನ ಹಾರ ಹಾಕಿ ಬಾಗಿಲು ಮುಚ್ಚಲಾಗಿರುತ್ತದೆ. ಅಚ್ಚರಿಯಿಂದರೆ ಏಳು ವರ್ಷದ ಬಳಿಕ ಬಾಗಿಲು ತೆರೆದರೆ ಸೀರೆಯ ಹೊಳಪು ಮಾಸಿರುವುದಿಲ್ಲ, ಹೂ ಸಹ ಬಾಡಿರುವುದಿಲ್ಲ. ಅಲ್ಲದೆ ದೇವಿಯ ಕೋಣೆಯೂ ಸಹ ಒಂದಿಷ್ಟು ಗಲೀಜು ಕಾಣಿಸುವುದಿಲ್ಲ ಇದೇ ವಳಗೆರೆ ದೇವಮ್ಮನ ಪವಾಡ ಎನ್ನುತ್ತಾರೆ ಭಕ್ತರು.
ಹೀಗೆ ನಂಬಿ ಬಂದವರಿಗೆ ಎಲ್ಲವನ್ನೂ ಕರುಣಿಸುವ ವಳಗಿರೆ ದೇವಮ್ಮನಿಗೆ ಬಾಗಿಲು ಮುಚ್ಚಿದ್ದರು ಪ್ರತಿ ಮಂಗಳವಾರ ಮುಚ್ಚಿದ ಬಾಗಿಲಿಗೆ ಪೂಜಿಸುವುದು ಸಾಮಾನ್ಯ. ಒಟ್ಟಾರೆ ವಳ್ಳಗೆರೆ ದೇವಮ್ಮ ಸುತ್ತೂರು ಮಾತ್ರವಲ್ಲದೆ ರಾಜ್ಯಾದಾದ್ಯಂತ ಹಲವು ಭಕ್ತರನ್ನು ತನ್ನತ್ತ ಸೆಳೆದಿದ್ದು, ಆಕೆ ದರ್ಶನ ಭಾಗ್ಯ ತೆರೆದರೆ ಲಕ್ಷಾಂತರ ಮಂದಿ ಆಕೆಯ ದರ್ಶನಕ್ಕೆ ಬರುವುದು ವಿಶೇಷವಾಗಿದೆ.
ಕಳೆದ ಒಂದು ತಿಂಗಳಿಂದ ಬಾಗಿಲು ತೆರೆದಿದ್ದ ದೇವಿಯ ದೇವಾಲಯವನ್ನು ಪದ್ಧತಿಯಂತೆ ಇಂದು ಮುಂಜಾನೆ ಮುಚ್ಚಲಾಗಿದೆ. ಇನ್ನೂ ಬಾಗಿಲು ತೆಗೆಯುವುದು ಇನ್ನೂ ಏಳು ವರ್ಷಕ್ಕೆ ಮಾತ್ರ.