News Kannada
Tuesday, March 28 2023

ಮೈಸೂರು

ರಾತ್ರೋ ರಾತ್ರಿ ಸಿಎಂ ಬೆಂಗಳೂರಿಗೆ

Photo Credit :

ರಾತ್ರೋ ರಾತ್ರಿ ಸಿಎಂ ಬೆಂಗಳೂರಿಗೆ

ಮೈಸೂರು: ತಮ್ಮ ಪುತ್ರನ ಅಂತ್ಯಕ್ರಿಯೆ ಮುಗಿಸಿ ರಾತ್ರೋ ರಾತ್ರಿ ಸಿಎಂ ಹಾಗೂ ಕುಟುಂಬ ಬೆಂಗಳೂರಿಗೆ ಹೊರಟು ಹೋಗಿದ್ದು ಸಾಂತ್ವನ ಹೇಳಲು ಬೆಳಗ್ಗೆ ಬಂದ ಜನಕ್ಕೆ ನಿರಾಸೆಯಾಗಿದೆ.

ತಮ್ಮ ಪುತ್ರನ ಅಕಾಲಿಕ ಮರಣದಿಂದ ವಿಚಲಿತರಾಗಿರುವ ಸಿಎಂ ಸಿದ್ದರಾಮಯ್ಯ ಮೂರು ದಿನಗಳ ಕಾಲಗಳ ಕಾಲ ಮೈಸೂರಿನ ಮನೆಯಲ್ಲೇ ಉಳಿದುಕೊಂಡು ವಿಶ್ರಾಂತಿ ಪಡೆಯಲು ಬಯಸಿದರು. ಆದರೆ ಈಗಾಗಲೇ ನಾಲ್ಕು ದಿನಗಳಿಂದ ತೀವ್ರವಾಗಿ ಬಳಲಿರುವ ಸಿದ್ದರಾಮಯ್ಯವನರಿಗೆ ಬಿಪಿ ಮತ್ತೆ ಶುಗರ್ ಹೆಚ್ಚಾಗಿದ್ದು ಜ್ವರ ಕಾಣಿಸಿಕೊಂಡಿದೆ. ಅವರಿಗೆ ವಿಶ್ರಾಂತಿಯ ಅವ್ಯಶಕತೆ ಇರುವುದರಿಂದ ಮೈಸೂರಿನಲ್ಲಿ ಉಳಿದುಕೊಂಡರೆ ಕ್ಷೇತ್ರದ ಜನ ಸಾಂತ್ವಾನ ಹೇಳಲು ಬರುವುದರಿಂದ ತೊಂದರೆಯಾಗುತ್ತದೆ ಎಂಬ ಆಪ್ತರ ಸಲಹೆ ಮೇರೆಗೆ ಹಾಗೂ ನಿನ್ನೆ ನಗರದ ಕೋರ್ಟ್ ಆವರಣದಲ್ಲಿ ಕಚ್ಚಾ ಬಾಂಬ್ ಸ್ಪೋಟದ ಹಿನ್ನಲ್ಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಗುಪ್ತಚರ ಇಲಾಖೆ ನೀಡಿದ ಸಲಹೆಯಂತೆ ಬೆಂಗಳೂರಿನ ತಮ್ಮ ಅಧಿಕೃತ ನಿವಾಸದಲ್ಲಿ ವಿಶ್ರಾಂತಿ ಪಡೆಯಲು ಬೆಂಗಳೂರಿಗೆ ರಾತ್ರೋರಾತ್ರಿ ಹೊರಟು ಹೋದರು.
 
ಆಗಸ್ಟ್ 4 ರಂದು ಮೈಸೂರಿಗೆ ಸಿಎಂ:
ತಮ್ಮ ಮಗನ ಐದನೇ ದಿನದ ಹಾಲು ತುಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲು ಆ.4ರಂದು ಮೈಸೂರಿಗೆ ಸಿಎಂ ಆಗಮಿಸಲ್ಲಿದ್ದು ಅಂದು ತಮ್ಮ ಕುಟುಂಬದವರೊಂದಿಗೆ ಟಿ.ಕಾಟ್ಟೂರಿನ ತಮ್ಮ ತೋಟದ ಮನೆಗೆ ಆಗಮಿಸಿ ದಿವಂಗತ ಮಗನ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ. ಅಂದು ಕ್ಷೇತ್ರದ ಜನರು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.  

See also  ರಾ.ಹೆ. ವೃತ್ತಕ್ಕೆ ಮೈಸೂರು ಪಾಲಿಕೆ ಸದಸ್ಯರ ಹೆಸರಿಡಲು ಪ್ರತಾಪ ಸಿಂಹ ವಿರೋಧ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು