ಮೈಸೂರು: ಹಿಂದುಳಿದ ವರ್ಗಗಳ ಹರಿಕಾರ ಡಿ. ದೇವರಾಜ ಅರಸು ಅವರ ಜೀವನದ ಸಾಧನೆಯನ್ನು ಬಿಂಬಿಸುವ ನಾನಾ ಮುಖಗಳ ಛಾಯಾಚಿತ್ರ ಪ್ರದರ್ಶನ ನೋಡುಗರ ಗಮನ ಸೆಳೆದಿದ್ದಲ್ಲದೆ, ಸಾರ್ವಜನಿಕರು ಅವುಗಳನ್ನು ಸೆರೆ ಹಿಡಿದು ಮತ್ತೆ ಅವರನ್ನು ಸ್ಮರಿಸಿಕೊಂಡರು.
ಮೈಸೂರಿನ ಕಲಾ ಮಂದಿರದಲ್ಲಿ ವಾರ್ತಾ ಇಲಾಖೆ ಅಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ವಿಶೇಷ ಛಾಯಾಚಿತ್ರ ನೋಡುಗರ ಗಮನ ಸೆಳೆದಿದೆ. ಜಿಲ್ಲಾ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು.
ಛಾಯಾಚಿತ್ರ ಪ್ರದರ್ಶನದಲ್ಲಿ ದೇವರಾಜು ಅರಸು ಅವರು ಅಂದಿನ ಪ್ರಧಾನಿ ಇಂದಿರಾಗಾಂಧಿಯೊಟ್ಟಿಗೆ ವಿಧಾನಸೌಧದಲ್ಲಿ ಇದ್ದ ಚಿತ್ರ, ವಿಮಾನ ನಿಲ್ದಾಣದಲ್ಲಿ ಅಂದಿನ ಪತ್ರಕರ್ತರೊಟ್ಟಿಗೆ ಇದ್ದ ಚಿತ್ರ, ಜನ ಸಾಮಾನ್ಯರಂತೆ ದನದ ಕೊಟ್ಟಿಗೆಗೂ ಭೇಟಿ ನೀಡಿ ಎಲ್ಲರನ್ನೂ ಆಕರ್ಷಿಸಿದ ದೇವರಾಜ ಅರಸು ಅವರ ವ್ಯಕ್ತಿತ್ವದ ಇತಿಹಾಸ ತಿಳಿಸುವ ಆ ದಿನಗಳ ಚಿತ್ರಗಳು ಎಲ್ಲರ ಗಮನ ಸೆಳೆದವು. ಛಾಯಾಚಿತ್ರ ವೀಕ್ಷಿಸಲು ಮುಗಿಬಿದ್ದ ಸಾರ್ವಜನಿಕರು ತಮ್ಮ ಮೊಬೈಲ್ ಗಳನ್ನು ಅರಸ್ ಅವರ ಛಾಯಾಚಿತ್ರಗಳನ್ನು ಕ್ಲಿಕಿಸಿಕೊಳ್ಳುವ ಮೂಲಕ ಖುಷಿ ಪಟ್ಟರು.
ಬಹಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತಿದ್ದ ಗ್ರಾಮ ಟಿವಿ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಏಕೆಂದರೆ ಇಂದಿನ ಕಂಪ್ಯೂಟರ್ ಯುಗದಲ್ಲಿ ಮರೆಯಾಗಿರುವ ಗ್ರಾಮ ಟಿವಿ ಕಾಣಿಸಿಕೊಂಡಿದ್ದು ಎಲ್ಲರನ್ನು ಆಕರ್ಷಿಸಿತು. ಬಹಳ ಹಿಂದೆ ಗ್ರಾಮಗಳಲ್ಲಿ ಜನರು ಒಂದೆಡೆ ಸೆರೆ ಇದರಲ್ಲಿ ಇಣುಕಿ ನೋಡಿ ಇದರಲ್ಲಿ ಬರುವ ರೀಲ್ ನಲ್ಲಿ ಸಿನಿಮಾ ನೋಡುತ್ತಿದ್ದನ್ನು ಇಂದಿಗೂ ಅಂತೆಯೇ ಕಲಾಮಂದಿರದಲ್ಲಿ ಹಳೆ ರೀಲ್ ನೋಡಿ ಸಂತಸ ಪಟ್ಟದ್ದು ವಿಶೇಷ.