News Kannada
Saturday, October 08 2022

ಮೈಸೂರು

ಕೋರ್ಟ್ ಬಾಂಬ್ ಪ್ರಕರಣ: ನಿಷೇಧಿತ ಆಲ್ ಉಮ್ಮಾ ಸಂಘಟನೆಯ ಕೈವಾಡದ ಶಂಕೆ? - 1 min read

Photo Credit :

ಕೋರ್ಟ್ ಬಾಂಬ್ ಪ್ರಕರಣ: ನಿಷೇಧಿತ ಆಲ್ ಉಮ್ಮಾ ಸಂಘಟನೆಯ ಕೈವಾಡದ ಶಂಕೆ?

ಮೈಸೂರು: ಮೈಸೂರು ಕೋರ್ಟನ ಬಾಂಬ್ ಪ್ರಕರಣದಲ್ಲಿ ತಮಿಳುನಾಡಿನ ನಿಷೇಧಿತ ಅಲ್  ಉಮ್ಮಾ ಸಂಘಟನೆಯ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನಲ್ಲೆಯಲ್ಲಿ ಕೇಂದ್ರ ಗುಪ್ತಚರ ತಂಡ ಸ್ಪೋಟದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

ಸಾಂಸ್ಕೃತಿಕ ನಗರಿಯ ನ್ಯಾಯಾಲಯದ ಆವರಣದ ಶೌಚಾಲಯದಲ್ಲಿ ಕುಕ್ಕರ್ ನಲ್ಲಿ ಬಾಂಬ್ ಇಟ್ಟು ಸ್ಪೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಷ್ಟ್ರೀಯಾ ತನಿಖಾ ತಂಡದ ವಿದಿ ವಿಜ್ಞಾನ ತಜ್ಞರು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದು ಇಂದು ಕೇಂದ್ರ ಗುಪ್ತಚರ ಇಲಾಖೆಯ ವಿಶೇಷ ತಂಡ ಸ್ಪೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೆ.

ನಿಷೇಧಿತ ಆಲ್ಗುಮಾ ಸಂಘಟನೆಯ ಕೈವಾಡದ ಶಂಕೆ:
ತಮಿಳುನಾಡಿನ ನಿಷೇಧಿತ ಆಲ್ ಉಮ್ಮಾ ಸಂಘಟನೆಯ ಕೈವಾಡವಿರುವ ಬಗ್ಗೆ ತನಿಖಾ ತಂಡಗಳು ತನಿಖೆ ನಡೆಸುತ್ತಿದ್ದು ಕೇರಳದ ಕೊಲ್ಲಂ ನ್ಯಾಯಾಲಯ, ಆಂಧ್ರದ ಚಿತ್ತೂರಿನ ನ್ಯಾಯಾಲಯ ಬೆಂಗಳೂರಿನ ಮಲೇಶ್ವರಂನ ಬಿಜೆಪಿ ಕಛೇರಿಯ ಎದುರು ನಡೆದ ಬಾಂಬ್ ಸ್ಪೋಟದಲ್ಲಿ ಬಳಸಿರುವ ಕುಕ್ಕರ್ ಮಾದರಿಯ ಸ್ಪೋಟದಲ್ಲಿ ಸಾಮ್ಯತೆಯಿದ್ದು ಇದನ್ನು ನಿಷೇಧಿತ ಆಲ್ಗುಮಾ ಸಂಘಟನಯೇ ಮಾಡಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖಾ ತಂಡ ಇಂದು ತನಿಖೆ ನಡೆಸುತ್ತಿದೆ.

ಎರಡನೇ ದಿನವೂ ಶೋಧ:
ನಿನ್ನೆ ರಾಷ್ಟ್ರೀಯಾ ತನಿಖಾ ತಂಡದ ತಜ್ಞರು, ಕೇರಳದ ವಿಶೇಷ ತಂಡ ಅಲ್ಲದೆ ಆಂಧ್ರ ಮತ್ತು ತೆಲಂಗಾಣದ ತನಿಖಾ ತಂಡಗಳು ಇಂದು ಕೇಂದ್ರ ಗುಪ್ತಚರ ಇಲಾಖೆಯೊಂದಿಗೆ ಸ್ಪೋಟ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿ ಪರಸ್ಪರ ಮಾಹಿತಿಯನ್ನು ವಿನಿಮಯ ಮಾಡಿಕೊಂಡು ಯಾವ ಯಾವ ಸ್ಥಳದಲ್ಲಿ ನಡೆದಿರುವ ಸ್ಪೋಟದಲ್ಲಿ ಇರುವ ಸಾಮ್ಯತೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು ಇಂದು ತಮಿಳನಾಡಿನ ವಿಶೇಷ ತಂಡ ಆಗಮಿಸುವ ಸಾಧ್ಯತೆ ಇದೆ.

ತಪ್ಪಿದ ಬಾರಿ ಅನಾಹುತ:
ಮೈಸೂರು ನ್ಯಾಯಾಲಯದ ಶೌಚಾಲಯದಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಹೊಸ ತಿರುವು ಸಿಕಿದ್ದು, ಚಾಮರಾಜನಗರದಿಂದ ಮೈಸೂರು ಮಾರ್ಗವಾಗಿ ತಿರುಪತಿಗೆ ಹೊರಡುವ ರೈಲು ಕೋರ್ಟ್ ಪಕ್ಕದ ಚಾಮರಾಜ ಪುರಂ ರೈಲ್ವೆ ನಿಲ್ದಾಣಕ್ಕೆ 4.20ಕ್ಕೆ ಬರುವ ಸಂದರ್ಭದಲ್ಲಿ ಸ್ಪೋಟಿಸಲು ತಂತ್ರ ರೂಪಿಸಲಾಗಿದ್ದು ಆದರೆ 10 ನಿಮಿಷ ತಡವಾಗಿ ಆಗಮಿಸಿದ ರೈಲಿನಿಂದ ಅಪಾಯ ತಪ್ಪಿದ್ದು ಆ ಸಂದರ್ಭದಲ್ಲಿ ಬೇರೆ ದಾರಿ ಕಾಣದೆ ಕೋರ್ಟ್ ಹಿಂಭಾಗದ ಶೌಚಾಲಯದಲ್ಲಿ ಇಟ್ಟಿರುವ ಶಂಕೆಯನ್ನ ತನಿಖಾಧಿಕಾರಿಗಳು ವ್ಯಕ್ತಪಡಿಸಿದ ಹಿನ್ನಲ್ಲೆಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರೀಯಾ ದಳ ರೈಲ್ವೆ ನಿಲ್ದಾಣದಲ್ಲಿ ಶೋಧ ಕೈಗೊಂಡಿದೆ.  

See also  ಯಡಿಯೂರಪ್ಪ ಸರ್ಕಾರದಿಂದ ಆತ್ಮಹತ್ಯೆ ಭಾಗ್ಯ: ಸದಾನಂದ ಗೌಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು