News Kannada
Sunday, September 25 2022

ಮೈಸೂರು

ಮೈಸೂರಿನಲ್ಲಿ ತ್ರಿರಂಗ ರಾಷ್ಟ್ರಧ್ವಜ ಅಭಿಯಾನ - 1 min read

Photo Credit :

ಮೈಸೂರಿನಲ್ಲಿ ತ್ರಿರಂಗ ರಾಷ್ಟ್ರಧ್ವಜ ಅಭಿಯಾನ

ಮೈಸೂರು: ಭಾರತೀಯ ಜನತಾ ಪಾರ್ಟಿ 70ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಆಗಸ್ಟ್ 9ರಿಂದ 23ರರವರೆಗೆ ತ್ರಿರಂಗ ರಾಷ್ಟ್ರಧ್ವಜ ಅಭಿಯಾನವನ್ನು ಹಮ್ಮಿಕೊಂಡಿದ್ದು ಅದರ ನಿಮಿತ್ತಾ ಸ್ವಾತಂತ್ರೋತ್ಸವದ ದಿನವಾದ ಭಾನುವಾರ ಸಂಜೆ  ಮೈಸೂರಿನ ಕುವೆಂಪುನಗರದ ವಾಣಿಜ್ಯ ಸಂಕೀರ್ಣದಿಂದ (ಶಾಂತಿ ಸಾಗರ್ ಜಂಕ್ಷನ್) ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.  ಪಂಜಿನ ಮೆರವಣಿಗೆಯನ್ನು ಮಾಜಿ ಸಚಿವರಾದ  ಎಸ್.ಎರಾಮದಾಸ್ ರವರು ಉದ್ಘಾಟಿಸಿದರು.

ಮೆರವಣಿಗೆಯಲ್ಲಿ ಎಲ್ಲಾ ನಾಯಕರೂ ಪಂಜನ್ನು ಹಿಡಿದು ಸಾಗಿದರು. ಅವರೊಂದಿಗೆ ನಾಗಾಲ್ಯಾಂಡ್, ಮಣಿಪುರದ ನಿರಾಶ್ರಿತ ಮಕ್ಕಳು, ನೂರಾರು ಜನ ಬಿಜೆಪಿ ಯುವ ಮೊರ್ಚಾ ಕಾರ್ಯಕರ್ತರು, ಮಂಡಲದ ಹಾಗೂ ನಗರದ ಎಲ್ಲಾ ಸ್ಥರದ ಕಾರ್ಯಕರ್ತರುಗಳು ಮರೆವಣಿಗೆಯಲ್ಲಿ ಭಾಗವಹಿಸಿದ್ದರು. ತ್ರ್ರಿವರ್ಣ ಧ್ವಜವನ್ನು ಹಿಡಿದು ಮೆರವಣಿಗೆಯುದ್ದಕ್ಕೂ ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ವೀರ ಯೋಧರ, ಹುತಾತ್ಮರಬಗ್ಗೆ ಘೋಷಣೆಯನ್ನು ಕೂಗುತ್ತಾ ಸಾಗಿದರು. ರಸ್ತೆಯ ಇಕ್ಕೆಲೆಗಳಲ್ಲಿ ಸಾರ್ವಜನಿಕರೂ ಸಹ ಘೋಷಣೆ ಕೂಗುತ್ತಿದ್ದದ್ದು, ವಿಶೇಷವಾಗಿತ್ತು, ಮೆರವಣಿಗೆಯು ನೃಪತುಂಗ ರಸ್ತೆಯಲ್ಲಿ ಸಾಗಿ ಡಿಪೋ ವೃತ್ತದ ಮೂಲಕ ವಿವೇಕಾನಂದ ವೃತ್ತವನ್ನು ತಲುಪಿತು.

ವಿವೇಕಾನಂದ ವೃತ್ತದಲ್ಲಿ ವಿವೇಕಾನಂದರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕರ್ತರನ್ನುದ್ದೇಶಿಸಿ ಶ್ರೀ ತೋಂಟದಾರ್ಯರವರು ಮಾತನಾಡಿ ದೇಶದ ಸ್ವಾತಂತ್ರಯದ ಮಹತ್ವವನ್ನು ತಿಳಿಸುತ್ತಾ ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ಅದು ಲಕ್ಷಾಂತರ ವೀರರ ರಕ್ತ ಬಲಿದಾನದಿಂದ ಬಂದಿರುವಂತಹದ್ದು, ಇದನ್ನು ನಾವು ಕೇವಲ ರಜಾದಿನವನ್ನಾಗಿ ಕಳೆಯದೆ ಅವರ ಸ್ಮರಣೆಯನ್ನು ಮಾಡುವ ಪರ್ವ ಕಾಲವೆಂದು ಭಾವಿಸಬೇಕು. ಯಾರಿಗಾಗಿಯೋ ಅಲ್ಲ ನಮಗಾಗಿ ಅವರು ಬಲಿದಾನವನ್ನು ಗೈದಿದ್ದಾರೆ. ಹಾಗಾಗಿ ಮಾನ್ಯ ಪ್ರಧಾನ ಮಂತ್ರಿಗಳು ದಿನಾಂಕ 9 ರಿಂದ 23ರರವರೆಗೆ ತ್ರಿವರ್ಣ ರಾಷ್ಟ್ರಧ್ವಜ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅದರ ನಿಮಿತ್ತಾ ಇಂದು ಯುವ ಮೋರ್ಚಾ ವತಿಯಿಂದ ಪಂಜಿನ ಮೆರವಣಿಗೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

See also  ರೈತದಸರಾದಲ್ಲಿ ನಗರಕ್ಕೆ ಬಂದ ಎತ್ತಿನಗಾಡಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು