News Kannada
Monday, October 03 2022

ಮೈಸೂರು

ಆಪೆ ಆಟೊ-ಬೈಕ್ ನಡುವೆ ಡಿಕ್ಕಿ: ಪೊಲೀಸ್ ಪೇದೆ ಸಾವು - 1 min read

Photo Credit :

ಆಪೆ ಆಟೊ-ಬೈಕ್ ನಡುವೆ ಡಿಕ್ಕಿ: ಪೊಲೀಸ್ ಪೇದೆ ಸಾವು

ಮೈಸೂರು: ಸರಕು ಸಾಗಣೆ ಮಾಡುವ ಆಪೆ ಆಟೊ ಹಾಗೂ ಹೀರೊ ಹೋಂಡ ಬೈಕ್ ನಡುವೆ  ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಚಲಿಸುತ್ತಿದ್ದ ಪೊಲೀಸ್ ಪೇದೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ಹುಣಸೂರು ತಾಲ್ಲೂಕಿನಲ್ಲಿ  ಕೊತ್ತೇಗಾಲ ಗ್ರಾಮದ ಬಳಿ ನಡೆದಿದೆ.

ತಾಲ್ಲೂಕಿನ ಕೊತ್ತೇಗಾಲ ಗ್ರಾಮ ವಾಸಿ ರವಿ(35) ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ.  ರವಿ ಹುಣಸೂರಿನ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೊತ್ತೇಗಾಲ ಗ್ರಾಮದಲ್ಲಿ ವಾಸವಿದ್ದ ರವಿ ಪ್ರತಿದಿನ ಗ್ರಾಮದಿಂದ ಹುಣಸೂರಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಎಂದಿನಂತೆ ಕೆಲಸಕ್ಕೆ ಹೋಗಲು ಇಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ ತಮ್ಮ  ಬೈಕ್ ನಲ್ಲಿ ತೆರಳುತ್ತಿದ್ದಾಗ ಎದುರು ಗಡೆಯಿಂದ  ವೇಗವಾಗಿ ಬಂದ ಆಪೆ ಆಟೋ ಡಿಕ್ಕಿ ಹೊಡೆದಿದೆ. ಇದರಿಂದ ಪೇದೆ ರವಿ ತೀವ್ರವಾಗಿ ಗಾಯಗೊಂಡು ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟರು ಎಂದು ಹೇಳಲಾಗಿದೆ.

ಸುದ್ಧಿ ತಿಳಿದ ತಕ್ಷಣ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಮಹಜರಿಗಾಗಿ ಹುಣಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಡಿಕ್ಕಿ ಹೊಡೆದ ಆಪೆ ಆಟೊವನ್ನು ವಶಕ್ಕೆ ತೆಗೆದುಕೊಂಡು ಅಪಘಾತವೆಸಗಿ ತಪ್ಪಿಸಿಕೊಂಡು ಓಡಿ ಹೋಗಿರುವ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

See also  ಸರ್ಕಾರಿ ಸೇವೆಯಲ್ಲಿ ಇದ್ದುಕೊಂಡೆ ಸಮಾಜ ಸೇವೆ ಮಾಡಬೇಕೆಂದೇನೂ ಇಲ್ಲ : ಜಿಲ್ಲಾಧಿಕಾರಿ ಡಿ.ರಂದೀಪ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು