News Kannada
Friday, September 30 2022

ಮೈಸೂರು

ದಸರಾ ಹಬ್ಬದ ಗಜಪಡೆಗೆ ವಿಮೆ ಭಾಗ್ಯ - 1 min read

Photo Credit :

ದಸರಾ ಹಬ್ಬದ ಗಜಪಡೆಗೆ ವಿಮೆ ಭಾಗ್ಯ

ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ದಸರಾದ ಸಾಂಸ್ಕಂತ್ರಿಕ ರಾಯಭಾರಿಗಳಾದ ಗಜಪಡೆಗೆ 32 ಲಕ್ಷರೂ ವಿಮೆಯನ್ನ ದಸರಾ ಕಾರ್ಯಕಾರಣಿ ಸಮಿತಿ ಮಾಡಿಸಿ ಗಜ ಪಡೆಗೆ ಭದ್ರತೆಯನ್ನ ನೀಡಿದೆ.ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ಮೆರವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗಜ ಪಡೆಗೆ ಈ ಬಾರಿ 12 ಆನೆಗಳಿಗೆ 32ಲಕ್ಷ  ವಿಮೆಯನ್ನ ಮಾಡಿಸಲಾಗಿದ್ದು ಮೊದಲ ಹಂತದಲ್ಲಿ ಆಗಮಿಸಿದ ಗಜಪಡೆಗಳಾದ ದಸರಾ ಕ್ಯಾಪ್ಟನ್ ಅರ್ಜುನ, ಬಲರಾಮ, ಅಭಿಮನ್ಯು, ವಿಜಯ ಮತ್ತು ಕಾವೇರಿ, ಮತ್ತು ಗಜೇಂದ್ರ ಆನೆಗೆ ಗಜ ಪಯಣ ದಿನದಿಂದ ದಸರಾ ಮುಗಿಯುವರೆಗೆ ಎರಡು ತಿಂಗಳ ಕಾಲ 16 ಲಕ್ಷ ವಿಮೆ ಒದಗಿಸಲಾಗಿದೆ. ವಿಮಾ ಕಂತು 60 ಸಾವಿರ ರೂಪಾಯಿಯನ್ನ ಒರಿಯಂಟಲ್ ಇನ್‍ಶೂರೆನ್ಸ್ ಕಂಪನಿಗೆ ದಸರಾ ಕಾರ್ಯಕಾರಣಿ ಸಮಿತಿ ಹಣ ಪಾವತಿಸಿದೆ.

ಇನ್ನೂ ಎರಡನೇ ಹಂತದಲ್ಲಿ ಆಗಮಿಸುವ ಆನೆಗಳಾದ ಹರ್ಷ, ಪ್ರಶಾಂತ, ಗೋಪಿ, ಗೋಪಾಲಸ್ವಾಮಿ, ವಿಕ್ರಮ, ದುರ್ಗಾಪರಮೇಶ್ವರಿ ಆನೆಗಳಿಗೂ ಸಹ 16 ಲಕ್ಷ ವಿಮೆ ಮಾಡಿಸುತ್ತಿದ್ದು. ಅದರಲ್ಲೂ ದಸರಾ ಕ್ಯಾಪ್ಟನ್ ಅರ್ಜುನನಿಗೆ 5 ಲಕ್ಷ ವಿಮೆ ಉಳಿದ 8 ಗಂಡಾನೆಗಳಿಗೆ 3 ಲಕ್ಷ ದಿಂದ 5ಲಕ್ಷದೊರೆಗೆ ವಿಮೆ ಮಾಡಿಸಲಾಗಿದ್ದು , 3 ಹೆಣ್ಣಾನೆಗಳಿಗೆ 1 ರಿಂದ 2 ಲಕ್ಷ ವಿಮೆ ಹಣವನ್ನ ಮಾಡಿಸಲಾಗಿದ್ದು ಜೊತೆಗೆ ಆನೆಗಳ ಜಾವಬ್ದಾರಿ ನೋಡಿಕೊಳ್ಳುವ ಕಾವಾಡಿಗಳು, ಮಾವುತರು ಮತ್ತು ಮಕ್ಕಳು ಸಹ ವಿಮಾ ವ್ಯಾಪ್ತಿಗೆ ಬರುತ್ತಾರೆ ಎಂದು ಡಾ. ನಾಗರಾಜು ತಿಳಿಸಿದ್ದಾರೆ.

See also  ಮೈಸೂರಿನಲ್ಲಿ ಕೊರೋನಾ ಜಾಗೃತಿ ಮೂಡಿಸುವ ಭಿತ್ತಿಪತ್ರ ಬಿಡುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು