News Kannada
Friday, September 30 2022

ಮೈಸೂರು

ಮಂತ್ರಿಸಿದ ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದ ಸಿಎಂ - 1 min read

Photo Credit :

ಮಂತ್ರಿಸಿದ ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದ ಸಿಎಂ

ಮೈಸೂರು: ಸಿಎಂ ತಮ್ಮ ನಿವಾಸದಿಂದ ಹೊರಬರುವಾಗ ಪೂಜೆ ಮಾಡಿಸಿ ಮಂತ್ರಿಸಿದ ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ಮಾಧ್ಯಮದವರೊಂದಿಗೆ ಮಾತನಾಡಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

ತಮ್ಮ ಹಿರಿಯ ಪುತ್ರ ರಾಕೇಶ ನಿಧನದಿಂದ ಮಾನಸಿಕವಾಗಿ ತೀವ್ರವಾಗಿ ಕುಗ್ಗಿರುವ ಸಿದ್ದರಾಮಯ್ಯನವರು ಇತ್ತೀಚಿಗೆ ತಮ್ಮ ಕುಟುಂಬದೊಂದಿದೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಏಕೆಂದರೆ ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಮೂಢನಂಬಿಕೆ, ಮೌಡ್ಯಗಳನ್ನು ನಂಬದ ಸಿಎಂ ದೇವರ ಪೂಜೆಗೆ ಕುಟುಂಬದವರೊಂದಿಗೆ ಭಾಗವಹಿಸಿದ್ದು ತೀರಾ ಕಡಿಮೆ. ಆದರೆ ತಮ್ಮ ಪುತ್ರನ ನಿಧನದ ನಂತರ ಮನಶಾಂತಿಗಾಗಿ ಕುಟುಂಬದವರೊಂದಿಗೆ ಪೂಜೆಗಳಲ್ಲಿ ತಮ್ಮ ಧರ್ಮಪತ್ನಿ ಹಾಗೂ ಕಿರಿಯ ಪುತ್ರನೊಂದಿಗೆ ಭಾಗವಹಿಸುತ್ತಿದ್ದಾರೆ.

ಇಂದು ತಮ್ಮ ಟಿ.ಕೆ ಲೇಔಟ್ ಮನೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದು, ಬೆಳಗ್ಗೆ ಪೂಜಾರಿಯೊಬ್ಬರು ಪೂಜೆ ಮಾಡಿ ಮಂತ್ರಿಸಿ ಕೊಟ್ಟ ನಿಂಬೆಹಣ್ಣನ್ನು ಹಿಡಿದುಕೊಂಡು ಬಂದು ಮಾಧ್ಯಮದವರೊಂದಿಗೆ ಮಾತನಾಡಿದ್ದು ಆಶ್ಚರ್ಯಕ್ಕೆ ಕಾರಣವಾಯಿತು.

ತಮಿಳನಾಡು ಬಂದ್ ಗೆ ಪ್ರತಿಕ್ರಿಯಿಸಲ್ಲ:
ನೀರು ಬಿಡುವಂತೆ ತಮಿಳುನಾಡು ಸುಪ್ರೀಮ್ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ನಮ್ಮ ಜಲಾಶಾಯಗಳಲ್ಲಿ ಕುಡಿಯಲು ನೀರಿಲ್ಲ. ಆದರಿಂದ ಈ ವಿಚಾರವನ್ನು ಕೋರ್ಟಿಗೆ ಮನವರಿಕೆ ಮಾಡಿಕೊಡಲಾಗುವುದು. ತಮಿಳನಾಡು ಬಂದ್ ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

See also  ಮೈಸೂರಿನಲ್ಲಿ ಕೆ.ಪಿ.ನಂಜುಂಡಿಯವರ ಲಕ್ಷ್ಮೀಗೋಲ್ಡ್ ಪ್ಯಾಲೇಸ್ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು