News Kannada
Wednesday, October 05 2022

ಮೈಸೂರು

ಡಿಎಫ್ಆರ್ ಎಲ್ ನಲ್ಲಿ ಹೊಸ ತಂತ್ರಜ್ಞಾನಗಳ ಪ್ರದರ್ಶನ - 1 min read

Photo Credit :

ಡಿಎಫ್ಆರ್ ಎಲ್ ನಲ್ಲಿ ಹೊಸ ತಂತ್ರಜ್ಞಾನಗಳ ಪ್ರದರ್ಶನ

ಮೈಸೂರು: ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ದಿನವಾಗಿ ಆಚರಿಸಲಾಯಿತು.

ನಗರದ ಸಿದ್ದಾರ್ಥನಗರದಲ್ಲಿ ಇರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದಲ್ಲಿ ಮೇ11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ಬೆಳಗ್ಗೆ 10 ರಿಂದ ನಾಲ್ಕು ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಅವಕಾಶವನ್ನು ಕಲ್ಪಿಸಲಾಗಿತ್ತು. ಡಿಎಫ್ಆರ್ ಎಲ್ ನಲ್ಲಿ ಇತ್ತೀಚಿಗೆ ಸಂಶೋದಿಸಿರುವ ಹೊಸ ತಂತ್ರಜ್ಞಾನಗಳ ಪ್ರದರ್ಶನವಿತ್ತು. ಅದರಲ್ಲಿ ವಿಶೇಷವಾಗಿ ರೈತರು ಬೆಳೆದ ತರಕಾರಿಗಳನ್ನು ಸಂರಕ್ಷಣೆ ಮಾಡಿ ಒಳ್ಳೆಯ ಬೆಲೆ ಸಿಕ್ಕಾಗ ಮಾರಾಟ ಮಾಡಲು ಅನುಕೂಲವಾಗುವ ಹೊಸ ತಂತ್ರಜ್ಞಾನವನ್ನು ರೈತರಿಗೋಸ್ಕರ ಅವಿಷ್ಕಾರ ಮಾಡಿರುವ ತಂತ್ರಜ್ಞಾನವನ್ನು ಪ್ರದರ್ಶನ ಮಾಡಲಾಯಿತು.  

ಇತ್ತೀಚಿನ ಜೀವನ ಶೈಲಿಯಲ್ಲಿ ಆಹಾರ ಪದಾರ್ಥಗಳಿಂದ ಬರುತ್ತಿರುವ ಸಕ್ಕರೆ ಖಾಯಿಲೆ, ರಕ್ತದೋತ್ತಡ ಕಡಿಮೆ ಮಾಡಲು ಯಾವ ರೀತಿ ಆಹಾರವನ್ನು ಎಣ್ಣೆ ಇಲ್ಲದೆ ಖರೀದು ಆಹಾರ ತಯಾರಿಸುವ ತಂತ್ರಜ್ಞಾನವನ್ನು ಪ್ರದರ್ಶಿಸಲಾಯಿತು.  ಸೈನಿಕರು ಒತ್ತಡಗಳಲ್ಲಿ ಕೆಲಸಮಾಡುವಾಗ ಗಂಟೆಗಟ್ಟಲೆ ಆಹಾರ ಸೇವನೆ ಮಾಡುವುದು ಕಷ್ಟ ಇಂತಹ ಸಂದರ್ಭದಲ್ಲಿ ಚಾಕೊಲೆಟ್ ರೀತಿಯ ರಸ, ಆಹಾರ ತಂತ್ರಜ್ಞಾನವನ್ನು ಪ್ರದರ್ಶನ ಮಾಡಲಾಯಿತು. ಈ ಚಾಕೊಲೆಟ್ ರೀತಿಯ ಆಹಾರವನ್ನು ಸೈನಿಕರು ಸೇವಿಸಿದರೆ ನಾಲ್ಕರಿಂದ ಎಂಟು ಗಂಟೆಯವರೆಗೆ ಯಾವುದೇ ಆಹಾರ ಸೇವಿಸದೆ ಹೋರಾಟ ಮಾಡಲು ಸೈನಿಕರಿಗೆ ಸಹಾಯವಾಗುತ್ತದೆ.
ವರ್ಷದಲ್ಲಿ ಮೇ11 ರಂದು ರಾಷ್ಟ್ರೀಯ ತಂತ್ರಜ್ಞಾನ ದಿನ ಮಾತ್ರ ಡಿಎಸ್ಆರ್ ಎಲ್ ಗೆ ಸಾರ್ವಜನಿಕರ ಪ್ರವೇಶ ಇರುವುದರಿಂದ ಪ್ರದರ್ಶನ ವೀಕ್ಷಿಸಲು ಶಾಲಾ ಮಕ್ಕಳು ಮುಗಿಬಿದ್ದರು.  

See also  ಈ ಸಾಲಿನ ರಾಷ್ಟ್ರೀಯ ಕಲೋತ್ಸವದಲ್ಲಿ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆ ಪ್ರತಿಭೆಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು