News Kannada
Friday, October 07 2022

ಮೈಸೂರು

ಕುಟುಂಬ ವರಮಾನ ಆಧರಿಸಿ ಎಲ್ಲರಿಗೂ ಪಡಿತರ ಚೀಟಿ: ಯು.ಟಿ ಖಾದರ್ - 1 min read

Photo Credit :

ಕುಟುಂಬ ವರಮಾನ ಆಧರಿಸಿ ಎಲ್ಲರಿಗೂ ಪಡಿತರ ಚೀಟಿ: ಯು.ಟಿ ಖಾದರ್

ಮೈಸೂರು: ರಾಜ್ಯದಲ್ಲಿರುವ ಎಲ್ಲಾ ಕುಟುಂಬಗಳ ವಾರ್ಷಿಕ ವರಮಾನ ಆಧರಿಸಿ ಎಲ್ಲರಿಗೂ ಪಡಿತರ ಚೀಟಿ ವಿತರಣೆ ಮಾಡಲು ರಾಜ್ಯ ಸರ್ಕಾರ ಯೋಜನೆ ಹಾಕಿಕೊಂಡಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದರು.

ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ್ದ ಖಾದರ್ ರವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡುತ್ತಾ, ರಾಜ್ಯದಲ್ಲಿ ಪಡಿತರ ಚೀಟಿ ವಿತರಣೆಯಲ್ಲಿ ಲೋಪಗಳಿವೆ, ಎಲ್ಲಾ ಅನುಕೂಲ ಇರುವವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ ಅದನ್ನು ಸರಿಪಡಿಸುವ ಸಲುವಾಗಿ ಟೋಕನ್ ವ್ಯವಸ್ಥೆಯನ್ನು ಜಾರಿಗೆ ತಂದು ಅಧಿಕ ವರಮಾನ ಇರುವವರಿಗೆ ಎ.ಪಿ.ಎಲ್. ವರಮಾನ ಕಡಿಮೆ ಇರುವವರಿಗೆ ಬಿ.ಪಿಎಲ್. ಕಾರ್ಡ್ ವಿತರಿಸುವ ಯೋಜನೆ ಹಾಕಿಕೊಂಡಿದೆ ಕಂದಾಯ ಇಲಾಖೆ ಮೂಲಕ  ಕುಟುಂಬದ ವರಮಾಮ ಪರಿಶಿಲಿಸಿ ಪಡಿತರ ಕಾರ್ಡ್  ಎಂದು ಸಚಿವರು ತಿಳಿಸಿದರು.

ನ್ಯಾಯ ಬೆಲೆ ಅಂಗಡಿಗಳಲ್ಲಿನ ಒತ್ತಡವನ್ನು ನಿವಾರಿಸಲು ನ್ಯಾಯಬೆಲೆ ಅಂಗಡಿಗಳ ಅಕ್ಕಪಕ್ಕದಲ್ಲಿ ಪಡಿತರ ವಿತರಣೆಗೆ ಅವಕಾಶ ನೀಡಲಾಗುವುದು ಪಡಿತರದಾರರು ತಮ್ಮ ಕೂಪನ್ ಗಳನ್ನು ನೀಡಿ ಪಕ್ಕದ ಅಂಗಡಿಗಳಲ್ಲಿ ರೇಷನ್ ಪಡೆಯಬಹುದು,  ಆ ರೀತಿ ಸಹಕರಿಸಲು ಮುಂದೆ ಬರುವ ಅಂಗಡಿ ಮಾಲೀಕರುಗಳಿಗೆ ಶೇಖಡ ಮೂರರಷ್ಟು ಕಮಿಷನ್ ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಅಲ್ಲಿನ ಸದಸ್ಯರುಗಳು ಮುಂದೆ ಬಂದಲ್ಲಿ ಆಯಾ ಗ್ರಾಮ ಪಂಚಾಯಿತಿಯ ಜನಸಂಖ್ಯೆಗನುಗುಣವಾಗಿ ಕಂದಾಯ ಇಲಾಖೆಯಿಂದ ಪರಿಶೀಲಿಸಿ ರುಜುವಾತಾದ ಮೇಲೆ ಅಂಗಡಿ ತೆರೆಯಲು ಅವಕಾಶ ನೀಡಲಾಗುವುದು, ಈಗ ತಲಾ 4 ಕೆ.ಜಿ. ನೀಡುತ್ತಿರುವ ಅಕ್ಕಿಯ ಪ್ರಮಾಣವನ್ನು ಹೆಚ್ಚಳ ಮಾಡುವ ಬಗ್ಗೆಯೂ ಆಲೋಚನೆ ನಡೆಯುತ್ತದೆ ಎಂದರು.

ರಾಜ್ಯದಲ್ಲಿ ಯಾರೂ ಕೂಡ ಹಸಿವಿನಿಂದ ಇರಬಾರದು, ಒಂದು ಹೊತ್ತು ಊಟವನ್ನಾದರೂ ಮಾಡಬೇಕೆಂಬ ದೃಷ್ಟಿಯಿಂದ ನಗರಪಾಲಿಕೆ ಹಾಗೂ ಎನ್.ಜಿ.ಓ ಗಳೊಡನೆ ಹೊಂದಾಣಿಕೆ ಮಾಡಿಕೊಂಡು ಬಸ್ ನಿಲ್ದಾಣ, ರೈಲು ನಿಲ್ದಾಣ, ಪಾಲಿಕೆ ಆವರಣ, ಕೈಗಾರಿಕ ಪ್ರದೇಶಗಳು, ನಿರ್ಗತಿಕರು, ಬಡವರು ಇರುವ ಕಡೆಗಳಲ್ಲಿ ತಮಿಳುನಾಡಿನ ಅಮ್ಮ ಕ್ಯಾಂಟಿನ್ ಮಾದರಿಯಲ್ಲಿ ತಯಾರಿಸಿದ ಆಹಾರವನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲು ಚಿಂತನೆ ನಡೆಸುತ್ತಿದೆ. ಇದನ್ನು ಉಳ್ಳವರು ಶ್ರೀಮಂತರು ಕೂಡ ಉಪಯೋಗಿಸಿಕೊಳ್ಳಬಹುದು, ಈ ಬಗ್ಗೆ ಮುಖ್ಯ ಮಂತ್ರಿಗಳ ಗಮನಕ್ಕೆ ತರಲಾಗಿ ಸಂತಸ ವ್ಯಕ್ತಪಡಿಸಿ ಈ ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆ, ಮೊದಲಿಗೆ ಬಿಬಿಎಂಪಿ ನೆರವಿನೊಂದಿಗೆ ಬೆಂಗಳೂರಿನಲ್ಲಿ 150 ಕಡೆಗಳಲ್ಲಿ ಆರಂಭಿಸಿ ನಂತರ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಸಚಿವರೊಂದಿಗೆ ಆಹಾರ ಇಲಾಖೆ ಉಪನಿರ್ದೇಶಕ ಕ.ರಾಮೇಶ್ವರಪ್ಪ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

See also  ಸ್ವರ್ಣಲೇಪನ ಪ್ರಕರಣ: ಉಪ ನಿರ್ದೇಶಕರ ವಿರುದ್ದ ಸಚಿವರ ಮತ್ತೆ ದೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು