News Kannada
Wednesday, October 05 2022

ಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ ಯುಗಾದಿ ಸ್ಪೇಷಲ್ - 1 min read

Photo Credit :

ಸಾಂಸ್ಕೃತಿಕ ನಗರಿಯಲ್ಲಿ ಯುಗಾದಿ ಸ್ಪೇಷಲ್

ಮೈಸೂರು:  ಯುಗ ಯುಗನೇ ಕಳೆದರೂ ಯುಗಾದಿ ಮರಳಿ ಬರುತ್ತಿದ್ದ ನವ ವಸಂತ ಮರಳಿ ಬಂದಿದ್ದು ಎಲ್ಲೆಲ್ಲೂ ಹೊಸ ಚಿಗುರು ಹೊಸ ಕನಸುಗಳು ಹರಳಿವೆ. ಅದರಂತೆ ಸಾಂಸ್ಕೃತಿಕ ನಗರಿ ನವ ಯುಗಾದಿಯ ಸಂವತ್ಸರಕ್ಕೆ ಎಲ್ಲಾ ರೀತಿಯ ತಯಾರಿ ನಡೆಸಿದ್ದು ಬೆಲೆ ಏರಿಕೆಯ ಬಿಸಿ ನಡುವೆಯೂ ಅಗತ್ಯ ವಸ್ತುಗಳ ಖರೀದಿ ಜೋರಾಗಿದೆ.


ನಗರದ ದೇವರಾಜ ಮರುಕಟ್ಟೆಯಲ್ಲಿ ಜನ ಜಂಗುಳಿಯೇ ನೆರೆದಿದ್ದು ಹಬ್ಬಕ್ಕೆ ಬೇಕಾದ ಬೇವು-ಮಾವಿನ ಸೊಪ್ಪು ಹಾಗೂ ಹೂ-ಹಣ್ಣು ಖರೀದಿಯೂ ಸಹ ಜೋರಾಗಿದೆ. ಆ ಮೂಲಕ ಯುಗಾದಿ ಹಬ್ಬಕ್ಕೆ ಹೆಚ್ಚಿನ ರಂಗು ತಂದುಕೊಟ್ಟಿದೆ.

ಚಾಮುಂಡಿ ಬೆಟ್ಟದಲ್ಲೂ ವಿಶೇಷ ಪೂಜೆ…
ನಾಡ ಅಧಿದೇವತೆ ಚಾಮುಂಡಿ ತಾಯಿಯ ಸನ್ನಿಧಿಯಲ್ಲೂ ಸಹ ಬೆಳ್ಳಗ್ಗೆಯಿಂದ ಸಂಜೆವರೆಗೂ ವಿಶೇಷ ಪೂಜೆ ಅರ್ಚನೆ ನಡೆಯುತ್ತಿದ್ದು, ಸಾವಿರಾರು ಭಕ್ತರು ತಾಯಿಯ ದರ್ಶನ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ನಗರದ ವಿವಿಧ ದೇವಾಲಯಗಳಲ್ಲೂ ವಿಶೇಷ ಪೂಜೆ ಅರ್ಚನೆ, ಅಭಿಷೇಕದಂತಹ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ವರ್ಷವೆಂದೆ ಬಿಂಬಿಸಲ್ಪಡುವ ಯುಗಾದಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಅಲ್ಲದೆ ಹಲವೆಡೆ ಜಾತ್ರೆ ಸಹ ನಡೆಯಲಿದ್ದು ವಿಶೇಷ ಸಿಹಿ ತಿನಿಸುಗಳನ್ನು ಮಾಡಿ ಹೊಸ ವರ್ಷವನ್ನು ಸಿಹಿ ಮೂಲಕ ಗ್ರಾಮೀಣ ಸೊಗಡಿನಲ್ಲಿ ಬರ ಮಾಡಿಕೊಳ್ಳುವುದು ಹಳ್ಳಿ ಜಾನಪದ ಶೈಲಿ ಹಬ್ಬವಾಗಿದೆ.

See also  ಸಿದ್ದರಾಮಯ್ಯನವರದು ರೈತ ವಿರೋಧಿ ಸರ್ಕಾರ: ಬಿಎಸ್ವೈ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು