ಮೈಸೂರು: ಪಾಲಿಕೆಯ ಕಸದ ತೊಟ್ಟಿಯಲ್ಲಿ ನವಜಾತ ಹೆಣ್ಣು ಶಿಶುವನ್ನು ಚೀಲದಲ್ಲಿ ಕಟ್ಟಿ ಹಾಕಿ ಎಸೆದು ಹೊಗಿರುವ ಘಟನೆ ನಗರದ ಅಗ್ರಹಾರದ ನಳಪಾಕ್ ಹೊಟೇಲ್ ಬಳಿ ನಡೆದಿದೆ.
ನಗರದ ಅಗ್ರಹಾರ ಬಳಿಯ ನಳಪಾಕ್ ಹೋಟೆಲ್ ಬಳಿ ಇರುವ ಮಹಾನಗರ ಪಾಲಿಕೆಯ ಕಸದ ತೊಟ್ಟಿಯಲ್ಲಿ ಹೆಣ್ಣು ಶಿಶುವನ್ನು ಯಾರೋ ದುಷ್ಕರ್ಮಿಗಳು ಚೀಲದಲ್ಲಿ ಕಟ್ಟಿ ಕಸದ ತೊಟ್ಟಿಯೊಳಗೆ ಬಿಸಾಡಿ ಹೋಗಿದ್ದು, ಬೆಳ್ಳಿಗೆ ಕಸ ತುಂಬುವಾಗ ಮಹಾನಗರ ಪಾಲಿಕೆಯ ಸಿಬ್ಬಂದಿಯವರು ಚೀಲವನ್ನು ಎತ್ತಿ ಹಾಕುವಾಗ ಮಗುವಿನ ಅಳು ಕೇಳಿಸಿ ತಕ್ಷಣ ಚೀಲ ಬಿಚ್ಚಿ ನೋಡಿದಾಗ ನವಜಾತ ಹೆಣ್ಣು ಶಿಶು ಇರುವುದು ಪತ್ತೆಯಾಗಿದೆ. ತಕ್ಷಣ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸಂಬಂಧ ಮಗುವನ್ನು ರಕ್ಷಿಸಿ ಮಹಾನಗರ ಪಾಲಿಕೆಯ ದಿನಗೂಲಿ ನೌಕರರು ಕೆ.ಆರ್. ಠಾಣೆಗೆ ತೆರಳಿ ವಿಷಯ ತಿಳಿಸಿದ್ದರು.