ಮೈಸೂರು: ಸೆಮಿಸ್ಟರ್ ನಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮುಂಡಿಬೆಟ್ಟದ ಪೊಲೀಸ್ ಠಾಣೆ ಸಮೀಪ ನಡೆದಿದೆ.
ಮೈಸೂರಿನ ಯವರಾಜ ಕಾಲೇಜಿನ ಫೈನಲ್ ಇಯರ್ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಸಂದೀಪ್ ಎಂಬ ಯುವಕನೇ ಹೀಗೆ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ. ಕಳೆದ ಮೂರು ಸೆಮಿಷ್ಟರ್ ಗಳಲ್ಲಿ ಕೆಲವು ವಿಷಯಗಳಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದಿದ್ದ ಈತ ನಿನ್ನೆ ರಾತ್ರಿ ಚಾಮುಂಡಿ ಬೆಟ್ಟದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಲತಃ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಕೆರೆ ನಿವಾಸಿಯಾಗಿದ್ದ ಸಂದೀಪ್ ಕಳೆದ ಹಲವು ವರ್ಷದಿಂದ ಚಾಮುಂಡಿಪುರಂನ ಸಂಬಂಧಿಗಳ ಮನೆಯಲ್ಲಿ ವಾಸವಿದ್ದನು. ಆದರೆ ತೃತೀಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಈತ ಹಲವು ಸೆಮಿಷ್ಟರ್ ಗಳ ಕೆಲವು ವಿಷಯಗಳಲ್ಲಿ ಫೇಲ್ ಆಗಿದ್ದನು. ತನಗೆ ಬೇಜಾರಾದಗಲೆಲ್ಲ ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದ ಈತನಿಗೆ ಚಾಮುಂಡಿಬೆಟ್ಟ ಅಂದ್ರೆ ತುಂಬಾ ಇಷ್ಟ. ಅದಕ್ಕಾಗಿ ಸೆಮಿಷ್ಟರ್ ಫೇಲ್ ಆಗಿದ್ದ ಸಂದೀಪ್ ಚಾಮುಂಡಿಬೆಟ್ಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಿನ್ನೆ ರಾತ್ರಿ ಚಾಮುಂಡಿ ಬೆಟ್ಟದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದ ಈತನನ್ನು ಕೂಡಲೇ ಚಾಮುಂಡಿಬೆಟ್ಟದ ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದರಿಂದ ವೈದ್ಯರ ಚಿಕಿತ್ಸೆಗೆ ಯಾವುದೇ ರೀತಿಯ ಸ್ಪಂದನೆ ನೀಡದಿರುವುದರಿಂದ ಆತ ಸಾಯುವುದಕ್ಕೂ ಮುನ್ನ ಸೆಮಿಸ್ಟರ್ ನಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾನೆ. ಅಷ್ಟೆ ಅಲ್ಲದೆ ಈ ವಿಚಾರವನ್ನು ಮನೆಯವರಿಗೆ ತಿಳಿಸಲು ಪ್ರಾಣ ಸ್ನೇಹಿತನ ಮೊಬೈಲ್ ನಂಬರ್ ಅನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.