ಮೈಸೂರು: ಅರಮನೆಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಯಾವುದೇ ರೀತಿಯ ಮೂಲ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಅರಮನೆಯ ಉಪನಿರ್ದೇಶಕರಿಗೆ ನೋಟಿಸ್ ಆಯೋಗದಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಅರಮನೆಗೆ ದಿಢೀರ್ ಭೇಟಿ ನೀಡಿದ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ನಾರಾಯಣ್, ಅರಮನೆಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ನೀಡಿರುವ ಸವಲತ್ತು, ಪರಿಕರಗಳು ಹಾಗೂ ವೇತನಗಳ ಬಗ್ಗೆ ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಪಿ.ಎಸ್ ಸುಬ್ರಮಣ್ಯ ಹಾಗೂ ಪೌರಕಾರ್ಮಿಕರ ಗುತ್ತಿಗೆ ದಾರ ಶಿವಣ್ಣ ಅವರಿಂದ ಮಾಹಿತಿ ಪಡೆದು ಅರಮನೆಯಲ್ಲಿ ಕೆಲಸ ಮಾಡುವ 36 ಪೌರಕಾರ್ಮಿಕರಿಗೆ ಯಾವುದೇ ರೀತಿಯ ಕನಿಷ್ಟ ಸೌಲಭ್ಯಗಳನ್ನು ನೀಡದೆ ದುಡಿಸಿಕೊಳ್ಳುತ್ತಿದ್ದು ಈ ಬಗ್ಗೆ ಅರಮನೆಯ ಉಪನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ ಆಯೋಗದಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.