News Kannada
Monday, September 26 2022

ಮೈಸೂರು

ಚಾಮುಂಡೇಶ್ವರಿ ವರ್ಧಂತಿಯಲ್ಲಿ ಯದುವೀರ್ ದಂಪತಿ - 1 min read

Photo Credit :

ಚಾಮುಂಡೇಶ್ವರಿ ವರ್ಧಂತಿಯಲ್ಲಿ ಯದುವೀರ್ ದಂಪತಿ

ಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ವರ್ಧಂತ್ಯುತ್ಸವ ಚಾಮುಂಡಿಬೆಟ್ಟದಲ್ಲಿ ಇಂದು ವಿಜೃಂಭಣೆಯಿಂದ ಜರುಗಿತು. ಅಸಂಖ್ಯಾತ ಭಕ್ತರು ದೇವಿಯ ಜನ್ಮೋತ್ಸವದಲ್ಲಿ ಪಾಲ್ಗೊಂಡು ವಿನೀತರಾದರು. ಕಳೆದ ತಿಂಗಳಷ್ಟೇ ವಿವಾಹವಾದ ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ಯದುವೀರ್ ಒಡೆಯರ್ ಅವರು ಪತ್ನಿ ತ್ರಿಷಿಕಾಕುಮಾರಿ ಹಾಗೂ ತಾಯಿ ಪ್ರಮೋದಾದೇವಿ ಒಡೆಯರ್ ಜೊತೆ ಆಗಮಿಸಿ ವರ್ಧಂತಿಯಲ್ಲಿ ಭಾಗಿಯಾಗಿ ಗಮನ ಸೆಳೆದರು.

ಚಾಮುಂಡಿಬೆಟ್ಟದಲ್ಲಿ ದೇವಿಯ ಜನ್ಮೋತ್ಸವದ ಪ್ರಯುಕ್ತ ಉತ್ಸವಮೂರ್ತಿ ಚಿನ್ನದ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಕಳೆದ ತಿಂಗಳಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ಯದುವೀರ್ ಒಡೆಯರ್, ಪತ್ನಿ ತ್ರಿಷಿಕಾಕುಮಾರಿ ಹಾಗೂ ತಾಯಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಉತ್ಸವದ ಕೊನೇ ತನಕ ಇದ್ದದ್ದು ಗಮನ ಸೆಳೆಯಿತು.

ನಾಡಿನ ಅಧಿದೇವತೆಯ ವರ್ಧಂತಿಯಲ್ಲಿ ಸಾವಿರಾರು ಮಂದಿ ಭಕ್ತರು ಮುಂಜಾನೆಯಿಂದಲೇ ಬೆಟ್ಟಕ್ಕೆ ಆಗಮಿಸಿದ್ದರು. ಬೆಳ್ಳಿ ಪಲ್ಲಕ್ಕಿ ಉತ್ಸವ ಆರಂಭವಾಗುತ್ತಿದ್ದಂತೆ ದೇವಿಗೆ ಜೈಕಾರ ಹಾಕಿದರು. ದೇವಾಲಯದ ಸುತ್ತಾ ಮೂರು ಭಾರಿ ಉತ್ಸವ ಮೂರ್ತಿ ಪ್ರದಕ್ಷಿಣೆ ಹಾಕಿದ ನಂತರ ಸ್ವಸ್ಥಾನ ತಲುಪಿತು. ಉತ್ಸವದುದ್ದಕ್ಕೂ ತೆರಳಿದ ಯದೂವೀರ್ ದಂಪತಿ ದೇವಿಗೆ ನಮಿಸಿ ಆಶೀರ್ವಾದ ಬೇಡಿದರು.

ರಾಜ್ಯಾದ್ಯಂತ ನಿನ್ನೆಯಿಂದ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಚಾಮುಂಡಿಬೆಟ್ಟಕ್ಕೆ ವಿಶೇಷ ಬಸ್ ಸೌಕರ್ಯವಿಲ್ಲದ ಕಾರಣ ಭಕ್ತಾಧಿಗಳು ಖಾಸಗಿ ಬಸ್ ಗಳಲ್ಲಿ ಬೆಟ್ಟ ತಲುಪಿದರು. ಆಷಾಢಮಾಸದಲ್ಲಿ ಖಾಸಗಿ ವಾಹನಗಳಿಗೆ ಬೆಟ್ಟಕ್ಕೆ ಪ್ರವೇಶ ನಿರ್ಬಂಧ ಮಾಡಿರುವ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಗಳಲ್ಲಷ್ಟೇ ತೆರಳಬೇಕಿತ್ತು. ಇದಕ್ಕೂ ಸಹ ಮುಷ್ಕರದ ಬಿಸಿ ತಟ್ಟಿತ್ತು. ಜಿಲ್ಲಾಡಳಿತ ಮುನ್ನೆಚ್ಚರಿಕೆಯಾಗಿ 25ಕ್ಕೂ ಹೆಚ್ಚು ಖಾಸಗಿ ಬಸ್ ಗಳು ಮತ್ತು ಕ್ಯಾಬ್ ಗಳ ವ್ಯವಸ್ಥೆ ಮಾಡಿತ್ತು. ನಗರದ ಲಲಿತಮಹಲ್ ಹೆಲಿಪ್ಯಾಡ್ ನಿಂದ ಭಕ್ತರು ಖಾಸಗಿ ಬಸ್ ಗಳಲ್ಲೇ ಬೆಟ್ಟಕ್ಕೆ ತೆರಳಿದರು. ಆದರೆ ಸಾರಿಗೆ ಬಸ್ ದರ 10 ರೂ.ಗಳಾದರೆ ಇಂದು ಮಾತ್ರ 15 ರೂ. ನಿಗದಿ ಮಾಡಿದ್ದಕ್ಕೆ ಭಕ್ತರು ಬೇಸರ ವ್ಯಕ್ತಪಡಿಸಿದರು.

ಚಿತ್ರನಟಿ ಮತ್ತು ವಿಧಾನಪರಿಷತ್ ಸದಸ್ಯೆ ತಾರಾ ಹಾಗೂ ಬ್ರಹ್ಮಾಂಡ ಗುರೂಜಿ ನರೇಂದ್ರಬಾಬು ಶರ್ಮಾ ಅವರು ಉತ್ಸವದಲ್ಲಿ ಭಾಗಿಯಾಗಿದ್ದರು.

See also  ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು