ಮೈಸೂರು: ಪ್ರೀತಿಸಿ ಎರಡನೇ ಮದುವೆ ಆಗಿದ್ದ ಆಕೆ ಮೂರೇ ತಿಂಗಳಲ್ಲಿ ಮನನೊಂದು ನೇಣಿಗೆ ಶರಣಾಗಿರುವ ವಿಚಿತ್ರ ಘಟನೆಯೊಂದು ಮೈಸೂರಿನ ವಿಜಯನಗರ 4 ನೇ ಕ್ರಾಸ್ ನ ಮನೆಯೊಂದರಲ್ಲಿ ನಡೆದಿದೆ.
ಶಿಲ್ಪಾಶ್ರೀ(26) ಆತ್ಮಹತ್ಯೆಗೈದ ಯುವತಿ. ನೇಣಿಗೆ ಶರಣಾಗಿದ್ದ ಯುವತಿ ಶಿಲ್ಪಾಶ್ರಿ ಅವರು ಈ ಐದು ವರ್ಷಗಳ ಹಿಂದೆಯೇ ಆಂಟ್ಯನಿ ಎಂಬುವವನೊಟ್ಟಿಗೆ ವಿವಾಹವಾಗಿದ್ದರು. ಆದರೆ ಆತನೊಟ್ಟಿ ಸಂಸಾರಿಕ ಕಲಹ ಉಂಟಾಗಿ ಕೊನೆಗೆ 2 ವರ್ಷದ ಹಿಂದೆಯಷ್ಟೇ ವಿಚ್ಛೇಧನ ಪಡೆದಿದ್ದ ಇವರಿಗೆ ಮೂರು ವರ್ಷದ ಮಗನಿದ್ದನು. ಇದಾದ ಬಳಿಕ ಪರಿಚಿತ ನಾದ ಎಲೆಕ್ಟ್ರಿಶಿಯನ್ ಹರೀಶ್ ಬಾಬು ಜತೆ ಪರಿಚಯವಾಗಿ ಕೊನೆಗೆ ಪರಸ್ಪರ ಇಬ್ಬರು ಪ್ರೀತಿಸಿದ್ದರು. ಮನೆಯ ವಿರೋಧದ ನಡುವೆಯೂ ಶಿಲ್ಪಾಶ್ರೀಗೆ ಎರಡನೇ ಗಂಡನಾಗಿ ಬಾಳು ನೀಡಿದ್ದರು. ಆದರೆ ಮದುವೆ ಸಂದರ್ಭದಲ್ಲಿ ಮಗನಿಗೂ ಹಾಗೂ ತನ್ನ ತಾಯಿಗೂ ಹೆಚ್ಚಿನ ಆದ್ಯತೆ ನೀಡಬೇಕೆಂದು ಶಿಲ್ಪಾಶ್ರೀ ಹೇಳಿದ್ದು, ಅದಕ್ಕೆ ಒಪ್ಪಿ ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು.
ಆದರೆ ದಿನಕಳೆದಂತೆ ತನ್ನ ಮೊದಲ ಪತಿಯ ಮಗುನನ್ನು ನೀನು ಸರಿಯಾಗಿ ಗಮನಿಸುತ್ತಿಲ್ಲವೆಂದು ಶಿಲ್ಪಾಶ್ರೀ ಎರಡನೇ ಗಂಡನೊಂದಿಗೆ ಜಗಳ ನಡೆಸುತ್ತಿದ್ದಳು. ಅಲ್ಲದೆ ಪತಿಯೂ ಸಹ ಮಗನನ್ನು ದೂರ ಇಡುವಂತೆ ಹೇಳಿದ್ದಾನೆ. ಇದರಿಂದಾಗಿ ಮನನೊಂದ ಶಿಲ್ಪಾಶ್ರಿ ತನ್ನ ಮಗನನ್ನು ಬಿಟ್ಟು ಹೇಗೆ ಬಾಳುವುದು ಎಂದು ಯೋಚಿಸಿ, ಅಲ್ಲದೆ ಅಂದಿನಿಂದ ತಾಯಿ ಮಾತು ಬಿಟ್ಟಿದ್ದನ್ನು ಮನಸ್ಸಲ್ಲೆ ನೆನೆಸಿಕೊಂಡು ಕೊರಗಿ ಇಂದು ನೇಣಿಗೆ ಶರಣಾಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿಜಯನಗರ ಠಾಣೆಯ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.