News Kannada
Friday, September 30 2022

ಮೈಸೂರು

ಕಿರಾತಕನಿಂದ ಮಹಿಳೆಗೆ ಟಾರ್ಚರ್: ನ್ಯಾಯಕ್ಕಾಗಿ ಹೋರಾಟ - 1 min read

Photo Credit :

ಕಿರಾತಕನಿಂದ ಮಹಿಳೆಗೆ ಟಾರ್ಚರ್: ನ್ಯಾಯಕ್ಕಾಗಿ ಹೋರಾಟ

ಮೈಸೂರು:  ಕಿರಾತಕನೊಬ್ಬ ಮಹಿಳೆಗೆ ಟಾರ್ಚರ್ ನೀಡುತ್ತಿದ್ದು, ಇದರಿಂದ ಬಿಡುಗಡೆ ನೀಡಬೇಕೆಂದು ಮಹಿಳೆ ಪೊಲೀಸ್ ಮೆಟ್ಟಿಲೇರಿದ ಘಟನೆ ಮೈಸೂರಿನಲ್ಲಿ ನಡೆದಿದೆ.

15 ವರ್ಷದ ಹಿಂದೆ ಎಸ್ಎಸ್ಎಲ್ ಸಿ ಓದುತ್ತಿದ್ದ ಬಾಲಕಿಯನ್ನು ಕಾಲೇಜು ವಿದ್ಯಾಭ್ಯಾಸ ಕೊಡಿಸುವುದಾಗಿ ಪುಸಲಾಯಿಸಿ ಖಾಸಗಿ ಹೊಟೇಲ್ ಗೆ ಕರೆದೋಯ್ದು ಆಕೆಯನ್ನು ವೇಶ್ಯಾವಾಟಿಕೆಗೆ ದೂಡಿ ಮಾರಾಟ ಮಾಡಲು ಯತ್ನಿಸಿದ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ ವಕ್ರದೃಷ್ಟಿ ಅಂದಿನಿಂದ ಈ ಹೆಣ್ಣಿನ ಮೇಲೆ ಬಿದ್ದಿದೆ.

ಅದೃಷ್ಟವಶಾತ್ ಅಂದು ಸ್ಯಾಂಟ್ರೋ ರವಿ ಮಾನವ ಸಾಗಾಣೆ ನಡೆಸುತ್ತಿರುವ ವಿಚಾರ ತಿಳಿದು ದಾಳಿ ನಡೆಸಿ ಓಡನಾಡಿ ಸೇವಾಸಂಸ್ಥೆ ಅಂದು ಅಪ್ರಾಪ್ತೆಯಾಗಿದ್ದ ಈಕೆಯನ್ನು ರಕ್ಷಿಸಿದ್ದು, ಚಾಲಾಕಿ ಸ್ಯಾಂಟ್ರೋರವಿ ಪರಾರಿಯಾಗಿದ್ದನು. ಅಂದಿನಿಂದ ಒಡನಾಡಿ ಆಶ್ರಯ ಪಡೆದಿದ್ದ, ಈಕೆಗೆ ಕೆಲ ತಿಂಗಳ ಬಳಿಕ ಮತ್ತೆ ಟಾರ್ಚರ್ ನೀಡಲು ಮುಂದಾದ ಸ್ಯಾಂಟ್ರೋ ರವಿ ಪರಿಚಿತನಂತೆ ಹಾಗೂ ಮುಗ್ಧನಂತೆ ವರ್ತಿಸಿ ಈಕೆಯ ಜತೆ ಮತ್ತೆ ಗೆಳೆತನ ಬೆಳೆಸಿದ್ದಾನೆ. ಆದರೆ ಇದಾದ ಬಳಿಕ ಏಳು ವರ್ಷದ ಹಿಂದೆ ಈಕೆ ಹಿರಿಯ ಪೊಲೀಸ್ ಅಧಿಕಾರಿ ಪುತ್ರನೊಂದಿಗೆ ವಿವಾಹವಾಗಿದ್ದು ಸದ್ಯಕ್ಕೆ ಎರಡು ಮಕ್ಕಳ ತಾಯಿಯೂ ಆಗಿದ್ದಾರೆ.
 
ಮೂರು ವರ್ಷದಿಂದ ಮತ್ತೆ ಟಾರ್ಚರ್
ಕಳೆದ ಮೂರು ವರ್ಷದಿಂದ ಮತ್ತೆ ತನಗೆ ಟಾರ್ಚರ್ ಆರಂಭಿಸಿರುವ ಸ್ಯಾಂಟ್ರೋ ರವಿ ನಾನಾ ರೀತಿಯ ಟಾರ್ಚರ್ ಗಳನ್ನು ನೀಡುತ್ತಾ ಮರಳಿ ತನ್ನೊಟ್ಟಿಗೆ ಬರುವಂತೆ ಒತ್ತಾಯಿಸಿದ್ದಾನೆ. ಅಲ್ಲದೆ ಗಂಡನನ್ನು ಬಿಟ್ಟುಬಿಡು ನಾನೇ ನಿನ್ನನ್ನು ವಿವಾಹವಾಗುತ್ತೇನೆ. ನಿನ್ನ ಮಕ್ಕಳ ಹೆಸರಿಗೆ 10 ಲಕ್ಷ ಹಣವನ್ನು ಠೇವಣಿ ಇಡುತ್ತೇನೆ. ಕಾರು-ಬಂಗಲೆಯಲ್ಲಿ ನಿನ್ನನ್ನೂ ಹೂವಿನ ರೀತಿಯಲ್ಲಿ ನೋಡಿಕೊಳ್ಳುತ್ತೇನೆ ಎಂಬ ಆಮಿಷಗಳನ್ನು ಒಡ್ಡಿದ್ದಾನೆ.
ಆದರೆ ಈತನ ಬಗ್ಗೆ ತಿಳಿದಿದ್ದ ಮಹಿಳೆಯ ಈತನನ್ನು ಅಷ್ಟೇ ನಾಜುಕಾಗಿ ನಿರಾಕರಿಸಿದ್ದಾಳೆ. ಅಂದಿನಿಂದ ಟಾರ್ಚರ್ ನೀಡಲು ಮುಂದಾಗಿರುವ ಸ್ಯಾಂಟ್ರೋರವಿ ಗೌರಿಬಿದಿನೂರಿನಲ್ಲಿ ಸಣ್ಣದೊಂದು ಪೆಟ್ಟಿಗೆ ಅಂಗಡಿ ನಡೆಸುತ್ತಿರುವ ಸಂತ್ರೆಸ್ತೆ ಮಹಿಳೆಯ ತಾಯಿಯ ಮೇಲೆ ಗಾಂಜಾ ಮಾರುತ್ತಿದ್ದಾರೆ ಎಂದು ಸ್ಥಳೀಯರೊಬ್ಬರಿಂದ ಸುಳ್ಳುಧಾವೆ ದಾಖಲಿಸಿ ಠಾಣೆಗೆ ಅಲೆಸುತ್ತಿದ್ದಾನೆ.

ಅಷ್ಟೇ ಅಲ್ಲದೆ ಈಕೆ ಗರ್ಭೀಣಿಯಾಗಿದ್ದಗಲೂ ಸಹ ಈಕೆಯ ಮೇಲೆ ಹಿಂದುಳಿದ ಜಾತಿಯ ವ್ಯಕ್ತಿಯೊಬ್ಬರಿಂದ ಜಾತಿ ನಿಂದನೆ ಕೇಸ್ ದಾಖಲಿಸಿ ಐದು ದಿನ ಸಂತ್ರಸ್ತ ಮಹಿಳೆ ಠಾಣೆಯಲ್ಲಿ ಬಂಧಿಯಾಗುವಂತೆ ಮಾಡಿದ್ದಾನೆ. ಈತನ ನಡೆಗೆ ವಿರೋಧ ವ್ಯಕ್ತಪಡಿಸಿರುವ ಸಂತ್ರಸ್ತೆಯ ಗಂಡ, ಅತ್ತೆ, ಮಾವನ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿ ಅವರು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದಾನೆ. ಕಳೆದ ಮಾರ್ಚ್ ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ನಂಬರ್ ನಿಂದಲೇ ಕರೆ ಮಾಡಿ ನಿನ್ನನ್ನು ಒಂದು ಕೊಲೆ ಕೇಸ್ ನಲ್ಲಿ ಸಿಲುಕಿಸಿ ಕೊಳ ಹಾಕಿಸಿ ಜೈಲಿಗಟ್ಟುತ್ತೇನೆಂದು ಧಮ್ಕಿ ಹಾಕಿದ್ದಾನೆ.
 
ತಿರುಮಲ ಶೆಟ್ಟಹಳ್ಳಿ ಪೊಲೀಸರ ಜತೆಗೆ ಬಂದೂ ತಾನೂ ಪೊಲೀಸ್ ಎಂದು ಹೇಳಿಕೊಂಡು ಬೆದರಿಕೆ ಹಾಕಿದ್ದು, ಈ ಬಗ್ಗೆ ಮತ್ತೆ ಠಾಣೆಗೆ ಹೋದಾಗ ಆತ ಇನ್ನೂ ಮುಂದೆ ನಿಮ್ಮ ಸಹವಾಸಕ್ಕೆ ಬರುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟಿದ್ದು, ಅಂದೆ ಸಂಜೆ ಪೊಲೀಸರ ಜತೆ ಸೇರಿಕೊಂಡು ನಮ್ಮಗಳ ಮೇಲೆಯೇ ದೂರು ದಾಖಲಿಸಿದ್ದಾನೆ. ನಿತ್ಯ ನಾನೂ ಮತ್ತು ನಮ್ಮ ಕುಟುಂಬದವರು ರಾಜ್ಯದ ನಾನಾ ಭಾಗಗಳಲ್ಲಿ ಈತ ಹಾಕಿರುವ ಸುಳ್ಳು ದೂರಿನ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುವಂತಹ ಸ್ಥಿತಿ ಉಂಟು ಮಾಡುವ ಮೂಲಕ ನಿರಂತರ ಟಾರ್ಚರ್ ನೀಡುತ್ತಿದ್ದಾನೆಂಬುದು ಸಂತ್ರಸ್ತೆ ಮಹಿಳೆಯ ಅಳಲು.

See also  ಸಾಂಸ್ಕೃತಿಕ ನಗರಿಯಲ್ಲಿ ನುಡಿಜಾತ್ರೆ ಆರಂಭ…ಕಾರ್ಯಕ್ರಮದ ಸಂಪೂರ್ಣ ಸುದ್ದಿ ಇಲ್ಲಿದೆ ನೋಡಿ

ಯಾರಿ ಸ್ಯಾಂಟ್ರೋ ರವಿ…
ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ ಈತ ಒರ್ವ ಮಾನವ ಸಾಗಾಣಿಕೆಯ ಪಿಂಪ್ ಆಗಿದ್ದು ವಿದೇಶಕ್ಕೂ ಸಹ ಮಹಿಳೆಯರನ್ನು ಮಾರಾಟ ಮಾಡುವ ಚಾಣಾಕ್ಷ ಕಿಂಗ್ ಪಿಂಪ್ ಆಗಿದ್ದಾನೆ. ಸದ್ಯಕ್ಕೆ ಈತನ ವಿರುದ್ಧ ವಿದ್ಯಾರಣ್ಯಪುರಂನಲ್ಲಿ ಮಹಿಳೆಯರನ್ನು ಬೇರೆ ರಾಷ್ಟ್ರಗಳಿಗೆ ಮಾರಾಟ ಮಾಡೆಲೆತ್ನಿಸಿ ಜೈಲು ಸೇರಿದ್ದ, ಅಲ್ಲದೆ ಕುವೆಂಪುನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ತಿರುಮಲ ಶೆಟ್ಟಹಳ್ಳಿ ಪೊಲೀಸ್ ಠಾಣೆ ಸೇರಿದಂತೆ ಹಲವೆಡೆ ಈತನ ವಿರುದ್ಧ ದೂರು ದಾಖಲಾಗಿದ್ದು ಜಾಮೀನಿನ ಮೇಲೆ ಓಡಾಡಿಕೊಂಡಿದ್ದಾನೆ.

ಈಕೆಗೆ ಏಕೆ ಟಾರ್ಚರ್….!
ಅಷ್ಟಕ್ಕೂ ಸ್ಯಾಂಟ್ರೋ ರವಿ ಈಕೆಗೆ ಬೆನ್ನು ಬಿದ್ದು ಟಾರ್ಚರ್ ನೀಡಲು ಕಾರಣವೇನು ಎಂದರೆ 15 ವರ್ಷದ ಹಿಂದೆ ಈ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದ ಈಕೆ ಸ್ಯಾಂಟ್ರೋ ರವಿ ವಿರುದ್ಧ ನ್ಯಾಯಾಲಯ ಪ್ರಕರಣವೊಂದರಲ್ಲಿ ಸಾಕ್ಷಿ ಹೇಳಿದ್ದೇ ಇಂದಿಗೂ ಈತ ಆಕೆಗೆ ಟಾರ್ಚರ್ ನೀಡಲು ಕಾರಣವಾಗಿದೆ. ಒಟ್ಟಾರೆ ಓರ್ವ ಮಹಿಳೆಗೆ ವೇಶ್ಯಾವಾಟಿಕೆಗೆ ಬರುವಂತೆ ನಾನಾ ರೀತಿಯ ಟಾರ್ಚರ್ ನೀಡುತ್ತಿರುವ ಸ್ಯಾಂಟ್ರೋ ರವಿ ಹಲವು ಪೊಲೀಸ್ ಅಧಿಕಾರಿಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಈ ರೀತಿ ಟಾರ್ಚರ್ ನೀಡುತ್ತಿದ್ದಾನೆನ್ನುವುದು ಮಹಿಳೆಯ ಅಪಾದನೆಯಾಗಿದ್ದು, ಈತನಿಂದ ಬಿಡುಗಡೆ ನೀಡುವಂತೆ ಮಹಿಳೆ ಈಗಾಗಲೇ ನಗರ ಪೊಲೀಸ್ ಆಯುಕ್ತರು, ಮೈಸೂರಿನ ಜಿಲ್ಲಾಧಿಕಾರಿಗಳು, ರಾಜ್ಯ ಮಹಿಳಾ ಅಯೋಗ ಸೇರಿದಂತೆ ಎಲ್ಲರಿಗೂ ಮನವಿ ಸಲ್ಲಿಸಿದ್ದು, ಎಲ್ಲಿಯೂ ನ್ಯಾಯ ಸಿಗುತ್ತಿಲ್ಲವೆಂದು ಗೋಳಿಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು