News Kannada
Monday, October 03 2022

ಮೈಸೂರು

ಮೈಸೂರಿನಲ್ಲಿ ಗಜಪಡೆಗೆ ಭಾರದ ತಾಲೀಮು - 1 min read

Photo Credit :

ಮೈಸೂರಿನಲ್ಲಿ ಗಜಪಡೆಗೆ ಭಾರದ ತಾಲೀಮು

ಮೈಸೂರು: ದಸರಾಕ್ಕೆ ಅರಮನೆ ನಗರಿ ಸಜ್ಜಾಗುತ್ತಿದೆ… ಈಗಾಗಲೇ ಮೊದಲ ಹಂತದದಲ್ಲಿ ಅರ್ಜುನನ ನೇತೃತ್ವದಲ್ಲಿ ಆಗಮಿಸಿರುವ ಗಜಪಡೆ ಜಂಬೂಸವಾರಿಗಾಗಿ ಈಗಿನಿಂದಲೇ ತಾಲೀಮು ನಡೆಸುತ್ತಿವೆ.

ಭಾನುವಾರದಿಂದ ಅಂಬಾರಿ ಹೊರುವ ಅರ್ಜುನನಿಗೆ ಮರಳಿನ ಭಾರ ಹೊರುವ ತಾಲೀಮನ್ನು ಆರಂಭಿಸಲಾಗಿದೆ. ನಗರದ ಅಂಬಾವಿಲಾಸ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಗಜಪಡೆಗಳನ್ನು ಜತನದಿಂದ ನೋಡಿಕೊಳ್ಳಲಾಗುತ್ತಿದ್ದು, ರಾಜಾತಿಥ್ಯ ನೀಡಲಾಗುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಸ್ನಾನ ಅಲ್ಲದೆ ಅರಮನೆಯಿಂದ ಬನ್ನಿಮಂಟಪದವರೆಗೆ ಸುಮಾರು 5ಕಿ.ಮೀ.ವರೆಗೆ ಸವಾರಿ ನಡೆಯುತ್ತಿದೆ.

ದಸರಾ ದಿನದಂದು ನಡೆಯುವ ಒಂದು ದಿನದ ಜಂಬೂಸವಾರಿಗೆ ತಾಲೀಮು ಈಗಿನಿಂದಲೇ ಆರಂಭವಾಗಿದ್ದು, ಮೊದಲ ಹಂತದ ಗಜಪಡೆಯೊಂದಿಗೆ ದಸರಾ ಸಮೀಪಿಸುತ್ತಿದ್ದಂತೆಯೇ ಗಜಪಡೆಯ ಮತ್ತೊಂದು ತಂಡ ಬಂದು ಸೇರಲಿದೆ. ಬಳಿಕ ತಾಲೀಮು ಕೂಡ ಕಠಿಣವಾಗಲಿದೆ.

ಇದೀಗ ಮೈಸೂರಿನ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆಗಳಿಗೆ ದಿನನಿತ್ಯ ವಿವಿಧ ಬಗೆಯ ಬೂರಿ ಭೋಜನ. ಅದರಲ್ಲೂ ಜಂಬೂ ಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಅರ್ಜುನನಿಗೆ ವಿಶೇಷ ಸತ್ಕಾರಗಳು ನಡೆಯುತ್ತವೆ.

ನಗರದಲ್ಲಿ ಗಜಪಡೆಯ ಮಜ್ಜನ ಮತ್ತು ತಾಲೀಮು ಎಲ್ಲರ ಗಮನಸೆಳೆಯುತ್ತಿದ್ದು, ಜನರ ದೃಷ್ಠಿ ಅತ್ತ ನೆಟ್ಟಿದೆ. ಭಾನುವಾರ ಅರ್ಜುನನಿಗೆ ಮರಳಿನ ಮೂಟೆಯ ತಾಲೀಮು ನಡೆಸಲಾಗಿದ್ದು, ಆತ ಮರಳಿನ ಭಾರ ಹೊತ್ತು ಸಾಗಿದರೆ ಆತನ ಹಿಂದೆ ಬಲರಾಮ, ಅಭಿಮನ್ಯು, ಗಜೇಂದ್ರ, ಕಾವೇರಿ ಮತ್ತು ವಿಜಯ ಹೆಜ್ಜೆ ಹಾಕಿವೆ.

See also  ದರ್ಶನ್ ತಾಯಿ ಆಸ್ಪತ್ರೆಗೆ ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು