News Kannada
Thursday, October 06 2022

ಮೈಸೂರು

ಆ. 8-9ರಂದು ಭಾರತ- ಜಪಾನ್ ಅಂತಾರಾಷ್ಟ್ರೀಯ ಸಮ್ಮೇಳನ - 1 min read

Photo Credit :

ಆ. 8-9ರಂದು ಭಾರತ- ಜಪಾನ್ ಅಂತಾರಾಷ್ಟ್ರೀಯ ಸಮ್ಮೇಳನ

ಮೈಸೂರು: ಭಾರತದ ಜೆಎಸ್ ಪಿಇಎಸ್ ಅಮೃತ ಮಹೋತ್ಸವದ ಸಹಯೋಗದೊಂದಿಗೆ ಮೈಸೂರು ವಿಶ್ವವಿದ್ಯಾನಿಲಯ  ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯನಿಲಯದ ನ್ಯಾನೋಟೆಕ್ನಾಲಜಿ ಆ.8-9 ರಂದು ವಿಜ್ಞಾನ ಮತ್ತು ತಂತ್ರಜ್ಞಾನದ ಭವಿಷ್ಯದ ಸವಾಲುಗಳು ಮತ್ತು ಪರಿಹಾರ ಕುರಿತ ಭಾರತ- ಜಪಾನ್ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ಮೈಸೂರು ವಿವಿ ಉಪಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಶನಿವಾರ ತಿಳಿಸಿದರು.

ಭಾರತದ 7ನೇ ಜಪಾನ್ ಸೊಸೈಟಿ ಫರ್ ದಿ ಪ್ರಮೋಷನ್ ಆಫ್ ದಿ ಸೈನ್ಸ್ ಹಾಗೂ ಮೈಸೂರು ವಿವಿ ಶತಮಾನೋತ್ಸವದ ಅಂಗವಾಗಿ ಈ ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದ್ದು, ಸಮ್ಮೇಳನದಲ್ಲಿ 25 ಜಪಾನ್ ವಿಶ್ವವಿದ್ಯಾನಿಲಯದ ಪ್ರತಿನಿಧಿಗಳು ಸಂಶೋಧನೆಗೆ ಮತ್ತು ಶಿಕ್ಷಣದಲ್ಲಿ ತಮ್ಮ ವಿವಿಗಳಲ್ಲಿ ಅವಕಾಶಗಳನ್ನು ತೋರಿಸುವ ಸಲುವಾಗಿ ಮಳಿಗೆಗಳನ್ನು ತೆರೆಯಲಿದ್ದಾರೆ. ಸಮ್ಮೇಳನಕ್ಕೆ ದೇಶದ್ಯಂತ ವಿಜ್ಞಾನಿಗಳು, ಸಂಶೋಧಕರು ಆಗಮಿಸಲಿರುವುದಾಗಿ ತಿಳಿಸಿದರು.

ಸಮ್ಮೇಳನವನ್ನು ಆ.8 ರ ಬೆಳಿಗ್ಗೆ 10 ಗಂಟೆಗೆ ಸೆನೆಟ್ ಭವನದಲ್ಲಿ ಜಪಾನ್ನ ಜೆಎಸ್ಪಿಎಸ್  ಉಪಾಧ್ಯಕ್ಷ ಡಾ.ಮಸಾಯುಕಿ ಇನಾವ್ ಉದ್ಘಾಟನೆ ಮಾಡಲಿದ್ದು, ಹೊಕ್ಕಾಡೋ ವಿವಿಯ ಉಪಾಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಪ್ರೊ.ಇಚಿರೋ ಉದಾ, ಮೈವಿವಿ  ಉಪ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಕೊಡಮಾ ಡಯಾಸುಕಿ,  ಡಾ.ಸುನಿಲ್ ಅಗರ್ ವಾಲ್ ಅತಿಥಿಗಳಾಗಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಹೊಕ್ಕಾಡೋ ವಿಶ್ವವಿದ್ಯಾನಿಲಯದ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ. ಇಚಿರೋ ವುಯೇದಾ  ಮತ್ತು ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ ನಿರ್ದೇಶಕ ಡಾ.ಆರ್.ಕೆ.ಶರ್ಮಾ ಅಧ್ಯಕ್ಷೀಯ ಭಾಷಣ ಮಾಡಲಿದ್ದು, ಸಮ್ಮೇಳನದಲ್ಲಿ 12 ತಾಂತ್ರಿಕ  ಗೋಷ್ಟಿಗಳು  ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ನಡೆಯಲಿವೆ. ಜಪಾನ್ ಮತ್ತು ಭಾರತದ ತಜ್ಞ ಉಪನ್ಯಾಸಕರು 13 ಸಮಗ್ರ ಉಪನ್ಯಾಸ  ನೀಡಲಿದ್ದಾರೆ. 32 ಮೌಖಿಕವಾಗಿ ವಿಷಯ ಮಂಡನೆ ಮಾಡಲಿದ್ದಾರೆ.6 ಮಂದಿ ಆಹ್ವಾನಿತ ಅತಿಥಿಗಳು ತಮ್ಮ ಉಪನ್ಯಾಸ ನೀಡಲಿದ್ದಾರೆ. 400 ಪೋಸ್ಟರ್ ಪ್ರಸೆಂಟೇಶನ್ ಸಮ್ಮೇಳನದಲ್ಲಿರುತ್ತದೆ.

ವಿದ್ಯಾರ್ಥಿಗಳೊಂದಿಗೆ ಸಂವಾದ: ಆ.9 ರಂದು ಇಗ್ನೀಷನ್ ಆಫ್ ಯಂಗ್ ಮೈಂಡ್ಸ್ ಎಂಬ ಶೀರ್ಷಿಕೆಯಡಿ ಜಪಾನ್ ತಜ್ಞ ವಿಜ್ಞಾನಿಗಳೊಂದಿಗೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳು ಸಂವಾದ ನಡೆಸಲಿದ್ದಾರೆ. ಜಪಾನ್ ನ ತಜ್ಞರು ಶೈಕ್ಷಣಿಕ ವ್ಯವಸ್ಥೆ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ಅಭಿವೃದ್ಧಿ ಬಗ್ಗೆ ವಿವರಣೆ ನೀಡಲಿದ್ದಾರೆ.

ಸಮ್ಮೇಳನದಲ್ಲಿ ಭಾಗವಹಿಸಲಿರುವ ತಜ್ಞರು:  ಜಪಾನಿನ ಹೊಕ್ಕಾಡೋ ವಿವಿಯ ಪ್ರೊ.ಇಚಿರೋ ವುಯೆದಾ, ಪ್ರೊ.ಟೋರು ಮೈಕಾವಾ, ಟೋಯೋ ವಿವಿಯ ಡಾ.ಯೋಶಿಕಾಟಾ ನಾಕಾಜಿಮಾ, ರಿಟ್ಸುಮೆಕಾನ್ ವಿವಿಯ ಪ್ರೊ.ಒಸಾಮು ಟ್ಸುನಾಮಿ, ಮೆಜ್ಜಿ ವಿವಿಯ ಪ್ರೊ.ಟೋಮಾಕಿ ವಾಟಾನೇಬಲ್, ಇವೇಟ್ ವಿವಿಯ ಪ್ರೊ.ಸತಾರು ಕೊಬಾಯಾಶಿ, ಕ್ಯೋಟೋ ವಿವಿಯ ಡಾ.ಕೋಯಾಚಿ ಹಸೆಗವ  ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಭಾರತದ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದಿಂದ ಡಾ.ಆರ್.ಕೆ.ಶರ್ಮಾ, ಬೆಂಗಳೂರಿನ ಐಐಎಸ್ಸಿ ಡಾ.ಬಿಕ್ರಂಜಿತ್ ಬಸು, ಮುಂಬೈ ಐಐಟಿಯ ಡಾ.ಆರ್.ಮುರುಗವೇಲ್, ಪುಣೆಯ ಎನ್ಸಿಎಲ್ ಡಾ.ಬಿಎಲ್ವಿ ಪ್ರಸಾದ್, ಬೆಂಗಳೂರಿನ ಎನ್ಎಎಲ್ ಡಾ.ಹರೀಶ್ ಸಿ,ಬರ್ಶಿಲಿಯಾ, ಬೆಂಗಳೂರಿನ ಐಐಎಸ್ಸಿ ಕೊನಂದೂರ್ ರಾಜಣ್ಣ, ರಾಜ್ಯ ಸರ್ಕಾರದ ಕೆಎಸ್ಟಿಇಪಿಎಸ್ ಡಾ.ಎಚ್.ಹೊನ್ನೇಗೌಡ, ಡಾ.ಸುನೀಲ್ ಅಗರ್ ವಾಲ್,  ಕೇರಳದ ಐಎಎಸ್ ಅಧಿಕಾರಿ ಬಾಲಗೋಪಾಲ್ ಪಾಲ್ಗೊಳ್ಳಲಿದ್ದಾರೆ.

See also  ಶಿವನಸಮುದ್ರ ಕಾಲುವೆಗೆ ಹಾರಿ ತಾಯಿ ಮಗಳು ಆತ್ಮಹತ್ಯೆ

ಸರ್ಕಾರದಿಂದ ಆದೇಶ ಬರುವವರೆಗೆ ಮರು ನೇಮಕಾತಿ ಇಲ್ಲ
ರಾಜ ಭವನ ಅಥವಾ ರಾಜ್ಯ ಸರ್ಕಾರದಿಂದ ಆದೇಶ ಬರುವವರೆಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಿಲ್ಲ ಎಂದು ರಂಗಪ್ಪ ಖಡಾಖಂಡಿತವಾಗಿ ಹೇಳಿದರು.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಖಾಲಿ ಹುದ್ದೆಗಳ ಭರ್ತಿಯಾಗಲಿಲ್ಲವಾದಲ್ಲಿ ವಿವಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದರೂ ಕೂಡ ಯಾವುದೇ ರೀತಿಯ ಸಮರ್ಪಕ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ರಾಜ್ಯ ಸರ್ಕಾರದಿಂದ ಆದೇಶ ಬರುವವರೆಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಿಲ್ಲ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು