News Kannada
Saturday, October 01 2022

ಮೈಸೂರು

ರೋಗಿಗಳ ಪಾಲಿಗೆ ಈತನೇ ಸೇವಕ.. ಆದರೆ ಡಾಕ್ಟರಲ್ಲ…..! - 1 min read

Photo Credit :

ರೋಗಿಗಳ ಪಾಲಿಗೆ ಈತನೇ ಸೇವಕ.. ಆದರೆ ಡಾಕ್ಟರಲ್ಲ…..!

ಮೈಸೂರು: ಮೈಸೂರಿನ ಕೃಷ್ಣರಾಜ ಸರ್ಕಾರಿ ಆಸ್ಪತ್ರೆ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ. ಬಡವರ ಪಾಲಿನ ಸಂಜೀವಿನಿ ಅಂತಾನೇ ಹೆಸರಾಗಿದೆ ಈ ಆಸ್ಪತ್ರೆ. ಆದರೆ ದೇವರು ವರ ಕೊಟ್ರೂ ಪೂಜಾರಿ ವರ ಕೊಡಲ್ಲಾ ಅನ್ನೋ ಹಾಗೆ ಇಲ್ಲಿ ಕೆಲವು ಕಡೆ ಕಾಸಿಲ್ಲದೆ ಚಿಕಿತ್ಸೆ ಇಲ್ಲಾ ಅಂತಾ ಕೂಡ ಕೆಲವರು ಹೇಳ್ತಾರೆ.  ಇಂತಹ ಪರಿಸ್ಥಿತಿಯಲ್ಲೂ ಇಲ್ಲೋಬ್ಬ ವ್ಯಕ್ತಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಯಾರ ನೆರವು ಬಯಸದೆ ರೋಗಿಗಳ ಸೇವೆ ಮಾಡುತ್ತಿದ್ದಾನೆ.

ಹೌದು ನೀವು ನಂಬಲೇ ಬೇಕು ಇವರ ಹೆಸರು ಪ್ರೀತಂ ಅಂತ. ನೋಡೋಕೆ ಮಾನಸಿಕ ಅಸ್ವಸ್ಥನಂತೆ ಕಂಡರೂ, ಮನಸ್ಸು ಮಾತ್ರ ಬಲು ದೊಡ್ಡದು. ಬಡವರ ಪಾಲಿಗೆ ದೇವರಂತ ಮನುಷ್ಯ. ಈತ ಕೆಆರ್ ಆಸ್ಪತ್ರೆಯ ರೋಗಿಗಳ ಪಾಲಿನ ಅನಾಥ ರಕ್ಷಕ. ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಸಹಾಯ ಬೇಕಂದ್ರೆ ತಟ್ಟನೆ ನೆನಪಾಗೋದು ಈ ಪ್ರೀತಂ. ಯಾರ ಬಳಿಯೂ ಒಂದು ರೂಪಾಯಿ ಹಣ ಪಡೆಯದೆ ರೋಗಿಗಳ ಕಡೆಯವರು ಔಷಧಿಗೆ ಆಗುವಷ್ಟು ಹಣ ಹಾಗೂ ಚೀಟಿ ನೀಡಿದ್ರೆ ಸಾಕು.  ತಾನೆ ಮೆಡಿಕಲ್ ಸ್ಟೋರ್ ಗೆ ತೆರಳಿ ಔಷಧಿಯನ್ನು ಜೊತೆಗೆ ಮಿಕ್ಕ ಹಣವನ್ನು ತಂದು ಕೈಗೆ ಇಡುತ್ತಾನೆ.

ಪ್ರೀತಂ ಹಿನ್ನೆಲೆ ನೋಡೊದಾದ್ರೆ ಈತನಿಗೆ ಯಾರು ವಾರಸುದಾರರು ಇಲ್ಲಾ ಅಂತೇನಲ್ಲ. ಸತತ 18 ವರ್ಷಗಳಿಂದ ಮೈಸೂರಿನ ಕೆ.ಆರ್. ಆಸ್ಪತ್ರೆಯನ್ನೇ ತನ್ನ ವಾಸಸ್ಥಳವನ್ನಾಗಿಸಿಕೊಂಡಿರೊ ಪ್ರೀತಂ ಅವರದ್ದು ಮೂಲತಃ ಬೆಂಗಳೂರಿನ ಸದಾಶಿವ ನಗರ. ಅಕ್ಕ ವೈದ್ಯೆ, ತಮ್ಮ ಇಂಜಿನಿಯರ್ ಆದರೂ ಬಡ ರೋಗಿಗಳು ಅಂದ್ರೆ ಈತನಿಗೆ ಎಲ್ಲಿಲ್ಲದ ಕಾಳಜಿ. ಹಬ್ಬದ ದಿನಗಳಲ್ಲಿ ಮಾತ್ರವೇ ಮನೆಗೆ ತೆರಳುವ ಇವರು ಎರಡು ಮೂರು ದಿನ ಮನೆಯಲ್ಲಿದ್ದು ವಾಪಸ್ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಬಂದು ಬಿಡ್ತಾರೆ.ಇನ್ನೂ ಯಾಕೆ ಈ ಸೇವೆ ಮಾಡ್ತೀರಾ ಅಂದ್ರೆ ಸುಮ್ನೆ ಮಾಡ್ತೀನಿ. ರೋಗಿಗಳ ಸೇವೆ ಮಾಡೋದ್ರಿಂದ ಖುಷಿ ಸಿಗುತ್ತೆ ಅಂತಾರೆ.

ಆಸ್ಪತ್ರೆಯಲ್ಲಿ ಪ್ರೀತಂ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸೊ ಆಸ್ಪತ್ರೆ ಮಂದಿ ಪ್ರೀತಂ ಅಂದ್ರೆ ಆತನೊಬ್ಬ ಪ್ರತಿಫಲಾಪೇಕ್ಷೆ ಇಲ್ಲದ ಮುಗ್ಧ ಜೀವಿ ಅಂತಾರೆ. ಕೆಸರಿನಲ್ಲಿ ಅರಳುವ ಕಮಲದಂತೆ, ಪಾಪದ ಕೂಪದಂತಿರುವ ಕೆ.ಆರ್ ಆಸ್ಪತ್ರೆಯಲ್ಲಿ ಪ್ರೀತಂ ನಳನಳಿಸುತ್ತಿದ್ದಾರೆ. ಮಾನವೀಯ ಮೌಲ್ಯಗಳು ಕಾಣೆಯಾಗಿ, ಪರಸ್ಪರ ನಂಬಿಕೆ ಕಳೆದುಕೊಂಡಿರುವ ಕಲಿಯುಗದಲ್ಲೂ ಸತ್ಯ ಇದೆ. ಒಳ್ಳೆಯವರು ಇದ್ದರೇ ಎಂಬುದಕ್ಕೆ ಈ ಪ್ರೀತಂ ಸಾಕ್ಷಿ.  

See also  ಅಕ್ರಮ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು