News Kannada
Sunday, September 25 2022

ಮೈಸೂರು

ಮೈಸೂರು ಮೃಗಾಲಯದಲ್ಲಿ ಗಂಡು ಸಿಂಹ ಸಾವು - 1 min read

Photo Credit :

ಮೈಸೂರು ಮೃಗಾಲಯದಲ್ಲಿ ಗಂಡು ಸಿಂಹ ಸಾವು

ಮೈಸೂರು: ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳ ಸಾವಿನ ಸರದಿ ಮುಂದುವರೆದಿದ್ದು ಎಂಟು ವರ್ಷದ ಶಂಕರ ಎಂಬ ಹೆಸರಿನ ಏಷಿಯನ್ ಗಂಡು ಸಿಂಹ ಸೋಮವಾರ ಸಂಜೆ ಮೃಗಾಲಯದಲ್ಲಿ ಮೃತಪಟ್ಟಿದೆ.

ಕಳೆದ ಹತ್ತು ದಿನಗಳಿಂದ ಕಿಡ್ನಿ ಮತ್ತು ಲಿವರ್ ತೊಂದರೆಯಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಏಷಿಯನ್ ಗಂಡು ಸಿಂಹ 10 ದಿನದ ಹಿಂದೆ ಆಹಾರ ಸೇವಿಸದೇ ಇದ್ದಾಗ ಅನುಮಾನಗೊಂಡ ವೈದ್ಯಾಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದು ಒಂದು ದಿನ ಚಿಕಿತ್ಸೆ ಸ್ಪಂದಿಸಿದರೂ ಮತ್ತೊಂದು ದಿನ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ.

ಇದರಿಂದ ಮೃಗಾಲಯದ ಕೇಜ್ ಒಂದರಲ್ಲಿ ಇಟ್ಟು ತಪಾಸಣೆಗೆ ಪ್ರಯತ್ನಿಸಲಾಯಿತು. ಸೋಮವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸಿ ಆರೋಗ್ಯ ಸ್ಥಿತಿ ಸುಧಾರಿಸಿತ್ತು. ಆದರೆ ಸಂಜೆ ವೇಳೆಗೆ  ಚಿಕಿತ್ಸೆ ಪಲಾಕಾರಿಯಾಗದೆ ಮೃತಪಟ್ಟಿದೆ. ಸದ್ಯ ಮೃಗಾಲಯದಲ್ಲಿ ಶಂಕರನ ಸಂಗಾತಿಯಾಗಿದ್ದ ಗೌರಿ ಹಾಗೂ ದರ್ಶನ, ರಕ್ಷಿತ್ ಎನ್ನುವ ಹೆಸರಿನ ಮೂರು ಸಿಂಹಗಳಿವೆ.

2011ರಂದು ಗುಜರಾತ್ ನ ಜುನಾಗಢನಿಂದ ಸಕರ್ಬಗ್ ಮೃಗಾಲಯದಿಂದ ಪ್ರಾಣಿ ವಿನಿಮಯದಡಿ ಏಷಿಯನ್ ಗಂಡು ಸಿಂಹ ಶಂಕರನನ್ನು ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ಕರೆತರಲಾಗಿತ್ತು.

See also  ಸಾಲಿಗ್ರಾಮ ಗ್ರಾ.ಪಂ. ಅಧ್ಯಕ್ಷರಾಗಿ ಮಂಗಳಮುಖಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು