News Kannada
Sunday, September 25 2022

ಮೈಸೂರು

ಮೈಸೂರು ಸಂಚಾರಿ ಪೊಲೀಸರಿಗೆ ಬಾಡಿ ವೋನ್ ಕ್ಯಾಮಾರ ಅಳವಡಿಕೆ - 1 min read

Photo Credit :

ಮೈಸೂರು ಸಂಚಾರಿ ಪೊಲೀಸರಿಗೆ ಬಾಡಿ ವೋನ್ ಕ್ಯಾಮಾರ ಅಳವಡಿಕೆ

ಮೈಸೂರು:  ಮೈಸೂರಿನ ಸಂಚಾರಿ ಪೊಲೀಸರು ಈಗ ಹೈಟೆಕ್ ಆಗಿದ್ದು, ಕರ್ತವ್ಯದ ವೇಳೆ ಸಂಭವಿಸುವ ಘಟನಾವಳಿಗಳನ್ನ ಸೆರೆಹಿಡಿಯಲು ಬಾಡಿ ವೋನ್ ವಿದೇಶಿ ಕ್ಯಾಮರಾಗಳು ಇದೀಗ ಸಂಚಾರಿ ಪೊಲೀಸರ ಸಹಾಯಕ್ಕೆ ಬಂದಿದೆ. ಇನ್ನೂ ಮುಂದೆ ನಿಯಮ ಉಲಂಘಿಸುವವರು ಎಚ್ಚರ ತಪ್ಪಿದರೆ ದಂಡ ಗ್ಯಾರಂಟಿ.

Mysuru police have eyes on their bodies as well!-1ಈ ವಿಡಿಯೋ ಕ್ಯಾಮೆರಾ 20 ದಿನಗಳಿಂದ ಪೊಲೀಸರ ಸಮವಸ್ತ್ರದ ಒಂದು ಭಾಗವಾಗಿದೆ. ಲಾಠಿ, ವಾಕಿಟಾಕಿ ಜತೆಗೆ ಈಗ ಪೊಲೀಸರು ಕ್ಯಾಮರಾ ಹೊಂದುವುದು ಕಡ್ಡಾಯವಾಗಿದೆ. ದೇಹದ ಎದೆಯ ಭಾಗದಲ್ಲಿ ಶರ್ಟಿಗೆ ಅಳವಡಿಸಿದ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗುತ್ತಿವೆ.

ಕಾನೂನು ಮತ್ತು ಸುವ್ಯವಸ್ಥೆ ಹಾಳು ಮಾಡುವ ದುಷ್ಕರ್ಮಿಗಳ ವಿರುದ್ದ ಸಾಕ್ಷ್ಯ ಸಹಿತ ದಾಖಲೆ ಒದಗಿಸುವ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ದಂಡ ವಿಧಿಸುವ ಉದ್ದೇಶದಿಂದ ಮತ್ತು ಕೋಮುಗಲಭೆ, ಬಂದ್, ಮುಷ್ಕರ ಸೇರಿದಂತೆ ಇತರ ಸಂದರ್ಭಗಳಲ್ಲಿ ಈ ಕ್ಯಾಮರಾ ಉಪಯೋಗಿಸಲಾಗುತ್ತಿದೆ. ವಿದೇಶಗಳಲ್ಲಿ ಬಳಕೆಯಾಗುವ ಈ ಕ್ಯಾಮರಾ ವ್ಯವಸ್ಥೆ ಇತ್ತೀಚೆಗೆ ಭಾರತಕ್ಕೆ ಕಾಲಿಟ್ಟಿದ್ದು ಕರ್ನಾಟಕದಲ್ಲಿ ಮೈಸೂರು ಕಮಿಷನರ್ ವ್ಯಾಪ್ತಿಯಲ್ಲಿ ಮಾತ್ರ ಬಾಡಿ ವೋನ್ ಕ್ಯಾಮರಾ ಬಳಕೆ ಮಾಡಲಾಗುತ್ತಿದೆ. ಚಿಕ್ಕದಾಗಿರುವ ಕ್ಯಾಮರಾ ಶರ್ಟಿನ ಎದೆಯ ಭಾಗದಲ್ಲಿ ಇರುತ್ತದೆ. ಕರ್ತವ್ಯದಲ್ಲಿದ್ದಾಗ ಇದನ್ನು ಬಳಕೆ ಮಾಡುವುದು ಕಡ್ಡಾಯ. ಅಗತ್ಯ ಸಂದರ್ಭಗಳಲ್ಲಿ ಬಟನ್ ಒತ್ತಿ ಕ್ಯಾಮರಾ ಅನ್ ಮಾಡಿಕೊಳ್ಳುತ್ತಾರೆ. ಪೊಲೀಸ್ ಅಧಿಕಾರಿ ಇತರೆ ಕೆಲಸ ಮಾಡುವಾಗಲೇ ಸ್ಥಳದಲ್ಲಿ ನಡೆಯುವ ದೃಶ್ಯ ಸೆರೆಯಾಗುತ್ತದೆ. ಪೊಲೀಸ್ ಅಧಿಕಾರಿಯ ಧ್ವನಿ ಹಾಗೂ ಇತರರ ಧ್ವನಿ, ದೃಶ್ಯ ದಾಖಲಾಗುತ್ತದೆ. ಸಂಚಾರ ಉಲ್ಲಂಘನೆ ಮಾಡುವ ವಾಹನ ಸವಾರರಿಂದ ದಂಡ ವಸೂಲಿ ಮಾಡಲು ಇವು ಸೆರವಾಗಿವೆ. ಪ್ರಮುಖ ವೃತ್ತ, ರಸ್ತೆಯಲ್ಲಿ ಕ್ಯಾಮರಾದೊಂದಿಗೆ ಪೊಲೀಸ್ ಅಧಿಕಾರಿ ದೃಶ್ಯ ದಾಖಲಾಗುತ್ತದೆ.

ಸಂಚಾರ ನಿಯಮ ಉಲ್ಲಂಘಿಸಿದವರಿಂದ ಸ್ಥಳದಲ್ಲಿಯೇ ದಂಡ ವಸೂಲಿ ಮಾಡಬಹದು ಅಥವಾ ಮನೆಗೆ ನೋಟಿಸ್ ಕಳುಹಿಸಿ ದಂಡ ಕಟ್ಟುವಂತೆ ಸೂಚಿಸುವ ಅವಕಾಶವಿದೆ. ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರು ಸೀಟ್ ಬೆಲ್ಟ್ ಧರಿಸದ ಕಾರು ಚಾಲಕರು ಹಾಗೂ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಚಾಲಕರಿಂದ ದಂಡ ವಸೂಲಿ ಮಾಡಲು ಈ ಕ್ಯಾಮರಾ ಪೊಲೀಸರ ಸಹಾಯಕ್ಕೆ ಬರುತ್ತಿವೆ. ಅಪಘಾತ ಸಂಭವಿಸಿದ ಸ್ಥಳದ ಚಿತ್ರೀಕರಣಕ್ಕೂ ಇವನ್ನು ಉಪಯೋಗಿಸಗುತ್ತಿದೆ.

ಪ್ರಥಮ ಹಂತದಲ್ಲಿ 25 ಕ್ಯಾಮರಾಗಳನ್ನು ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ತರಿಸಿದ್ದಾರೆ. ನರಸಿಂಹರಾಜ, ದೇವರಾಜ, ಕೃಷ್ಣರಾಜ, ಸಿದ್ದಾರ್ಥನಗರ ಹಾಗೂ ವಿವಿ ಪುರಂ ಸಂಚಾರ ಠಾಣೆಯ ಐವರು ಇನ್ಸ್ಪಕ್ಟರ್, 10 ಸಬ್ ಇನ್ಸ್ಪೆಕ್ಟರ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಆರು ಠಾಣೆಗಳಿಗೆ ಈ ಕ್ಯಾಮರಾ ನೀಡಲಾಗಿದೆ.

ನಗರದ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಲಷ್ಕರ್, ಮಂಡಿ, ಉದಯಗಿರಿ, ನರಸಿಂಹರಾಜ, ಲಕ್ಷ್ಮೀಪುರಂ ಮತ್ತು ದೇವರಾಜ ಕಾನೂನು ಮತ್ತು ಸುವ್ಯವಸ್ಥೆ ಠಾಣೆಯ ಇನ್ಸ್ ಪೆಕ್ಟರ್ ಈ ಕ್ಯಾಮರಾ ಬಳಸುತ್ತಿದ್ದಾರೆ.
ಅತ್ಯುನ್ನತ ತಂತ್ರಜ್ಞಾನ ಹೊಂದಿರುವ ಕ್ಯಾಮರಾಗಳು 8 ಗಂಟೆಯ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಕ್ಯಾಮರಾಗಳಿಗೆ ಇದೆ. ಉತ್ತಮ ಗುಣಮಟ್ಟದ ದೃಶ್ಯವೂ ದಾಖಲಾಗುತ್ತಿದ್ದು ಕ್ಯಾಮರಾವನ್ನು ವಿವಿಧ ದಿಕ್ಕುಗಳಿಗೆ ತಿರುಗಿಸಿಕೊಳ್ಳಲು ಅವಕಾಶವಿದೆ. ಇದಕ್ಕೆ ಸಂಬಂಧಿಸಿದ ಸರ್ವರ್ ವೊಂದನ್ನು ಪೊಲೀಸ್ ಕಮಿಷನರ್ ಕಛೇರಿಯಲ್ಲಿ ಅಳವಡಿಸಲಾಗಿದೆ. ವಾರಕ್ಕೊಮ್ಮೆ ದೃಶ್ಯಗಳನ್ನು ಕ್ಯಾಮರಾದಿಂದ ಸರ್ವರ್ ಗೆ ವರ್ಗಾಯಿಸಲಾಗುತ್ತದೆ. ಸೆರೆಯಾದ ದೃಶ್ಯಗಳನ್ನು 90 ದಿನಗಳವರೆಗೆ ಉಳಿಸಿಕೊಳ್ಳಲಾಗುತ್ತದೆ. ಬಳಿಕ ಪ್ರಕರಣಗಳಿಗೆ ಪೂರಕವಾದ ದೃಶ್ಯಗಳನ್ನು ಮಾತ್ರ ಉಳಿಸಿಕೊಂಡು ಇತರ ದೃಶ್ಯವನ್ನು ಅಳಿಸಿಹಾಕಲಾಗುತ್ತದೆ. ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸುವ ಅರೋಪ ಪಟ್ಟಿಯೊಂದಿಗೆ ಇದು ಪ್ರಮುಖ ಸಾಕ್ಷ್ಯ ಆಗಲಿದೆ.   

See also  ಟಿಬೇಟಿಯನ್ನರ ಸೌಹಾರ್ದತೆಯ ಜೀವನ ಶ್ಲಾಘನೀಯ: ಸಿಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು