News Kannada
Monday, October 03 2022

ಮೈಸೂರು

ಮಣ್ಣಲ್ಲಿ ಮಣ್ಣಾದ ದೇಜಗೌ: ಪತ್ನಿ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ - 1 min read

Photo Credit :

ಮಣ್ಣಲ್ಲಿ ಮಣ್ಣಾದ ದೇಜಗೌ: ಪತ್ನಿ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ

ಮೈಸೂರು: ಹಿರಿಯ ಸಾಹಿತಿ ದೇಜಗೌರವರ ಅಂತ್ಯ ಸಂಸ್ಕಾರ ಶ್ರೀ ಕುವೆಂಪು ವಿದ್ಯಾವರ್ದಕ ಟ್ರಸ್ಟ್ ಆವರಣದಲ್ಲಿ ಪತ್ನಿ ಸಾವಿತ್ರಮ್ಮ ಅವರ ಸಮಾಧಿಯ ಪಕ್ಕದಲ್ಲೆ ಕುವೆಂಪು ವನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.

ಸೋಮವಾರ ನಿಧನರಾದ ಕನ್ನಡದ ಕಟ್ಟಾಳು ದೇಜಗೌ ಖ್ಯಾತಿಯ ದೇ. ಜವರೇಗೌಡ ಅವರ ಅಂತ್ಯಸಂಸ್ಕಾರವನ್ನು ವಿಜಯನಗರದ ಮೊದಲ ಹಂತದಲ್ಲಿರುವ ಶ್ರೀ ಕುವೆಂಪು ವಿದ್ಯಾವರ್ದಕ ಕಾಲೇಜಿನ ಕುವೆಂಪು ಅವರಣದ ಪತ್ನಿ ಸಾವಿತ್ರಮ್ಮ ರವರ ಸಮಾಧಿಯ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಇದಕ್ಕೂ ಮೊದಲು ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಗೆ ಮೊದಲು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ರಾಷ್ಟ್ರಧ್ವಜವನ್ನು ಪಾರ್ಧಿವ ಶರೀರದ ಮೇಲೆ ಇರಿಸಿ ಜಿಲ್ಲಾಡಳಿತದಿಂದ ಗೌರವ ಸಲ್ಲಿಸಲಾಯಿತು.

ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಸಿ.ಎಂ
ಅಂತ್ಯಸಂಸ್ಕಾರದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ದೇಜಗೌ ಅವರ ಮತ್ತು ನನ್ನ ನಡುವೆ ತುಂಬಾ ಒಡನಾಟವಿತ್ತು. ಅವರು  ಕುಲಪತಿಗಳಾಗಿದ್ದ ಸಂದರ್ಭದಲ್ಲಿ ನಾನು ವಿದ್ಯಾರ್ಥಿಯಾಗಿದ್ದೆ. ಮುಖ್ಯಮಂತ್ರಿ ಆದ ನಂತರ ಅವರನ್ನು ಭೇಟಿಯಾಗಿದ್ದೆ. ಅವರ ಸಾವು ಸಾಹಿತ್ಯ ಲೋಕದ ದೊಡ್ಡ ಕೊಂಡಿ ಕಳಚಿದಂತಾಗಿದ್ದು ಅವರಿಗೆ ಇನ್ನೂ ದೊಡ್ಡ ಪ್ರಶಸ್ತಿಗಳು ಬರಬೇಕಿತ್ತು ಎಂದರು.

ದೇಜಗೌರವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುವ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಎಸ್.ಎಂ.ಕೃಷ್ಣ ಮುಖಾಮುಖಿಯಾಗಿ ಸ್ವಲ್ಪ ಸಮಯ ಭಾವುಕರಾದರು. ಪರಸ್ಪರ ಮಾತನಾಡುವ ಸಂದರ್ಭದಲ್ಲಿ ದೇವೇಗೌಡರು ದು:ಖ ತಾಳಲಾರದೇ ಕಣ್ಣಿರಿಟ್ಟ ಪ್ರಸಂಗ ನಡೆಯಿತು. ದೇಜೆಗೌ ಅಂತ್ಯಸಂಸ್ಕಾರದಲ್ಲಿ ಹಿರಿಯ ಸಾಹಿತಿಗಳು ಸ್ನೇಹಿತರು ಹಾಗೂ ಅಪಾರ ಶಿಷ್ಯವೃಂದ ಭಾಗವಹಿಸಿದ್ದರು.

See also  ಅಸ್ಲಾಂ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಅರೆಸ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು