News Kannada
Wednesday, July 06 2022

ಮೈಸೂರು

ಮೈಸೂರು ರೇಸ್ ಕೋರ್ಸ್ ಆಗುತ್ತಾ ಸ್ಥಳಾಂತರ ? - 1 min read

Photo Credit :

ಮೈಸೂರು ರೇಸ್ ಕೋರ್ಸ್ ಆಗುತ್ತಾ ಸ್ಥಳಾಂತರ ?

ಮೈಸೂರು: ಮಾರ್ಚ್ ಅಂತ್ಯದ ವೇಳೆಗೆ ರೇಸ್ ಕೋರ್ಸ್ ಭೂಮಿ ಲೀಸ್ ಅವಧಿ ಮುಗಿಯಲಿದ್ದು, ಈ ಬಾರಿ ಮಹಾನಗರ ಪಾಲಿಕೆ ಲೀಸ್ ಅವಧಿಯನ್ನು ಪುನರ್ ನವೀಕರಣ ಮಾಡುತ್ತಾರಾ? ಅಥವಾ ಸ್ಥಳಾಂತರ ಮಾಡುತ್ತಾರಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯಭಾಗದಲ್ಲಿರುವ ರೇಸ್ ಕೋರ್ಸ್ ಜಾಗ 140 ಎಕರೆ ವಿಶಾಲ ಪ್ರದೇಶವನ್ನು ಒಳಗೊಂಡಿದೆ. ಸದ್ಯಕ್ಕೆ ರೇಸ್ ಕೋರ್ಸ್ ಜಾಗ ಮಹಾನಗರಪಾಲಿಕೆ ಒಡೆತನದಲ್ಲಿದ್ದು, ಇದನ್ನು 125 ವರ್ಷಗಳ ಹಿಂದಿನ ಒಪ್ಪಂದದಂತೆ ರೇಸ್ ಕೋರ್ಸ್ ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದೆ. 1976 ರಿಂದಲೂ ಈವರೆಗೂ ರೇಸ್ ಕೋರ್ಸ್ ತನ್ನ ಆಟಕ್ಕಾಗಿ ಸುಮಾರು 3 ಬಾರಿ ಗುತ್ತಿಗೆ ಅವಧಿಯನ್ನು ಅವಧಿಯನ್ನು ನವೀಕರಣ ಮಾಡಿಸಿಕೊಂಡಿದೆ. ಆದರೆ ಈ ಮಾರ್ಚ್ ಅಂತ್ಯದ ವೇಳೆ ಮತ್ತೆ ರೇಸ್ ಕೋರ್ಸ್ ಗುತ್ತಿಗೆ ಅವಧಿ ಮುಗಿಯಲಿದೆ.

ಇದೇ ತಿಂಗಳ ಕೊನೆಗೆ ರೇಸ್ ಕೋರ್ಸ್ ಗುತ್ತಿಗೆ ಅವಧಿ ಮುಗಿಯುವ ಹಂತದಲ್ಲಿರುವ ಈ ವೇಳೆ ಎಫ್ ಕೆಸಿಸಿಐ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಸುಧಾಕರ್ ಶೆಟ್ಟಿ ಈ ಬಾರಿ ರೇಸ್ ಕೋರ್ಸ್ ಗೆ ಸದರಿ ಭೂಮಿಯನ್ನು ನವೀಕರಣ ಮಾಡಿಕೊಡದಂತೆ ಮನವಿ ಮಾಡಿದ್ದಾರೆ.

ರೇಸ್ ಎಂಬುದು ಆಟದ ಬದಲಿಗೆ ಇತ್ತೀಚಿನ ದಿನಗಳಲ್ಲಿ ಚಟವಾಗಿದ್ದು ಇಂತಹ ಜೂಜಾಡುವ ಆಟಗಳನ್ನು ನಗರದಿಂದ ಹೊರವಲಯಕ್ಕೆ ಸ್ಥಳಾಂತರಿಸುವುದು ಉತ್ತಮ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿಯೂ ಸಹ ನಗರದಲ್ಲಿದ್ದ ರೇಸ್ ಕೋರ್ಸ್ ಅನ್ನು ಹೊರ ವಲಯಕ್ಕೆ ಸ್ಥಳಾಂತರಿಸಲಾಗಿದ್ದು, ಅಂತೇಯೆ ಮೈಸೂರಿನಲ್ಲೂ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.

ಮುಕ್ತ ಪ್ರವೇಶದಿಂದ ದೂರವಾಗಿರುವ ರೇಸ್ ಕ್ಲಬ್ ನಿಂದ ನಗರಪಾಲಿಕೆಗೂ ಯಾವುದೇ ಆದಾಯ ಬರುತ್ತಿಲ್ಲ. ಈ ಹಿನ್ನಲೆಯಲ್ಲಿ ರೇಸ್ ಕೋರ್ಸ್ ಸ್ಥಳಾಂತರಿಸಿ ಇಲ್ಲಿನ ಜಾಗವನ್ನು ಪ್ರವಾಸೋದ್ಯಮ, ಮಕ್ಕಳಾ ಕ್ರೀಡಾಕೂಟ, ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಬಳಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳಿಗೂ ಮನವಿ ಮಾಡುವುದಾಗಿ ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.

ಈ ಬೆಳವಣಿಗೆಯನ್ನು ಗಮನಿಸಿದರೆ ಈ ಭಾರಿ ರೇಸ್ ಕೋರ್ಸ್ ಗುತ್ತಿಗೆ ನವೀಕರಣ ಆಗುವುದು ಕೊಂಚ ಅನುಮಾನವೆನಿಸಿದ್ದು, ಹಾಗೊಂದು ವೇಳೆ ನವೀಕರ ಆಗದಿದ್ದರೆ ರೇಸ್ ಕೋರ್ಸ್ ಸ್ಥಳಾಂತರಕ್ಕೆ ನಗರಪಾಲಿಕೆ ಚಿಂತನೆ ನಡೆಸಲಿದೆ. ಒಂದು ವೇಳೆ ನವೀಕರಣಗೊಂಡರೆ ಎಂದಿನಂತೆ ರೇಸ್ ಕೋರ್ಸ್ ಮುಂದುವರೆಯುತ್ತದೆ. ಆದರೆ ಮಹಾನಗರಪಾಲಿಕೆ ನಿರ್ಧಾರದ ವಿರುದ್ಧ ಎಫ್ ಕೆಸಿಸಿಐ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಲು ಮುಂದಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

See also  ಪತ್ರಕರ್ತನ ಮೇಲೆ ಸಚಿವ ತನ್ವೀರ್ ಸೇಠ್ ಬೆಂಬಲಿಗರಿಂದ ಹಲ್ಲೆ: ಪತ್ರಕರ್ತರಿಂದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು