News Kannada
Monday, October 03 2022

ಮೈಸೂರು

ಜೋಡಿ ಕಟ್ಟುವ ಮೂಲಕ ದಸರಾ ಕುಸ್ತಿಗೆ ಚಾಲನೆ - 1 min read

Photo Credit :

ಜೋಡಿ ಕಟ್ಟುವ ಮೂಲಕ ದಸರಾ ಕುಸ್ತಿಗೆ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಿಣಿಯಾದ ನಾಡ ಕುಸ್ತಿ ಪಂದ್ಯಾವಳಿಗೆ ಜೋಡಿ ಕಟ್ಟುವ ಮೂಲಕ ಸಾಂಪ್ರದಾಯಕವಾಗಿ ದಸರಾ ಕುಸ್ತಿಗೆ ಚಾಲನೆ ನೀಡಲಾಯಿತು.

ಅಕ್ಟೋಬರ್ 1ರಿಂದ 6ರವರೆಗೆ ಆರು ದಿನಗಳ ಕಾಲ ದೊಡ್ಡ ಕೆರೆ ಮೈದಾನದಲ್ಲಿರುವ ಪಿ. ಕಾಳಿಂಗರಾವ್ ಸಭಾಂಗಣದಲ್ಲಿ ನಡೆಯುವ ನಾಡಕುಸ್ತಿ ಪಂದ್ಯಾವಳಿಗೆ ಜೋಡಿ ಕಟ್ಟುವ ಕಾರ್ಯವನ್ನು ಸಾಂಪ್ರದಾಯಕವಾಗಿ ಕುಸ್ತಿ ತಾಲೀಮಿನಲ್ಲಿ ಬಳಸುವ ಗದೆಯನ್ನು ತಿರುಗಿಸುವ ಮೂಲಕ ಜಿಲ್ಲಾಧಿಕಾರಿ ಡಿ. ರಂದೀಪ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣನವರ್ ಹಾಗೂ ಹಿರಿಯ ಕುಸ್ತಿಪಟುಗಳು ಉದ್ಘಾಟಿಸಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿಯವರು ಕುಸ್ತಿ ಕಲೆಯು ಜನರಲ್ಲಿ ಸದ್ಬಾವನೆ ಮೂಡಿಸುತ್ತದೆ. ಈ ವರ್ಷದ ದಸರಾ ಉತ್ಸವವನ್ನು ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಕುಸ್ತಿ ಪಂದ್ಯಾವಳಿಗಳು ಯಶಸ್ವಿಯಾಗಿ ನಡೆಯಲೆಂದು ಹಾರೈಸುತ್ತೇನೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವಿ ಡಿ.ಚೆನ್ನಣ್ಣನವರ್ ಮಾತನಾಡಿ, ಆಧುನಿಕ ಭರಾಟೆಯಲ್ಲಿ ಮತ್ತು ಜಿನ್ಮಾಷಿಯಂ, ಏರೋಬಿಕ್ಸ್, ಸಿಕ್ಸ್ಪ್ಯಾಕ್ಸ್ ಇತ್ಯಾದಿಗಳಿಂದ ಕುಸ್ತಿಗೆ ಹಿಂದೆ ಇದ್ದ ಆಕರ್ಷಣೆ ಕಡಿಮೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಪ್ರತೀ ಹಳ್ಳಿಗಳಲ್ಲಿ ಗರಡಿಗಳಿದ್ದವು, ಕುಸ್ತಿಪಟುಗಳು ಗುಂಡು ಕಲ್ಲೆತ್ತುವುದು, ಚಕ್ಕಡಿ ಎತ್ತುವುದು, ಮಲ್ಲಕಂಬ ಎತ್ತುವುದು ಇತ್ಯಾದಿ ಕಸರತ್ತುಗಳನ್ನು ಮಾಡುವ ಮೂಲಕ ದೇಹವನ್ನು ದಂಡಿಸಿ ಕುಸ್ತಿ ಆಡಲು ತಯಾರಿ ನಡೆಸುತ್ತಿದ್ದರು.ಆದರೆ, ಈಗ ಗರಡಿಗಳು ಕಾಣೆಯಾಗುತ್ತಿವೆ. ವಿಜಯನಗರ ಸಾಮ್ರಾಜ್ಯದಲ್ಲಿ ದಸರಾ ಮಹೋತ್ಸವವನ್ನು ಆಕರ್ಷಣೀಯವಾಗಿ ಆಚರಿಸಲಾಗುತ್ತಿತ್ತು.  ಇದರ  ಸಾಮಂತರಾದ  ಮೈಸೂರು  ರಾಜವಂಶಸ್ಥರು  ಇದನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ ಮತ್ತು ಮೈಸೂರಿನ ಮಹಾರಾಜರು ಸ್ವತಃ ಕುಸ್ತಿಪಟುಗಳಾಗಿದ್ದು, ಕುಸ್ತಿ ಕಲೆಯ ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಪ್ರೋತ್ಸಾಹಿಸಿರುತ್ತಾರೆ. ಕುಸ್ತಿ ಕಲೆ ಬೆಳೆಯಬೇಕು ಮತ್ತು ಉಳಿಯಬೇಕು. ಬಹುತೇಕ ಕುಸ್ತಿ ತಯಾರಿ ನಡೆಸುವವರು ಕೃಷಿಕರು, ಶ್ರಮಿಕರು ಮತ್ತು ಬಡವರು. ಇಂತಹವರಿಗೆ ಪ್ರೋತ್ಸಾಹ ತುಂಬಾ ಅಗತ್ಯ ಎಂದರು.

See also  ಕರ್ನಾಟಕದ ಲಾರಿ ಚಾಲಕನನ್ನ ಜೀವಂತವಾಗಿ ಸುಡಲು ಯತ್ನಿಸಿದ ತಮಿಳರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು