News Kannada
Saturday, October 01 2022

ಮೈಸೂರು

ವಕ್ಸ್ ಆಸ್ತಿಪಾರಭಾರೆಯಲ್ಲಿ ಖರ್ಗೆ ಹೆಸರು ಉಲ್ಲೇಖ: ಈಶ್ವರಪ್ಪ - 1 min read

Photo Credit :

ವಕ್ಸ್ ಆಸ್ತಿಪಾರಭಾರೆಯಲ್ಲಿ ಖರ್ಗೆ ಹೆಸರು ಉಲ್ಲೇಖ: ಈಶ್ವರಪ್ಪ

ಮೈಸೂರು: ವಕ್ಸ್ ಆಸ್ತಿ ಪರಭಾರೆ ಹಗರಣದ ಬಗ್ಗೆ ವರದಿ ಸಲ್ಲಿಸಿರುವ ಅನ್ವರ್ ಮಾನ್ಪಡೆ ವರದಿಯಲ್ಲಿ ಕಾಂಗ್ರೆಸ್ ಕೇಂದ್ರ ನಾಯಕ ಮಲ್ಲಿಕಾರ್ಜುನ ಅವರ ಹೆಸರು ಪ್ರಮುಖವಾಗಿರುವುದರಿಂದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಹೊಸಬಾಂಬ್ ಸಿಡಿಸಿದ್ದಾರೆ.

ಇಂದು ಮೈಸೂರಿನಲ್ಲಿ ದಕ್ಷಿಣ ಪಧವೀದರರ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿರುವ ಈಶ್ವರಪ್ಪ ಮೈಸೂರಿನ ಖಾಸಗಿ ಹೊಟೇಲ್ ನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿ ಸಿಎಂ ಸಿದ್ಧರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಭೇಟಿಯಾಗಿ ಇಬ್ಬರು ಒಳ ಒಪ್ಪಂದ ಮಾಡಿಕೊಂಡಿದ್ದು ಸಾವಿರಾರು ಎಕರೆ ವಕ್ಸ್ ಆಸ್ತಿ ಲಪಟಾಯಿಸಿದ ಹಗರಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಅನ್ವರ್ ಮಾನಪಡೆ ವರದಿಯಲ್ಲಿ ಉಲ್ಲೇಖವಾಗಿದ್ದು, ವರದಿ ಏನಾದರೂ ವಿಧಾನಸಭೆಯಲ್ಲಿ ಮಂಡನೆಯಾದರೆ ಖರ್ಗೆ ತೊಂದರೆಯಾಗುವುದರಿಂದ ಇದನ್ನು ಮುಚ್ಚಿಕೊಳ್ಳಲು ಸಿಎಂ ಸಿದ್ಧರಾಮಯ್ಯ ಟೀಕೆಗಳಿಂದ ಹಾಗೂ ವಿರೋಧದ ನಡುವೆಯು ಎಸಿಬಿ ರಚನೆಗೆ ಮುಂದಾಗಿರುವುದರಿಂದ ಖರ್ಗೆ ವಿರೋದಿಸುತ್ತಿಲ್ಲ. ಇದು ಸಿಎಂ ಸಿದ್ದು ಖರ್ಗೆ ನಡುವಿನ ಒಳ ಒಪ್ಪಂದವೆಂದು ಹೊಸಬಾಂಬ್ ಹಾಕಿದ್ದಾರೆ.

ವಕ್ಸ್ ಆಸ್ತಿ ಪರಭಾರೆಯ ಬಗ್ಗೆ ರಾಜ್ಯ ಪಾಲರು ಸರ್ಕಾರದಿಂದ ವರದಿ ಪಡೆದುಕೊಂಡಿದ್ದು, ವರದಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು ಸರ್ಕಾರಕ್ಕೆ ಹಾಗೂ ಕೆಲವು ಕಾಂಗ್ರೆಸ್ ನ ಹಿರಿಯ ನಾಯಕರ ನಿಜ ಬಣ್ಣ ಬಯಲಾಗಲಿದೆ ಎಂದು ಈಶ್ವರಪ್ಪ ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಅತಂತ್ರ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಗಳಲ್ಲಿ ಜೆಡಿಎಸ್ ಜತೆಗಿನ ಮೈತ್ರಿಗೆ ಬಿಜೆಪಿ ಮುಕ್ತವಾಗಿದ್ದು, ಈ ಸಂಬಂಧ ಒಂದು ಸುತ್ತಿನ ಮಾತುಕತೆಯನ್ನು ಜೆಡಿಎಸ್ ವರಿಷ್ಟ ಹೆಚ್.ಡಿ ದೇವೇಗೌಡರೊಂದಿಗೆ ನಡೆದಿದ್ದು ಜೆಡಿಎಸ್ ನ ನಿಲುವಿಗಾಗಿ ಕಾಯುತ್ತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

See also  ಜಮೀರ್‌ ಬಂಧನ ಯಾಕಾಗಿಲ್ಲ:  ಸಂಸದ ಪ್ರತಾಪ್‌ ಸಿಂಹ ಪ್ರಶ್ನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು