News Kannada
Friday, September 30 2022

ಮೈಸೂರು

ಊರಿನಿಂದ ಬಹಿಷ್ಕಾರ: ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ - 1 min read

Photo Credit :

ಊರಿನಿಂದ ಬಹಿಷ್ಕಾರ: ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ

ಮೈಸೂರು: ಊರಿನಿಂದ ಬಹಿಷ್ಕಾರ ಹಾಕಿದ ಕುಟುಂಬದ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಂಜನಗೂಡು ತಾಲ್ಲೂಕಿನ ಮುದ್ದನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.

ನಂಜನಗೂಡು ತಾಲ್ಲೂಕಿನ ಮುದ್ದನಹಳ್ಳಿ ಗ್ರಾಮದ ಒಂದೇ ಜಾತಿಗೆ ಸೇರಿದ ಕುಟುಂಬದವರು ಊರ ಹಬ್ಬಕ್ಕೆ ದೇಣಿಗೆ ಸಂಗ್ರಹಿಸುವಾಗ ರೇವಣ್ಣ ಕುಟುಂಬದವರು ದೇಣಿಗೆ ಕೊಡಲು ಒಪ್ಪದಿದ್ದಾಗ ಆ ಕುಟುಂಬವನ್ನು ಬಹಿಷ್ಕಾರ ಹಾಕಿ ಯಾರ ಜೊತೆನೂ ಮಾತನಾಡದಂತೆ ಊರ ಹೊರಗಿನ ತೋಟದಲ್ಲಿ ಗುಡಿಸಲು ಹಾಕಿ ವಾಸ ಮಾಡುವಂತೆ ಬಹಿಷ್ಕಾರ ಹಾಕಿದರು. ಇದಕ್ಕೆ ರೇವಣ್ಣ ಮಗ ಹಾಗೂ ಸೊಸೆ ಒಪ್ಪದೆ ಊರ ಮನೆಯಲ್ಲೆ ವಾಸವಿದ್ದರು. ಆದರೆ ರೇವಣ್ಣ ಹಾಗೂ ಹೆಂಡತಿ ಮತ್ತು ವಿವಾಹಿತೆ ಮಗಳು ಹಾಗೂ ಮ್ಮೊಮ್ಮಕಳ ಜೊತೆ ಊರ ಹೊರಗಿನ ತೋಟದಲ್ಲಿ ಗುಡಿಸಿಲಿನಲ್ಲಿ ವಾಸವಿದ್ದರು.

ಮಗಳು ನಂಜನಗೂಡಿನ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಹೋಗಿ ಸೋಮವಾರ ಸಂಜೆ ಊರಿಗೆ ತೆರಳುವಾಗ ಮಾರ್ಗ ಮದ್ಯ ಸಿದ್ದಪ್ಪ ಮತ್ತು ನಂಜುಡಸ್ವಾಮಿ ಈಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಮಹಿಳೆ ಕಿರುಚಿದಾಗ ಪಕ್ಕದಲ್ಲೆ ಇದ್ದ ಕೆಇಬಿ ನೌಕರರು ತಕ್ಷಣ ಬಂದು ಮಹಿಳೆಯನ್ನು ರಕ್ಷಿಸಿ ಕೆ.ಆರ್. ಆಸ್ಪತ್ರೆಗೆ ಕಳುಹಿಸಿದ್ದಾರೆ.

ಆಸ್ಪತ್ರೆ ಕಾಂಪೌಂಡಿನಲ್ಲಿ ರಾತ್ರಿ ಕಳೆದ ಸಂತ್ರಸ್ಥರು:
ಅತ್ಯಾಚಾರ ಯತ್ನದಲ್ಲಿ ನಿತ್ರಾಣರಾಗಿದ್ದ ಸಂತ್ರಸ್ಥೆಗೆ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ ಪಕ್ಕದಲ್ಲೆ ಇದ್ದ ಇನ್ನೊಂದು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದಾಗ ಅಲ್ಲೂ ನಿರಾಕರಿಸಿದರಿಂದ ಸಂತ್ರಸ್ಥೆ ಮಹಿಳೆ ಸೋಮವಾರ ರಾತ್ರಿ ಕಾಂಪೌಂಡ್ ನಲ್ಲೆ ಮಲಗಿ ರಾತ್ರಿ ಕಳೆದಳು. ಕೊನಗೆ ನಿನ್ನೆ ರೈತ ಸಂಘ ಇತರ ಸಂಘಟನೆಗಳು ಆಸ್ಪತ್ರೆ ಬಂದಾಗ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿಗಳು ನಿನ್ನೆಯಿಂದ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಈ ಸಂಬಂದ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

See also  ಇನ್ಮುಂದೆ ಬಂಡೀಪುರ ಅರಣ್ಯ ಸಿಬ್ಬಂದಿಗೆ ಸುಧಾರಿತ ವೈರ್ ಲೆಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು