News Kannada
Friday, July 01 2022

ಮೈಸೂರು

ನೀರನರಸಿ ಬರುವ ವನ್ಯಮೃಗಳು - 1 min read

Photo Credit :

ನೀರನರಸಿ ಬರುವ ವನ್ಯಮೃಗಳು

ಮೈಸೂರು: ಬೇಸಿಗೆ ಧಗೆ ತಡೆಯಲಾರದೆ ನಾವು ಫ್ಯಾನ್, ಎಸಿಗೆ ಮಾರು ಹೋಗುತ್ತಿದ್ದೇವೆ. ಈಗಾಗಲೇ ಹಲವೆಡೆ ನೀರಿಗೆ ಹಾಹಾಕಾರ ಆರಂಭವಾಗಿದೆ. ಹಳ್ಳಿಯಲ್ಲಿ ಜನ ನೀರಿಗಾಗಿ ಕಿ.ಮೀ.ಗಟ್ಟಲೆ ನಡೆಯುವಂತಾಗಿದೆ.


ಕಳೆದ ಬಾರಿ ಸಮರ್ಪಕವಾಗಿ ಮಳೆ ಬಾರದ ಕಾರಣ ನೀರಿನ ಸೆಲೆಗಳು ಬತ್ತಿವೆ. ಹೀಗಾಗಿ ಕೆಲವು ಅರಣ್ಯ ಪ್ರದೇಶಗಳಲ್ಲಿ ನೀರಿಗಾಗಿ ಕಾಡು ಪ್ರಾಣಿಗಳು ಕೂಡ ಅಲೆಯುವಂತಾಗಿದೆ. ಸಾಮಾನ್ಯವಾಗಿ ಕಾಡಿನ ನಡುವೆ ಚಿಕ್ಕಪುಟ್ಟ ತೊರೆ ಮತ್ತು ಕೆರೆಗಳಿರುತ್ತವೆ. ಆದರೆ ಅವುಗಳು ಬೇಸಿಗೆ ಬರುತ್ತಿದ್ದಂತೆಯೇ ಬತ್ತಿ ಹೋಗುತ್ತಿವೆ. ಇದರಿಂದಾಗಿ ದಾಹ ತೀರಿಸುವ ಸಲುವಾಗಿ ಕಾಡು ಪ್ರಾಣಿಗಳು ಕೂಡ ನೀರನ್ನು ಹುಡುಕಿಕೊಂಡು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನದ ಓಂಕಾರ ಅರಣ್ಯ ಪ್ರದೇಶದಲ್ಲಿ ಕುಡಿಯಲು ನೀರು ಹುಡುಕಿಕೊಂಡು ಆನೆ ಮತ್ತು ಹೆಬ್ಬುಲಿ ಸೇರಿದಂತೆ ಹಲವು ಪ್ರಾಣಿಗಳು ಕೆರೆಯತ್ತ ಬರುವುದು ಸಾಮಾನ್ಯವಾಗುತ್ತಿವೆ. ಹೀಗೆ ನೀರು ಕುಡಿಯಲು ಬರುವಾಗ ಒಂದಕ್ಕೊಂದು ಪ್ರಾಣಿಗಳು ಮುಖಾಮುಖಿಯಾಗುತ್ತವೆ.

ಹುಲಿ ಕೆರೆ ಬಳಿಯಿದ್ದರೂ ಆನೆಗಳು ಯಾವುದೇ ಭಯವಿಲ್ಲದೆ ನೀರು ಕುಡಿದು ಹೋಗುತ್ತವೆಯಾದರೂ ಇತರೆ ಪ್ರಾಣಿಗಳು ಮಾತ್ರ ಜೀವಭಯದಲ್ಲಿ ಬಂದು ನೀರುಕುಡಿಯುವುದು ಸರ್ವೇ ಸಾಮಾನ್ಯವಾಗಿದೆ. ಓಂಕಾರ ಅರಣ್ಯ ಪ್ರದೇಶದೊಳಗಿರುವ ಕೆರೆಯೊಂದರಲ್ಲಿ ನೀರಿದ್ದು ಇಲ್ಲಿ ನೀರು ಕುಡಿಯಲು ಬಹುತೇಕ ಪ್ರಾಣಿಗಳು ಬರುತ್ತಿವೆ. ಈ ದೃಶ್ಯಗಳು ಎಲ್ಲೆಡೆ ಈಗ ಹರಿದಾಡುತ್ತಿವೆ. ಆಸಕ್ತ ಛಾಯಾಗ್ರಾಹಕರು ಇಲ್ಲಿ ಬೀಡು ಬಿಟ್ಟು ಅಪರೂಪದ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾರೆ.

See also  ಕಾಂಗ್ರೆಸ್ ಎಲ್ಲಾ ವರ್ಗದವರಿಗೂ ಸೇರಿದ್ದು: ವೀರಪ್ಪ ಮೊಯ್ಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು