News Kannada
Wednesday, October 05 2022

ಮೈಸೂರು

ಪ್ರಮೋದ್ ಮುತಾಲಿಕ್ ಗೆ ಮೈಸೂರು ಪ್ರವೇಶ ನಿರ್ಬಂಧ - 1 min read

Photo Credit :

ಪ್ರಮೋದ್ ಮುತಾಲಿಕ್ ಗೆ ಮೈಸೂರು ಪ್ರವೇಶ ನಿರ್ಬಂಧ

ಮೈಸೂರು:  ಶ್ರೀರಾಮ ಸೇನೆ ಕಾರ್ಯಕರ್ತ ರಾಜುವಿನ ಸಂತಾಪ ಸೂಚನ ಸಭೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ 10 ದಿನಗಳ ಕಾಲ ಮೈಸೂರು ಪ್ರವೇಶಿಸಿದಂತೆ ನಿರ್ಬಂಧ ಹೇರಿ ಬೆಂಗಳೂರಿನ ಬಸ್ ನಿಲ್ದಾಣದಲ್ಲೇ ಮೈಸೂರು ಪೊಲೀಸರು ನೋಟಿಸ್ ನೀಡಿದ್ದಾರೆ.

ಇಂದು ಎನ್.ಆರ್ ಮೊಹಲ್ಲಾದಲ್ಲಿ ಆಯೋಜಿಸಿದ್ದ ಶ್ರೀರಾಮ ಸೇನೆಯ ಅಪ್ಪಟ ಬೆಂಬಲಿಗ ರಾಜು ನಿಧನ ಸ್ಮರಾಣಾರ್ಥ ಸಂತಾಪ ಸೂಚನಾ ಸಭೆಯಲ್ಲಿ ಭಾಗವಹಿಸಲು ಪ್ರಮೋದ್ ಮುತಾಲಿಕ್ ಆಗಮಿಸಲಿದ್ದರು. ಆದರೆ ಮೈಸೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರಾತ ಕ್ರಮವಾಗಿ ಜಿಲ್ಲಾಧಿಕಾರಿ ಸಿ.ಶಿಖಾ ಹಾಗೂ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರ ಸೂಚನೆ ಮೆರೆಗೆ ವಿದ್ಯಾರಣ್ಯಪುರಂ ಪೊಲೀಸರು ಪ್ರಮೋದ್ ಮುತಾಲಿಕ್ ಗೆ ನೋಟಿಸ್ ನೀಡಿದ್ದಾರೆ.

ನಿನ್ನೆ ರಾಯಾಚೂರಿನಿಂದ ಹೊರಟು ಇಂದು ಮುಂಜಾನೆ ಬೆಂಗಳೂರಿನ ಕೇಂಪೆಗೌಡ ಬಸ್ ನಿಲ್ದಾಣಕ್ಕೆ ಬಂದಿಳಿದ ಪ್ರಮೋದ್ ಮುತಾಲಿಕ್ ಅವರನ್ನು ಭೇಟಿ ಮಾಡಿದ ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 10 ದಿನಗಳ ಕಾಲ ಮೈಸೂರಿಗೆ ಬಾರದಂತೆ ನಗರ ಪ್ರವೇಶ ನಿಷೇಧಿಸಿರುವುದಾಗಿ ಹೇಳಿ ನೋಟಿಸ್ ನೀಡಿದ್ದಾರೆ.

See also  ನಂಜನಗೂಡಿನಲ್ಲಿ ಕನಕ ಸಮುದಾಯಭವನ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು