News Kannada
Thursday, September 29 2022

ಮೈಸೂರು

ದೇವು ಹತ್ಯೆ ಪ್ರಕರಣ: ಆರು ಮಂದಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು - 1 min read

Photo Credit :

ದೇವು ಹತ್ಯೆ ಪ್ರಕರಣ: ಆರು ಮಂದಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

ಮೈಸೂರು: ರೌಡಿ ಶೀಟರ್ ದೇವು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಮಂದಿ ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

ಕಳೆದ ಗುರುವಾರ ಬೆಳಂಬೆಳ್ಳಗೆ ಪಡುವಾರಹಳ್ಳಿಯ ಮಾರಿಗುಡಿ ದೇವಸ್ಥಾನದ ಮುಂಭಾಗದಲ್ಲಿ ಸ್ನೇಹಿತರು ಜೊತೆ ಮಾತನಾಡುತ್ತಿರುವಾಗ ರೌಡಿಶೀಟರ್ ದೇವು ಬರ್ಬರವಾಗಿ ಹತ್ಯೆಯಾಗಿದ್ದರು. ಹತ್ಯೆಯಾದ ಮದು ದಿನ ಆರು ಜನ ಯುವಕರು ನಾವೇ ಹತ್ಯೆ ಮಾಡಿದ್ದು ಎಂದು ಪೋಲಿಸರಿಗೆ ಶರಣಾಗಿದ್ದರು. ವಿಚಾರಣೆ ನಡೆಸಿದಾಗ ನಿಜವಾದ ಹಂತಕರು ಅವರಲ್ಲ ಎಂದು ತಿಳಿದು ಬಂದಾಗ ತನಿಖೆಗಾಗಿ ಬೆಂಗಳೂರು, ಹೈದರಾಬಾದ್, ಬೆಳಗಾವಿಗೆ ನಿಜವಾದ ಆರೋಪಿಗಳ ಪತ್ತೆಗೆ ತಂಡವನ್ನು ಕಳುಹಿಸಲಾಗಿತ್ತು. ಆದತೆ ನಿಜವಾದ ಹಂತಕರು ಸಿಗದೆ ಬರೀಗೈಯಲ್ಲಿ ವಾಪಾಸಾದ ಪೊಲೀಸರು ಶರಣಾದ ಆರು ಮಂದಿ ಯುವಕರನ್ನೇ ಆರೋಪಿಗಳೆಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಪವನ್ ಕುಮಾರ್, ಕಾರ್ತಿಕ್, ಸುನಿಲ್ ಕುಮಾರ್, ರಾಕೇಶ, ಶಿವರಾಜ್, ಪರಮೇಶ  ಶರಣಾದ ಆರೋಪಿಗಳು.

ದೇವು ಹತ್ಯೆಯಾದ ಸ್ಥಳದ ಪಕ್ಕದಲ್ಲೇ ಹಸುಸಾಗಣಿಕೆ ಕೆಲಸ ಮಾಡಿಕೊಂಡಿದ್ದ ಪದ್ದು ಅವರನ್ನ ಪೊಲೀಸರು ಬಂಧಿಸಿದ್ದು ಈ ಪದ್ದು ಕೊಲೆಯಾದ ದೇವುನ ಚಲನವಲನಗಳನ್ನು ಹಂತಕರಿಗೆ ಮೊಬೈಲ್ ಮೂಲಕ ತಿಳಿಸುತ್ತಿದ್ದು ಶರಣಾದ ಹಂತಕ ಪವನ್ ಕುಮಾರ್ ಮೊಬೈಲ್ ಕಾಲ್ ಲೀಸ್ಟ್ ತೆಗೆದಾಗ ದೇವುನ ಎಲ್ಲಾ ಚಲನವಲನಗಳನ್ನು ತಿಳಿಸುತ್ತಿದೆ ಎಂದು ಪೊಲೀಸ್ ವಿಚರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾನೆ.

2010ರಲ್ಲಿ ಕರಿಯಪ್ಪನನ್ನ ಬರ್ಬರವಾಗಿ ಹತ್ಯೆ ಮಾಡಿದ ಮೃತ ರೌಡಿ ಶೀಟರ್ ದೇವುನ ಹೇಗಾದರೂ ಮಾಡಿ ಹತ್ಯೆ ಮಾಡಿಸಬೇಕು ಎಂದು ಕರಿಯಪ್ಪನ ಆತ್ಮೀಯ ಗೆಳೆಯ ಪದ್ದು ಹೊಂಚು ಹಾಕಿದ್ದು ಈ ಸಂಬಂಧ ಶರಣಾದ ಪ್ರಮುಖ ಆರೋಪಿ ಪವನ್ ಕುಮಾರ್ ದೇವುನ ಚಲನವಲನಗಳ ಬಗ್ಗೆ ತಿಳಿಸುತ್ತಿದ್ದು ನಾಲ್ಕು ಬಾರಿ ಕೊಲೆ ಯತ್ನ ಕೂಡ ಮಾಡಲಾಗಿತ್ತು. ಆದರೆ ಸ್ವಲ್ಪದರಲ್ಲೆ ಮಿಸ್ ಆಗಿತ್ತು. ಇದರಿಂದ ಈ ಬಾರಿ ಕೊಲೆಯನ್ನು ವ್ಯವಸ್ಥಿತವಾಗಿ ಬೇರೆ ಯುವಕರಿದ ಮಾಡಿಸಲಾಗಿದೆ ಎಂಬ ಮಾಹಿತಿಯನ್ನ ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದು ಹತ್ಯೆ ಮಾಡಿದ ನಿಜವಾದ ಆರೋಪಿಗಳನ್ನ ಬಂಧಿಸುವ ಪ್ರಯತ್ನವನ್ನ ಪೊಲೀಸರು ತಾತ್ಕಲಿಕವಾಗಿ ಕೈ ಬಿಟ್ಟಂತೆ ಕಾಣುತ್ತದೆ ಎನ್ನುತ್ತಾರೆ ಪಡುವಾರಹಳ್ಳಿ ನಿವಾಸಿಗಳು.

See also  ಒಂದು ವಾರ ಬಂಡೀಪುರಕ್ಕೆ ಸಫಾರಿಗೆ ಹೋಗಬೇಡಿ...
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು