News Kannada
Tuesday, September 27 2022

ಮೈಸೂರು

ಮೂರ್ಕಲ್ ಆನೆ ಶಿಬಿರದಲ್ಲಿ ಮಹಾರಾಷ್ಟ್ರದ ಗಜ ಭೀಮನಿಗೆ ಟ್ರೈನಿಂಗ್ - 1 min read

Photo Credit :

ಮೂರ್ಕಲ್ ಆನೆ ಶಿಬಿರದಲ್ಲಿ ಮಹಾರಾಷ್ಟ್ರದ ಗಜ ಭೀಮನಿಗೆ ಟ್ರೈನಿಂಗ್

ಮೈಸೂರು: ಮಹಾರಾಷ್ಟ್ರದ ಸಾವತ್ವಾಡಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸೆರೆಸಿಕ್ಕ ನರಹಂತಕ ಭೀಮ ಆನೆಯನ್ನು ಕಳೆದ 6 ತಿಂಗಳಿಂದ ಕರ್ನಾಟಕದ ಮೂರ್ಕಲ್ ಆನೆ ಶಿಬಿರದಲ್ಲಿ ನೀಡುತ್ತಿರುನ ಆನೆ ತರಬೇತಿಯ ವಿಡಿಯೋನ ಮಹಾರಾಷ್ಟ್ರದ ಅರಣ್ಯ ಸಚಿವರಿಗೆ ಕಳುಹಿಸಲಾಗಿದೆ.

2015 ಫೆಬ್ರವರಿ ತಿಂಗಳಿನಲ್ಲಿ ಮಹಾರಾಷ್ಟ್ರದ ಸಾವತ್ವಾಡಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಮೈಸೂರಿನ ದಸರಾ ಆನೆಗಳ ಸಹಾಯದಿಂದ ನರಹಂತಕ ಆನೆಯನ್ನ ಸೆರೆಹಿಡಿಯಲಾಗಿತ್ತು. ಹೀಗೆ ಸೆರೆಹಿಡಿದ ಬೃಹತ್ಕಾರದ ಗಂಡು ಆನೆಗೆ ಭೀಮ ಎಂದು ನಾಮಕಾರಣ ಮಾಡಲಾಯಿತು. ನಂತರ ಅದೇ ಅರಣ್ಯ ಪ್ರದೇಶದಲ್ಲಿ ಆರು ತಿಂಗಳು ಕಾಲ ಪಳಗಿಸಲಾಗಿತ್ತು. ಆಮೇಲೆ ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರದಲ್ಲಿ ಇರುವ ಏಕೈಕ ಗಂಡು ಆನೆಯನ್ನ ತರಬೇತಿ ಕೊಡಿಸಲು ತೀರ್ಮಾನಿಸಿ ಇದರಂತೆ ಕಳೆದ ಆರು ತಿಂಗಳ ಹಿಂದೆ ಸರ್ಕಾರದ ವೆಚ್ಚದಲ್ಲಿ ಮೈಸೂರಿನ ನಾಗರಹೊಳೆ ಮತ್ತಿಗೋಡು ಹಾಗೂ ಮೂರ್ಕಲ್ ನ ಅರಣ್ಯ ಆನೆ ಶಿಬಿರಕ್ಕೆ ಕಳಿಸಲಾಗಿತ್ತು.

ಅಭಿಮನ್ಯು ನೇತೃತ್ವದಲ್ಲಿ ತರಬೇತಿ:
ಮತ್ತಿಗೊಡು ಆನೆ ಶಿಬಿರಿದಲ್ಲಿ ಅಭಿಮನ್ಯು ನೇತೃತ್ವದ ಮೇರಿ, ವರಲಕ್ಷ್ಮಿ, ಶ್ರೀನಿವಾಸ, ದ್ರೋಣ, ಸಾಕಾನೆಗಳು ಭೀಮ ಆನೆಗೆ ಕಳೆದ 6 ತಿಂಗಳಿಂದ ತರಬೇತಿ ನೀಡಿದ್ದು ಭೀಮ ಆನೆ ಎಲ್ಲಾ ತರಬೇತಿಗಳಲ್ಲು ಸೈ ಎನಿಸಿಕೊಂಡು ಯಶ್ವಸಿಯಾಗಿ ತರಬೇತಿಯನ್ನ ಮುಗಿಸಿದ್ದಾನೆ.

ಸಾಕಾನೆಗಳು ನೀಡಿದ್ದ ಮರದ ದಿಂಬಿಯನ್ನು ಹೊತ್ತಿಕೊಂಡು ಬರುವುದು, ಕಾಡಿಗೆ ಹೋಗಿ ಸೊಪ್ಪನ್ನ ಎತ್ತಿಕೊಂಡು ಬರುವುದು, ಅರಣ್ಯ ಪ್ರದೇಶದಲ್ಲಿ ಹಿಡಿದ ಆನೆಗಳನ್ನ ಕರೆತರುವುದು, ನಮಸ್ಕರಿಸುವುದು, ಮಾವುತನು ನೀಡುವ ಸನ್ನೆಗಳನ್ನು ಪಾಲಿಸಿವುದು ಮತ್ತು ಹುಲಿ ಹಾಗೂ ಕಾಡಾನೆಗಳ ಸೆರೆಯ ಕಾರ್ಯಾಚರಣೆಯಲ್ಲಿ ಯಾವ ರೀತಿ ವರ್ತಿಸಿಬೇಕು ಎಂಬುದರ ಬಗ್ಗೆ ತರಬೇತಿಯಲ್ಲಿ ಪಾಸಾಗಿದ್ದಾನೆ.

ಮಹಾರಾಷ್ಟ್ರದ ಅರಣ್ಯ ಸಚಿವರಿಗೆ ವಿಡಿಯೋ:
ಮಹಾರಾಷ್ಟ್ರದಲ್ಲಿ ಸೆರೆಸಿಕ್ಕ ಬೃಹತ್ ಗಾತ್ರದ ಏಕೈಕ ಗಂಡು ಭೀಮನಿಗೆ ತರಬೇತಿಕೊಡಿಸಲು ಮಹಾರಾಷ್ಟ್ರದ ಸರ್ಕಾರ ವಿಶೇಷ ಆಸಕ್ತಿ ವಹಿಸಿದ್ದು ಇದಕ್ಕಾಗಿ 2 ಲಕ್ಷ ಹಣವನ್ನು ನಾಗರಹೊಳೆಯ ಆನೆ ತರಬೇತಿ ಇರುವ ಅರಣ್ಯ ಅಧಿಕಾರಿಗೆ ನೀಡಿತು. ಇದರಂತೆ ಮಹಾರಾಷ್ಟ್ರದ ಅರಣ್ಯ ಸಚಿವರು ಕರ್ನಾಟಕ ಅರಣ್ಯ ಅಧಿಕಾರಿಗೆ ಪತ್ರ ಬರೆದು ತರಬೇತಿಯ ವಿವರವನ್ನು ಕೇಳಿತ್ತು. ಇದರಂತೆ ನಾಗರಹೊಳೆಯ ಅರಣ್ಯ ಅಧಿಕಾರಿಗಳು ಮಹಾರಾಷ್ಟ್ರದ ಅರಣ್ಯ ಸಚಿವರಿಗೆ ಭೀಮನಿಗೆ ನೀಡಿದ್ದ ತರಬೇತಿಯ ವಿಡಿಯೋವೊಂದನ್ನು ಕಳುಹಿಸಿಕೊಟ್ಟಿದ್ದಾರೆ.

See also  ಬಂಡೀಪುರದಲ್ಲಿ ಮೂರು ಹುಲಿ ದರ್ಶನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು