News Kannada
Saturday, October 01 2022

ಮೈಸೂರು

ರಾಜಮಾತೆ ಪ್ರಮೋದದೇವಿ ತಮ್ಮ ವಶಕ್ಕೆ ಪಡೆದ ದೊಡ್ಡಕೆರೆ ಮೈದಾನದ ಜಾಗ - 1 min read

Photo Credit :

ರಾಜಮಾತೆ ಪ್ರಮೋದದೇವಿ ತಮ್ಮ ವಶಕ್ಕೆ ಪಡೆದ ದೊಡ್ಡಕೆರೆ ಮೈದಾನದ ಜಾಗ

ಮೈಸೂರು: ಮೈಸೂರಿನ ಅರಮನೆ ಮುಂಭಾಗವಿರುವ ದೊಡ್ಡಕೆರೆ ಮೈದಾನ ಯಾರಿಗೆ ಸೇರಬೇಕೆಂಬ ಬಗ್ಗೆ ಉಂಟಾಗಿದ್ದ ವಿವಾದಕ್ಕೆ ಇಂದು ಅಂತ್ಯ ಕಂಡಿದೆ. ದೊಡ್ಡಕೆರೆ ಮೈದಾನದಲ್ಲಿನ 10 ಎಕರೆ 35 ಗುಂಟೆ ಪ್ರದೇಶವನ್ನು ರಾಣಿ ಪ್ರಮೋದ ದೇವಿ ಇಂದು ತಮ್ಮ ಅಧಿನಕ್ಕೆ ತೆಗೆದುಕೊಂಡಿದ್ದಾರೆ.

ದೊಡ್ಡಕೆರೆ ಮೈದಾನದಲ್ಲಿನ 10 ಎಕರೆ 35 ಗುಂಟೆ ಪ್ರದೇಶವನ್ನು ಅದೇಶ ಹೊರಡಿಸಿದ 8 ವಾರದೊಳಗೆ ರಾಜಮಾತೆ ಪ್ರಮೋದದೇವಿ ಅವರ ಹೆಸರಿಗೆ ಖಾತೆ ಮಾಡಿಸಿಕೊಡುವಂತೆ ಕಳೆದ ಮೇ ತಿಂಗಳಿನಲ್ಲಿ ಹೈಕೋರ್ಟ್ ಕಂದಾಯ ಇಲಾಖೆಗೆ ಸೂಚಿಸಿತ್ತು.

ಈ ನಡುವೆ 8 ವಾರದೊಳಗಾಗಿ  ಕಂದಾಯ ಇಲಾಖೆ ನಿಮ್ಮ ಹೆಸರಿಗೆ ಖಾತೆ ಮಾಡಿಕೊಡದಿದ್ದರೆ ನೀವೇ ಆ ಜಾಗವನ್ನು ನಿಮ್ಮ ಸುಪರ್ದಿಗೆ ಪಡೆಯಬಹುದಾಗಿದೆ ಎಂದು ಹೈಕೋರ್ಟ್  ಸೂಚನೆ ನೀಡಿ ಪ್ರಮೋದದೇವಿಯವರಿಗೆ ಮಾಹಿತಿ ನೀಡಿತ್ತು. ಆದರೆ ಕಂದಾಯ ಇಲಾಖೆ ಹೈಕೋರ್ಟ್ ಆದೇಶವನ್ನು ಕಡೆಗಣಿಸಿ ಪ್ರಮೋದ ದೇವಿ ಅವರಿಗೆ ಈವರೆಗೆ  ಖಾತೆ ಮಾಡಿಸಿಕೊಟ್ಟಿರಲಿಲ್ಲ.

ಈ ಹಿನ್ನೆಲೆ ಇಂದು ಬೆಳಿಗ್ಗೆ ಪ್ರಮೋದದೇವಿಯವರು  ಹೈಕೋರ್ಟ್ ಆದೇಶದಂತೆ ದೊಡ್ಡಕೆರೆ ಮೈದಾನದ 10 ಎಕರೆ 35 ಗುಂಟೆ ಜಾಗವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.ಜೊತೆಗೆ ಅದನ್ನು ರಕ್ಷಿಸುವ ಸಲುವಾಗಿ ಜೆ.ಸಿ.ಬಿ ಯಂತ್ರದ ಸಹಾಯದಿಂದ ಆ ಜಾಗವನ್ನು ಸ್ವಚ್ಚಗೊಳಿಸಿ ಅದಕ್ಕೆ ತಂತಿ ಬೇಲಿ ಹಾಕಿಸಲು ಕ್ರಮ ಕೈಗೊಂಡಿದ್ದಾರೆ.

ಹೀಗಾಗಿ ದಸರಾ ಹಿನ್ನೆಲೆ ಮುಂದಿನ ತಿಂಗಳು ಆರಂಭಗೊಳ್ಳಲಿರುವ ವಸ್ತು ಪ್ರದರ್ಶನದ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ತಮ್ಮ ವಾಹನಗಳನ್ನು ನಿಲ್ಲಿಸಲು ಪರ್ಯಾಯ  ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಬೇಕಾಗಿದೆ. ದೊಡ್ಡಕೆರೆ ಮೈದಾನ ವಿವಾದದಲ್ಲಿ ರಾಜವಂಶಸ್ಥರು ಹಾಗೂ ಸರ್ಕಾರದ ನಡುವೆ ಶೀತಲ ಸಮರ ನಡೆಯುತ್ತಿತ್ತು.ಇದಕ್ಕೆ ಇಂದು ತೆರೆ ಕಂಡಂತಾಗಿದೆ, ಈ ಮೂಲಕ ರಾಜವಂಶಸ್ಥರಿಗೆ ಜಯ ಲಭಿಸಿದಂತಾಗಿದೆ.

See also  ಮಲೆಮಹದೇಶ್ವರ ಬೆಟ್ಟದಲ್ಲಿ 1.33 ಕೋಟಿ ರೂ ಕಾಣಿಕೆ ಸಂಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು