News Kannada
Tuesday, October 04 2022

ಮೈಸೂರು

ವಿಶ್ವಾಸ ದ್ರೋಹಿ ಸಿಎಂನ ಮುಖ ನೋಡಲೂ ಇಷ್ಟಪಡಲ್ಲ: ಶ್ರೀನಿವಾಸ್ ಪ್ರಸಾದ್ - 1 min read

Photo Credit :

 ವಿಶ್ವಾಸ ದ್ರೋಹಿ ಸಿಎಂನ ಮುಖ ನೋಡಲೂ ಇಷ್ಟಪಡಲ್ಲ: ಶ್ರೀನಿವಾಸ್ ಪ್ರಸಾದ್

ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಮುಖವನ್ನು ನೋಡಲು ಇಷ್ಟಪಡುವುದಿಲ್ಲ, ಅವನೊಬ್ಬ ವಿಶ್ವಾಸ ದ್ರೋಹಿ, ನಾಯಕತ್ವ ಬದಲಾವಣೆ ಆಗಲೇಬೇಕು ಕಾದು ನೋಡುತ್ತೇವೆ ಎಂದು ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ತೀವ್ರ ವಾಗ್ದಳಿ ನಡೆಸಿದ್ದಾರೆ.

CM is an opportunist and a deceiver, alleges Srinivas Prasad-1ಖಾಸಗಿ ಹೋಟೆಲ್ ನಲ್ಲಿ ಸೌಹಾರ್ದಯುತ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಸುಮಾರು 80 ನಿಮಿಷಗಳ ಕಾಲ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಹದ್ಯೋಗಿಗಳ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದರು. ಶ್ರೀನಿವಾಸ್ ಪ್ರಸಾದ್ ತಮ್ಮ 42 ವರ್ಷಗಳ ರಾಜಕೀಯ ಜೀವನದ ಬಗ್ಗೆ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷಕ್ಕೆ ಪೆಟ್ಟು ಕೊಡುವಷ್ಟು ದೊಡ್ಡವನ್ನಲ್ಲ, ಹಾಗಂತ ನಾನು ಸೋಲನ್ನು ಒಪ್ಪಿಕೊಂಡು ಸುಮ್ಮನೆ ಕೂರುವುದಿಲ್ಲ. ಸಿಎಂ ಅಹಿಂದ ಪ್ರಾರಂಭಿಸಿದಾಗ ಆಗ ನಾನು ಜೆಡಿಎಸ್ ನಲ್ಲೆ ಇದ್ದೆ.  ಅಹಿಂದ ಸಮಾವೇಶಕ್ಕೆ ಚಾಲನೆ ನೀಡುವಂತೆ ಅಂಗಲಾಚಿದರು. ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿದ್ದಾಗ ಮಲ್ಲಿಕಾರ್ಜುನ ಖರ್ಗೆ, ಕಾಗೋಡು ತಿಮ್ಮಪ್ಪ, ಧರಂಸಿಂಗ್ ನಮ್ಮ ಮನೆಗೆ ಬಂದು ಪ್ರಚಾರ ಮಾಡುವಂತೆ ಕೇಳಿ ಕೊಂಡರು. ಆಗ ನಾನು ಅಂಬರೀಷ್, ಶ್ರೀಕಂಠ ದತ್ತ ಒಡೆಯರ್ ಸಿದ್ದರಾಮಯ್ಯನವರಿಗೆ ಮರುಜನ್ಮ ಕೊಟ್ಟರು. ಈಗ ನಮ್ಮಗೆ ವಿಶ್ವಾಸ ದ್ರೋಹ ಮಾಡಿದ್ದಾನೆ. ಇವನ್ನೊಬ್ಬ ಹೊಟ್ಟೆಹಿಚ್ಚಿನ ಅವಕಾಶವಾದಿ ವ್ಯಕ್ತಿ ಎಂದರು. ಇಂತಹ ವ್ಯಕ್ತಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟವಾಗುವ ಕಾಲ ದೂರವಿಲ್ಲ ಎಂದರು.

80 ಲಕ್ಷ ವಾಚ್ ಕಟ್ಟುವ ಈ ಮನುಷ್ಯ ಸಮಾಜವಾದಿಯೇ, ಯಾರೂ ಕೊಟ್ಟ ವಾಚನ್ ಧರಿಸಿ ಮತ್ತೆ ವಾಪಸ್ಸ್ ನೀಡಲು ಈತ ಸಣ್ಣ ಮಗುವೇ ಎಂದರು. ಕಾಂಗ್ರೆಸ್ ಹೈಕಮಾಂಡ್ ಗೆ ಎಲ್ಲವೂ ತಿಳಿಸಿದ್ದೇನೆ. ನಾನು ಎಸ್ಎಂ ಕೃಷ್ಣರನ್ನ ಭಿನ್ನಮತೀಯ ನಾಯಕತ್ವ ವಹಿಸಿ ಎಂದು ಕೇಳಿಲ್ಲ. ಬಹುಮತದಿಂದ ಒಪ್ಪಿದರೆ ಸಿಎಂ ಬದಲಿಸಿ ಎಂದು ಹೈಕಮಾಂಡ್ ಗೆ ಹೇಳುತ್ತೇನೆ.

ರಾಜ್ಯ ಸಚಿವ ಸಂಪುಟದಲ್ಲಿ ಸೂಟ್ ಕೇಸ್ ಗಿರಾಕಿಗಳೇ ಜಾಸ್ತಿಯಾಗಿದ್ದು, ಮುಖ್ಯಮಂತ್ರಿಗೆ ಸಂವಿಧಾನದ ಬಗ್ಗೆ ನಂಬಿಕೆ ಇಲ್ಲ ಲೋಕಾಯುಕ್ತ ಕೆಪಿಎಸ್ಸ್ಸಿ ವಿಚಾರದಲ್ಲಿ ಸಿಎಂ ನಡೆದುಕೊಳ್ಳುತ್ತಿರುವ ರೀತಿ ರಾಜ್ಯದ ಜನತೆಗೆ ಗೊತ್ತಿದೆ. ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಪ್ರಕರಣದಲ್ಲಿ ಇವರು ನಡೆದುಕೊಂಡ ರೀತಿ ಜನತೆಗೆ ತಿಳಿದಿದೆ.  ಸಿಎಂ ಸಿದ್ದರಾಮಯ್ಯ ಅವರ ಸಣ್ಣತನ ಗುಂಪುತನ ಸರ್ವಧಿಕಾರ ಧೋರಣೆ ಕರ್ನಾಟಕಕ್ಕೆ ಕಾಂಗ್ರೆಸ್ ಧೂಳಿಪಟ ಮಾಡುವ ದಿನ ದೂರವಿಲ್ಲ ಎಂದರು.

See also  ಮೈಸೂರು: ಮೂರು ದಿನ ಯೋಗ ದಸರಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು