News Kannada
Wednesday, October 05 2022

ಮೈಸೂರು

ಈ ಬಾರಿ ರಾಜ್ಯಕ್ಕೆ ಭೀಕರ ಬರ: ನಂಜುಂಡೇಶ್ವರನ ಭವಿಷ್ಯ - 1 min read

Photo Credit :

ಈ ಬಾರಿ ರಾಜ್ಯಕ್ಕೆ ಭೀಕರ ಬರ: ನಂಜುಂಡೇಶ್ವರನ ಭವಿಷ್ಯ

ಮೈಸೂರು: ದಕ್ಷಣಾಕಾಶಿಗೆ ನಂಜುಂಡೇಶ್ವರನ ಪಂಚ ರಥೋತ್ಸವದ ಸಂದರ್ಭದಲ್ಲಿ ಒಂದು ಹನಿ ಮಳೆಯಾದರೂ ಭೂಮಿಗೆ ಬೀಳ ಬೇಕು. ಇಲ್ಲದಿದ್ದರೆ ಆ ವರ್ಷ ರಾಜ್ಯಕ್ಕಿ ಭೀಕರ ಬರಗಾಲ ಎನ್ನುವುದು ನಂಜನಗೂಡು ನಂಜುಂಡೇಶ್ವರನ ಭವಿಷ್ಯ.


ನಂಜನಗೂಡಿನ ನಂಜುಂಡೇಶ್ವರನ ಗೌತಮ ಪಂಚಮಹಾರಥೋತ್ಸವ ಮುಂಜಾನೆ 6.8 ರಿಂದ 6.30 ಶುಭ ಮೀನಾ ಲಗ್ನದಲ್ಲಿ ನಡೆದ ಪಂಚ ರಥೋತ್ವದಲ್ಲಿ ಲಕ್ಷಾಂತರ ಮಂದಿ ದೇಶ-ವಿದೇಶಗಳಿಂದ ಬಂದಿದ್ದ ಲಕ್ಷಾಂತರ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ಆದರೆ ನೂರಾರು ವರ್ಷದ ಇತಿಹಾಸದ  ಹಿನ್ನಲೆ ಇರುವ ಈ ರಥೋತ್ಸವದ ಸಂದರ್ಭದಲ್ಲಿ ಮಳೆ ಹನಿ ಹಾಕಲೇ ಬೇಕು. ಇಲ್ಲದಿದ್ದರೆ ಆ ವರ್ಷ ರಾಜ್ಯವನ್ನು ಭೀಕರ ಬರಗಾಲ ಕಾಡಲಿದೆ ಎಂಬ ಮನ್ಸೂಚನೆಯಾಗಿದೆ. ಅದರಂತೆ ಈ ಬಾರಿ ರಥೋತ್ಸವ ಸಂದರ್ಭದಲ್ಲಿ ಬಿರು ಬಿಸಿಲು ಬರಗಾಲ ಭವಿಷ್ಯವನ್ನು ತೋರಿಸಿದೆ.

ದೇವಾಲಯದ ಹಿರಿಯ ಅರ್ಚಕರೊಬ್ಬರು ಹೇಳುವಂತೆ ಕಪಿಲಾ ನದಿಯ ತಟದ ಮೇಲೆ ಇರುವ ಈ ದಕ್ಷಿಣಾ ಕಾಶಿಯ ನಂಜುಂಡೇಶ್ವರನ ಸನ್ನಿಧಿಯಲ್ಲಿ ನಡೆಯುವ ರಥೋತ್ಸವ ತುಂಬಾ ಇತಿಹಾಸದ ಹಿನ್ನಲೆಯುಳ್ಳದ್ದು ಹಿಂದೆಯೆಲ್ಲಾ ಮಳೆಯಲ್ಲೇ ರಥ ಎಳೆದು ಪುಳಕಿತರಾಗುತ್ತಿದ್ದರು. ಆದರೆ ಕಳೆದ ಎರಡು ಮೂರು ವರ್ಷಗಳಿಂದ ಮಳೆಯಾಗುತ್ತಿಲ್ಲ. ಇದು ಮುಂದೆ ಬರಗಾಲ ಬರುವುದು ಎಂದು ಎಂಬ ಸೂಚನೆ ಸತ್ಯ ಎಂದು ತಮ್ಮ ಹಿಂದಿನ ನೆನಪುಗಳನ್ನು ಮೆಲಕು ಹಾಕಿದರು.

ಹಲವಾರು ಅವಘಡಗಳಿಂದ ಕಳೆದ 2 ವರ್ಷಗಳಿಂದ ಹಲವಾರು ರೀತಿಯಲ್ಲಿ ಕೆಟ್ಟದಾಗಿ ಸುದ್ದಿಯಾಗಿದ್ದ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ ಕೇರಳದ ತಂತ್ರಿಗಳ ಸಲಹೆಯಂತೆ ಅಷ್ಟ ಮಂಗಳ ಪೂಜೆ ಮಾಡಿದ ಮೇಲೆ ರಥೋತ್ಸವದ ಸಂದರ್ಭದಲ್ಲಿ ನಡೆಯುತ್ತಿದ್ದ ಅವಘಡಗಳು ಈ ಬಾರಿ ಸಂಭವಿಸುವುದು ತಪ್ಪಿದೆ. ಅಲ್ಲದೆ ದೇವಾಲಯ ಗೋಪುರ ಸಮಸ್ಯೆ ಸಹ ಬಗೆಹರಿಸಿದಿದ್ದು, ಮಘಾ ಮಾಸದ ಗೌತಮ ಪಂಚಮಿ ರಥೋತ್ಸವ ಅಷ್ಟಮಂಗಳ ಪೂಜೆಯಿಂದ ಯಾವುದೇ ಅವಘಡವಾಗದಂತೆ ಸರಾಗಿವಾಗಿ ನಡೆದಿದೆ.

See also  ಸುಳ್ವಾಡಿ ಪ್ರಕರಣ: ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು