News Kannada
Tuesday, September 27 2022

ಮೈಸೂರು

ಆರ್‌ಎಸ್‌ಎಸ್‌ ಸ್ವಯಂಸೇವಕನ ಕೊಲೆ: ಇಂದು ಮೈಸೂರು ಬಂದ್ - 1 min read

Photo Credit :

 ಆರ್‌ಎಸ್‌ಎಸ್‌ ಸ್ವಯಂಸೇವಕನ ಕೊಲೆ: ಇಂದು ಮೈಸೂರು ಬಂದ್

ಮೈಸೂರು: ಬಿಜೆಪಿ ಮುಖಂಡನ ಬರ್ಬರ ಹತ್ಯೆಯನ್ನು ಖಂಡಿಸಿ ಮೈಸೂರು ಬಂದ್  ಕರೆ ನೀಡಿರುವ ಹಿನ್ನಲೆಯಲ್ಲಿ ಇಂದು ನಗರದಲ್ಲಿ ಭಾಗಶಃ ಬಂದ್ ಆಗಿದ್ದು, ಪ್ರತಿಭಟನೆ ವೇಳೆ 2 ಬಸ್ ಗಳಿಗೆ ಕಲ್ಲು ತೂರಾಟ ಸಹ ನಡೆದಿದ್ದು, ಪಿಯುಸಿ ಪರೀಕ್ಷೆಗೆ ಹೋಗಬೇಕಾದ ಮಕ್ಕಳು ಪರದಾಡುತ್ತಿದ್ದಾರೆ.

Mysuru reels under tension with BJP leader's killing-1
ನಿನ್ನೆ ಉದಯಗಿರಿಯ ಕ್ಯಾತಮಾರನಹಳ್ಳಿಯ ರಾಜು(36) ಬರ್ಬರ ಹತ್ಯೆ ಖಂಡಿಸಿ ಇಂದು ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಮೈಸೂರು ಬಂದ್ ಹಿನ್ನಲೆಯಲ್ಲಿ ನಗರದಾದ್ಯಂತ ಮಧ್ಯರಾತ್ರಿಯವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಕೂಡಲೇ ಹತ್ಯೆಗೆ ಕಾರಣರಾದವರನ್ನು ಬಂಧಿಸಬೇಕೆಂದು ಇಂದು ಹಿಂದೂಪರ ಸಂಘಟನೆಗಳು ನಗರ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಮೈಸೂರು ಮೃಗಾಲಯವನ್ನು ಬಂದ್ ಮಾಡಿಸಲಾಗಿದ್ದು ನಗರದ ಎಲ್ಲಾ ಕಡೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬೆಳ್ಳಗ್ಗೆ ದೂರದಿಂದ ದ್ವೀತಿಯ ಪಿಯುಸಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಬಂದ್ ಬಿಸಿಯಿಂದ ಪರೀಕ್ಷಾ ಕೇಂದ್ರಗಳಿಗೆ ಹೋಗಲಾಗದೆ ಬಸ್ ನಿಲ್ದಾಣದಲ್ಲಿ ಪರದಾಡಿದ್ದು ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಿಂದ ಪರೀಕ್ಷೆಗೆ ತೆರಳಿದ್ದಾರೆ.

ಶವಾಗಾರದಲ್ಲಿ ಹೈಟೆನ್ಷನ್
ಮೃತ ಬಿಜೆಪಿ ಮುಖಂಡನ ಶವ ನಗರದ ಕೆ.ಆರ್ ಆಸ್ಪತ್ರೆಯ ಶವಾಗಾರದಲ್ಲಿ ಇಂದು ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಿದ್ದು ಆಸ್ಪತ್ರೆಯ ಸುತಾ ಮುತ್ತಾ ಸಂಚಾರ್ ನಿಷೇಧಿಸಿ ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ. ಇನ್ನೂ ಮೃತರ ಶವ ಇರುವ ಸ್ಥಳಕ್ಕೆ ಬಿಜೆಪಿಯ ಸಂಸದ ಪ್ರತಾಪ್ ಸಿಂಹ, ಸಿಟಿ ರವಿ ಸೇರಿದಂತೆ ಮುಂತಾದ ಮುಖಂಡರು ಭೇಟಿ ನೀಡಿ ಪೊಲೀಸರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜು ಹಾಗೂ ಆತನ ಸ್ನೇಹಿತ ಜಯಕುಮಾರ್‌ ಎಂಬಿಬ್ಬರು ಭಾನುವಾರ ಸಂಜೆ ಉದಯಗಿರಿ ಬಡಾವಣೆಯ ವಿನಾಯಕ ಟೀ ಸ್ಟಾಲ್‌ನಲ್ಲಿ ಟೀ ಕುಡಿಯುತ್ತಿದ್ದರು. ಈ ವೇಳೆ ಬೈಕ್‌ಗಳಲ್ಲಿ ಬಂದ ನಾಲ್ಕಾರು ಜನ ದುಷ್ಕರ್ಮಿಗಳ ಗುಂಪು ಮಚ್ಚು, ಲಾಂಗುಗಳಿಂದ ಮನಬಂದಂತೆ ಕೊಚ್ಚಿ ಪರಾರಿಯಾಗಿದೆ. ದಾಳಿಯ ಪರಿಣಾಮ ರಾಜು ಅವರ ತಲೆ ಸಂಪೂರ್ಣ ಛಿದ್ರವಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ದೇವಸ್ಥಾನದಲ್ಲಿ ಮೂರ್ತಿ ಸ್ಥಾಪನೆ ಸಂಬಂಧ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕೊಲೆ ಘಟನೆ ಬಳಿಕ ಉದಯಗಿರಿ ಹಾಗೂ ಕ್ಯಾತಮಾರನಹಳ್ಳಿ ಬಡಾವಣೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶವಾಗಾರದ ಮುಂಭಾಗದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಮುನ್ನೆಚ್ಚರಿಕೆ ಇದ್ದರೂ ಪೊಲೀಸರಿಂದ ಸೂಕ್ತ ರಕ್ಷಣೆ ಸಿಗಲಿಲ್ಲ ಎಂದು ಪೊಲೀಸ್ ಆಯುಕ್ತ ದಯಾನಂದ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಶವ ವೀಕ್ಷಿಸಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದು ತಳ್ಳಾಟ ನಡೆಸಿದ್ದಾರೆ.  ಬಿಜೆಪಿ ಪಕ್ಷ, ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದ ರಾಜು, ಸಣ್ಣಪುಟ್ಟ ಗಲಾಟೆಗಳಲ್ಲೂ ಭಾಗಿಯಾಗಿದ್ದ. ಹಳೆ ವೈಷಮ್ಯದಿಂದಾಗಿ ಉದಯಗಿರಿ ಬಡಾವಣೆಯ ನೇತಾಜಿ ವೃತ್ತದ ಟೀ ಅಂಗಡಿ ಬಳಿ ನಿಂತಿದ್ದಾಗ ರಾಜುನನ್ನು ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದರು.   

See also  ನೋಟು ರದ್ದಾಗುವ ವಿಚಾರ ಮೊದಲೇ ರಾಮದಾಸ್ ಗೆ ಗೊತ್ತಿತ್ತೆ: ಮಾಜಿ ಸಚಿವ ವಿಶ್ವನಾಥ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು