ಮೈಸೂರು: ಮೈಸೂರು ನಗರದ ಜ್ಯೋತಿನಗರದಲ್ಲಿರುವ ಡಿ.ಎ.ಆರ್. ಪೊಲೀಸ್ ತರಭೇತಿ ಮೈದಾನದಲ್ಲಿ ಇಂದು, ಪೊಲೀಸ್ ತರಬೇತಿ ಪಡೆದ ಮಹಿಳಾ ಪೇದೆಗಳ ನಿರ್ಗಮಿತ ಪಥಸಂಚಲನ ಕಾರ್ಯಕ್ರಮ ನಡೆಯಿತು.
ಸುಮಾರು 150ಕ್ಕೂ ಹೆಚ್ಚು ಮಹಿಳಾ ಪೇದೆಗಳು ನಿರ್ಗಮಿತ ಪಥ ಸಂಚಲನ ಕವಾಯತನ್ನು ಪ್ರದರ್ಶಿಸಿ ಸಮಾರಂಭದಲ್ಲಿ ಭಾಗವಹಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಂದನೆ ಸಲ್ಲಿಸಿದರು. ಸಚಿವರು ಅಭ್ಯರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ತರಬೇತಿ ಮುಗಿಸಿದ 1ನೇ ಬ್ಯಾಚ್ ನ ಮಹಿಳಾ ಪೇದೆಗಳು ನಿರ್ಗಮನ ಹೊಂದುತ್ತಿದ್ದು, ತರಬೇತಿ ಸಮಯದಲ್ಲಿ ಅತ್ಯಂತ ಶ್ರದ್ಧೆಯಿಂದ ಇದ್ದು, ಸಾಹಸ ಮಾಡಿರುವ ತಂಡಕ್ಕೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಸಚಿವರು ಮಾತನಾಡಿ, ಇಲ್ಲಿ ತರಬೇತಿ ಪಡೆದ ಪೇದೆಗಳು, ವಿವಿಧ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಬೆಕಾಗಿರುತ್ತದೆ, ತಮಗೆ ಎಷ್ಟೇ ಒತ್ತಡಗಳು, ಬಂದರೂ ಸಾರ್ವಜನಿಕ ಸೇವೆ, ಸರಕಾರ ಮತ್ತು ಸಾರ್ವಜನಿಕರ ಆಸ್ತಿ ಪಾಸ್ತಿ ಕಾಪಾಡುವ ಜವಾಬ್ದಾರಿ ನಿಮ್ಮ ಮೇಲಿರುತ್ತದೆ, ಅದನ್ನು ಮನದಲ್ಲಿ ಇಟ್ಟುಕೊಂಡು ಪ್ರಾಮಾಣಿಕವಾಗಿ, ನಿಷ್ಟೆಯಿಂದ ಕರ್ತವ್ಯ ಮಾಡಬೇಕು, ಎಂತಹುದೇ ಸಂದರ್ಭದಲ್ಲೂ ಯಾವುದೇ ಆಸೆ ಆಕಾಂಕ್ಷೆಗಳಿಗೆ ಒಳಗಾಗಬಾರದು, ಜನಸೇವೆಯೇ ನಿಮ್ಮ ಗುರಿಯಾಗಿರಬೇಕು, ನೀವು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಯಾವುದೇ ಕುಂದು ಕೊರತೆ ಉಂಟಾಗದಂತೆ, ಇಲಾಖೆಗೆ ಧಕ್ಕೆ ಉಂಟಾಗದಂತೆ ಇಲಾಖೆಯ ಗೌಪ್ಯತೆಯನ್ನು ಕಾಪಾಡಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್, ತರಬೇತಿ ಮಹಾ ನಿರ್ದೇಶಕ ಪ್ರೇಮ್ ಕುಮಾರ್ ಮೀನಾ, ಐಜಿಪಿ ಅಲೋಕ್ ಕುಮಾರ್, ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.