News Kannada
Wednesday, July 06 2022

ಮೈಸೂರು

ಮೈಸೂರು ಟ್ರಾಫಿಕ್ ನಲ್ಲಿ ಹೋಂಗಾರ್ಡ್ ಮಹಿಳೆಯರದ್ದೇ ದರ್ಬಾರ್ - 1 min read

Photo Credit :

ಮೈಸೂರು ಟ್ರಾಫಿಕ್ ನಲ್ಲಿ ಹೋಂಗಾರ್ಡ್ ಮಹಿಳೆಯರದ್ದೇ ದರ್ಬಾರ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಟ್ರಾಫಿಕ್ ನಿಯಂತ್ರಣದಲ್ಲಿ ಹೆಚ್ಚಾಗಿ ಗ್ರಾಮೀಣ ಮಹಿಳಾ ಹೋಂಗಾರ್ಡ್ ಗಳೇ  ಕೆಲಸ ನಿರ್ವಹಿಸುವ ಮೂಲಕ ಹಳ್ಳಿಯಲ್ಲಿ ಸಂಸಾರ ಮಾತ್ರವಲ್ಲ ನಗರದಲ್ಲಿ ಸಂಚಾರ ನಿಯಮವನ್ನು ನಿಯಂತ್ರಿಸ ಬಲ್ಲೆವೂ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.


ಪ್ರವಾಸೋದ್ಯಮ, ಕೈಗಾರಿಕೆಗಳ ಅಭಿವೃದ್ಧಿಯಿಂದಾಗಿ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರ ಭಾಗದಲ್ಲಿ ಸಂಚಾರ ನಿಯಂತ್ರಿಸುವುದು ದುಸ್ಥರವಾಗುತ್ತಿದೆ ಎಂದಾಗ ನೆರವಿಗೆ ಬಂದಿದ್ದೇ ಕಳೆದ 2 ವರ್ಷದ ಹಿಂದಿನ ಹೋಂಗಾರ್ಡ್(ಗೃಹ ರಕ್ಷಕ ದಳ). ಸಂಚಾರ ನಿಯಂತ್ರಣ, ಜೈಲಿನ ಸುವ್ಯವಸ್ಥೆ, ಬಾಲ ಮಂದಿರಗಳಲ್ಲಿ ಇವರ ಕರ್ತವ್ಯ ಅತ್ಯಗತ್ಯವಾಗಿ ಹೋಗಿದೆ.

ಅದರಲ್ಲೂ ಮೈಸೂರಿನ ಸಂಚಾರಿ, ಜೈಲು ಭದ್ರತೆ ಹಾಗೂ ಬಾಲ ಮಂದಿರದ ಭದ್ರತೆಯಲ್ಲಿ ಬರೋಬ್ಬರಿ 163 ಮಂದಿ ಮಹಿಳಾ ಹೋಂಗಾರ್ಡ್ ಗಳೇ ಇರುವುದು ವಿಶೇಷವಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರೇ ಹೆಚ್ಚಾಗಿ ಕೆಲಸ ಮಾಡುವ ಮೂಲಕ ಹಳ್ಳಿಯಲ್ಲಿ ಸಂಸಾರವನ್ನಷ್ಟೆ ಅಲ್ಲಾ ನಗರದಲ್ಲಿ ಸಂಚಾರವನ್ನು ನಿಯಂತ್ರಿಸುತ್ತೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.  ದಿನವೊಂದಕ್ಕೆ 8 ಗಂಟೆ ಕೆಲಸ ನಿರ್ವಹಿಸಿ 320 ಗೌರವಧನಗಳಂತೆ 9700 ರೂ ಮಾಸಿಕ ವೇತನ ಪಡೆಯುತ್ತಿರುವ ಹೋಂಗಾಡ್ರ್ಸ್ ನಿತ್ಯ ಸಂಚಾರ ಹರಸಾಹಸ ಪಡುತ್ತಾರೆ. ನಿತ್ಯ ಸಂಚಾರ ನಿಯಮ ಉಲ್ಲಂಘಿಸುವವರನ್ನು ನಿಯಂತ್ರಿಸಿ ಕೆಲವೊಮ್ಮೆ ಜನರಿಂದ ಕಿರಿಕಿರಿಯನ್ನು ಅನುಭವಿಸಿ ಎಲ್ಲದಕ್ಕೂ ಸಹಿಸಿಕೊಂಡು ತಮ್ಮ ಕೆಲಸ ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ.

 ಕೆಲಸ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡ ಮಹಿಳಾ ಹೋಂಗಾರ್ಡ್ ಆರಂಭದಲ್ಲಿ ಕೆಲಸ ಮಾಡುವುದು ತಮ್ಮ ಕಷ್ಟವೆನಿಸುತ್ತಿತ್ತು. ಸಾರ್ವಜನಿಕರು ಸಹ ನಮಗೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರು. ಆದರೆ ಸಂಚಾರಿ ಪೊಲೀಸರು ನಮ್ಮ ಹಿಂದೆ ಇದ್ದಾರೆ ಎಂಬುದನ್ನು ತಿಳಿಯುತ್ತಿದ್ದಂತೆ ಈಗ ನಮಗೂ ಗೌರವ ದೊರೆತಿದೆ. ಅಲ್ಲದೆ ಕೆಲವೊಮ್ಮೆ ಕಷ್ಟವೆನಿಸುತ್ತದೆ. ಆದರೂ ಸಹ ಅನಿವಾರ್ಯ ಮಾಡಲೇಬೇಕಿದೆ ಎಂದರು.

ಅಲ್ಲದೆ ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರು ಕರ್ತವ್ಯ ನಿರ್ವಹಿಸುವ ಮೂಲಕ ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲವೆಂದು ತೋರಿಸಿಕೊಟ್ಟಿದ್ದಾರೆ. ಅದರಂತೆ ಹೋಂಗಾರ್ಡ್ ನಲ್ಲೂ ಸಾವು ಸಹ ಕರ್ತವ್ಯ ನಿರ್ವಹಿಸಿ ಪುರಷರಿಗಿಂತ ಕಡಿಮೆ ಇಲ್ಲವೆಂದು ತೋರಿಸಿಕೊಟ್ಟಿದ್ದೇವೆ ಎನ್ನುತ್ತಾರೆ.

ಅದೇನೆ ಇರಲಿ ಆತುರದ ಜೀವನದ ಸಂಚಾರದಲ್ಲಿ ನಿಯಮ ಉಲ್ಲಂಘಿಸುವವರೇ ಹೆಚ್ಚಾಗಿ ಇರುವ ಈ ಕಾಲದಲ್ಲಿ ಆತುರಕ್ಕೆ ಬಿದ್ದ ಸಂಚಾರ ನಿಯಮ ಉಲ್ಲಂಘಿಸುವವರನ್ನು ಖಡಕ್ ಆಗಿ ನಿಯಂತ್ರಿಸುವ ಮಹಿಳಾ ಹೋಗಾರ್ಡ್ ಮಹಿಳಾ ಮಣಿಗಳಿಗೊಂದು ಹಾಟ್ಸಾಪ್ ಹೇಳಲೇಬೇಕಿದೆ.

See also  ಚಾಮುಂಡೇಶ್ವರಿ ದೇಗುಲದ ಹುಂಡಿ ಏಣಿಕೆ ಮಾಡುವರಿಂದಲೇ ಕೈಚಳಕ: ನಾಲ್ವರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು