News Kannada
Friday, October 07 2022

ಮೈಸೂರು

ಜನಪ್ರತಿನಿಧಿಗಳ ಕಿರುಕುಳಕ್ಕೆ ಬೇಸತ್ತ ಪಿಡಿಓ ಮಂತ್ರಾಲಯಕ್ಕೆ ಪ್ರಯಾಣ - 1 min read

Photo Credit :

ಜನಪ್ರತಿನಿಧಿಗಳ ಕಿರುಕುಳಕ್ಕೆ ಬೇಸತ್ತ ಪಿಡಿಓ ಮಂತ್ರಾಲಯಕ್ಕೆ ಪ್ರಯಾಣ

ಮೈಸೂರು:  ಜನಪ್ರತಿನಿಧಿಗಳ ಕಿರುಕುಳದಿಂದ ಬೇಸತ್ತ ಗ್ರಾಮ ಪಂಚಾಯಿತಿ ಮಹಿಳಾ ಪಿಡಿಓವೊಬ್ಬರು ಮಂತ್ರಾಲಯಕ್ಕೆ ಹೊರಟ ವಿಚಿತ್ರ ಘಟನೆ ಮೈಸೂರಿನ ಕಡಕೊಳ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

Harassed by politicians, PDO goes to Mantralaya in pursuit of peace!-1ಮೈಸೂರು ಜಿಲ್ಲೆಯ ಕಡಕೊಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮ ಎಂಬುವವರು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಇದರಿಂದ ಆತಂಕಗೊಂಡ ಕುಟುಂಬದವರು ಈ ವಿಷಯವನ್ನು ಜಿಲ್ಲಾ ಪಂಚಾಯತ್ ಸಿಇಓ ಗೋಪಾಲ್ ಅವರಿಗೆ ತಿಳಿಸಲಾಗಿ ಅವರು ಹುಡುಕಾಟ ನಡೆಸಿದ್ದರು.

ಈ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ಕಿರುಕುಳದಿಂದ ಬೇಸತ್ತ ಪೂರ್ಣಿಮ ಬೇರೆ ದಾರಿ ಕಾಣದೇ ಮಂತ್ರಾಲಯಕ್ಕೆ ಹೋಗಿದ್ದಾಗಿ ತಿಳಿಸಿದ್ದಾರೆ. ಈ ವಿಷಯ ತಿಳಿದ ಜಿಲ್ಲಾ ಪಂಚಾಯಿತಿ ಸಿಇಓ ಮತ್ತೆ ಕರ್ತವ್ಯದಲ್ಲಿ ಮುಂದುವರೆಯುವಂತೆ ತಿಳಿಸಿದ್ದು, ಜನಪ್ರತಿನಿಧಿಗಳು ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಇಲ್ಲಿ ವಾಟರ್ ಮ್ಯಾನ್ ಆಗಿದ್ದ ಗಂಗರಾಜು ಎಂಬುವವರಿಗೆ ಕೆಲ ದಿನಗಳ ಹಿಂದೆಯಷ್ಟೇ ನಿವೃತ್ತ ಅವಧಿ 60 ವರ್ಷ ಮುಗಿದಿದೆ. ಅದರಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಪೂರ್ಣಿಮ ಅವರಿಗೆ ನಿವೃತ್ತಿ ನೀಡಿ ಕೆಲಸದಿಂದ ಮುಕ್ತಿ ನೀಡಿದ್ದಾರೆ.

ಆದರೆ ಗಂಗರಾಜು ನನ್ನ ನಂತರ ನನ್ನ ಮಗನಿಗೆ ವಾಟರ್ ಮ್ಯಾನ್ ಕೆಲಸ ನೀಡಬೇಕೆಂದು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಜನರನ್ನು ಸೇರಿಸಿ ಗಲಾಟೆ ಮಾಡಿದ್ದಾರೆ. ಅಲ್ಲದೆ ಮಾರ್ಚ್ 22 ರಂದು ಗ್ರಾಪಂ ನ ಸಾಮಾನ್ಯ ಸಭೆಯಲ್ಲಿ ಈ ವಿಚಾರವಾಗಿ ಗದ್ಧಲವಾಗಿ ಎಲ್ಲರ ಸಮ್ಮುಖದಲ್ಲೇ ಲೋಕೇಶ್ ಎಂಬ ವ್ಯಕ್ತಿ ಮಹಿಳಾ ಪಿಡಿಓ ಪೂರ್ಣಿಮಾಗೆ ಅನುಚಿತವಾಗಿ ಅಸಭ್ಯ ರೀತಿಯಲ್ಲಿ ಬೈದು ನಿಂದಿಸಿದ್ದಾನೆ ಎನ್ನಲಾಗಿದೆ.
 
ಇದರಿಂದ ಬೇಸರಗೊಂಡ ಮಹಿಳಾ ಪಿಡಿಓ ಮನನೊಂದು ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಸಹ ದೂರನ್ನು ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಇದರಿಂದ ಬೇಸರಗೊಂಡ ಪಿಡಿಓ ಪೂರ್ಣಿಮ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮನೆಗೂ ಹೇಳದ ಹಾಗೆ ಸಮಸ್ಯೆ ಬಗೆಹರಿಸಿ ಮನಕ್ಕೆ ಶಾಂತಿ ಸಿಗಲಿ ಎಂದು ಮಂತ್ರಾಲಯಕ್ಕೆ ಹೋಗಿದ್ದಾರೆ.

ಆದರೆ ಪೂರ್ಣಿಮ ಮನೆಗೆ ಬಾರದಿರುವುದಕ್ಕೆ ಗಾಬರಿಗೊಂಡ ಮನೆಯವರು ಈ ವಿಚಾರವನ್ನು ಜಿಲ್ಲಾ ಪಂಚಾಯಿತಿ ಸಿಇಓ ಗೋಪಾಲ್ ಅವರಿಗೆ ತಿಳಿಸಿ ಕೊನೆಗೆ 2 ದಿನಗಳ ಬಳಿಕ ಮರಳಿದ ಪೂರ್ಣಿಮ ಅವರಿಗೆ  ಸಮಾಧಾನ ಹೇಳಿ ಮತ್ತೆ ಅಲ್ಲೇ ಕೆಲಸದಲ್ಲಿ ಮುಂದುವರೆಯುವಂತೆ ಸಲಹೆ ನೀಡಿದ್ದಾರೆ.  ವಿಶೇಷವೆನೆಂದರೆ ದಕ್ಷ, ಪ್ರಾಮಾಣಿಕ ಪಿಡಿಓ ಪೂರ್ಣಿಮ ಜಿಲ್ಲಾ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷೆ ಸಹ ಆಗಿದ್ದು, ಅಂತಹವರಿಗೆ ಕಿರುಕುಳುವಾದರೆ ಇನ್ನು ಸಾಮಾನ್ಯ ನೌಕರರ ಗತಿಯೇನು ಎಂಬುದರ ಚರ್ಚೆಗೆ ಸಭೆಯೊಂದನ್ನು ನೌಕರರು ನಿರ್ಧರಿಸಿದ್ದಾರೆ.

See also  ದಸರಾ ಜಂಬೂಸವಾರಿಗೆ ಡ್ರೋಣ್ ಕ್ಯಾಮರಾದ ಹದ್ದಿನಕಣ್ಣು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು