News Kannada
Tuesday, September 27 2022

ಮೈಸೂರು

ಸಂತೋಷವನ್ನು ಹಂಚಿಕೊಳ್ಳಲು ಹಬ್ಬಗಳು ಸಹಕಾರಿ: ಸಚಿವ ತನ್ವೀರ್ ಸೇಠ್ - 1 min read

Photo Credit :

ಸಂತೋಷವನ್ನು ಹಂಚಿಕೊಳ್ಳಲು ಹಬ್ಬಗಳು ಸಹಕಾರಿ:  ಸಚಿವ ತನ್ವೀರ್ ಸೇಠ್

ಮೈಸೂರು: ಪಶ್ಚಿಮದ ಕೆಟ್ಟ ಸಂಸ್ಕೃತಿಗೆ ಕಡಿವಾಣ ಹಾಕಿ ಭಾರತೀಯ ಸಂಸ್ಕೃತಿಗೆ ಪುಷ್ಠಿ ಕೊಡಬೇಕಿದೆ. ಧಾರ್ಮಿಕತೆಯ ಮೂಲಕ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.

ಮೈಸೂರು ವೀರಶೈವ ಸಜ್ಜನ ಸಂಘ 41ನೆಯ ವರ್ಷದ ಶ್ರೀ ಸ್ವರ್ಣಗೌರಿ ಹಾಗೂ ವರಸಿದ್ಧಿ ಶ್ರೀ ವಿನಾಯಕ ಸ್ವಾಮಿ ಪೂಜಾ ಮಹೋತ್ಸವದ ಅಂಗವಾಗಿ ಮಂಡಿ ಮೊಹಲ್ಲದ ಶ್ರೀಕಂಠಿ ಮಲ್ಲಣ್ಣನವರ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿದಿನವು ಹಬ್ಬವೇ. ಸಂತೋಷವನ್ನು ಹಂಚಿಕೊಳ್ಳಲು ಹಬ್ಬಗಳು ಸಹಕಾರಿಯಾಗಿವೆ. ಅಂತೆಯೇ ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಧರ್ಮ, ಜಾತಿಗಳನ್ನು ಮೀರಿ ಒಗ್ಗೂಡಿ ಸರ್ವರ ಹಿತದ ಬಗ್ಗೆ ಚಿಂತಿಸುತ್ತಲೇ ದುಷ್ಟರಿಗೂ ಒಳ್ಳೆಯದು ಮಾಡುವಂತೆ ಪ್ರಾರ್ಥಿಸುವ ಅಗತ್ಯವಿದೆ ಎಂದು ಹೇಳಿದರು.  

ಪ್ರಸ್ತುತ ಸಜ್ಜನರು ಮಾತು ನಿಲ್ಲಿಸಿರುವುದರಿಂದ ದುಷ್ಟರು ಹೆಚ್ಚು ಮಾತನಾಡುತ್ತಿದ್ದಾರೆ. ಸಂವಿಧಾನ ಎಲ್ಲ ಧರ್ಮಗಳಿಗೂ ಮುಕ್ತ ಅವಕಾಶ ನೀಡಿದೆ. ಆದರೆ ಜಾತಿಗಳಿಂದ ನಿತ್ಯ ಗೊಂದಲಗಳಾಗುತ್ತಿವೆ. ಈಗ ಎಲ್ಲ ಧರ್ಮಗಳು ಪ್ರೀತಿ ಹಂಚಿಕೊಳ್ಳುವ ತಾಳ್ಮೆ, ಸಂಯಮದಿಂದ ವರ್ತಿಸುವ ಅವಶ್ಯವಿದೆ ಎಂದು ಸಚಿವರು ಹೇಳಿದರು.  ಇದೇ ಸಂದರ್ಭ ಗಿನ್ನೇಸ್ ರೆಕಾರ್ಡ್ ಮಾಡಿರುವ ಕರಕುಶಲ ಕಲಾವಿದೆ ರಾಧಾ ಮಲ್ಲಪ್ಪ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ರವರು ‘ಕರ್ನಾಟಕ ಟುಡೇ’ ಮಾಸಪತ್ರಿಕೆ ಶ್ರದ್ಧೆಯಿಂದ ಓದುತ್ತಿದ್ದುದ್ದು ವಿಶೇಷವಾಗಿತ್ತು.

ಚಿತ್ರನಟ ಡಾರ್ಲಿಂಗ್ ಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಸಾಗರ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಅನ್ವರ್ ಪಾಷ, ಸಂಘದ ಉಪಾಧ್ಯಕ್ಷ ಬಿ.ರಮೇಶ್, ಸಹ ಕಾರ್ಯದರ್ಶಿ ಸಿ.ಪ್ರಭುದೇವ್, ಖಜಾಂಚಿ ಪಿ.ನಟರಾಜ್ ಮುಂತಾದವರು ಹಾಜರಿದ್ದರು. ಸಂಧ್ಯಾ ಮತ್ತು ರಾಜೇಶ್ವರಿ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಬಿ.ಎಂ.ನಾಗಮಲ್ಲೇಶ್ ಸ್ವಾಗತಿಸಿದರು. ಪರಮೇಶರಯ್ಯ ಸನ್ಮಾನಿತರನ್ನು ಪರಿಚಯಿಸಿದರು.

See also  ಚಾಮರಾಜನಗರದ ಕನ್ನೇಗಾಲದಲ್ಲಿ ಟೋಲ್ ಸಂಗ್ರಹಕ್ಕೆ ಆಕ್ರೋಶ  
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು