News Kannada
Tuesday, October 04 2022

ಮೈಸೂರು

ಮೈಸೂರಿನಲ್ಲಿ ಪೊಲೀಸರಿಗೇ ಸವಾಲಾದ ಸರಗಳ್ಳರು - 1 min read

Photo Credit :

ಮೈಸೂರಿನಲ್ಲಿ ಪೊಲೀಸರಿಗೇ ಸವಾಲಾದ ಸರಗಳ್ಳರು

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸರಗಳ್ಳತನ ಮುಂದುವರೆದಿದ್ದು, ಬೆಳ್ಳಂಬೆಳಿಗ್ಗೆ ಬೈಕ್ ನಲ್ಲಿ  ಬಂದ ಇಬ್ಬರು ದುಷ್ಕರ್ಮಿಗಳು ನಗರದ ಮೂರು ಕಡೆ ಸರ ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.

Three incidents in a single day, chain-snatching terror grips Mysuru-1ದಸರಾ ಸಮೀಪಿಸುತ್ತಿರುವಾಗಲೇ ನಗರದಲ್ಲಿ ಮೂರು ಕಡೆ ಸರಗಳ್ಳರು ತಮ್ಮ ಕೈಚಳಕ ಪ್ರದರ್ಶಸಿದ್ದಾರೆ. ಇದರಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಸರಗಳ್ಳರು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದಾರೆ. ಮೈಸೂರು ನಗರದಲ್ಲಿ ವೃದ್ಧರನ್ನೇ ಟಾರ್ಗೇಟ್ ಮಾಡಿರುವ ಸರಗಳ್ಳರು ಪ್ರತಿದಿನವೂ ತಮ್ಮ ಕೈಚಳಕವನ್ನ ತೋರಿಸುತ್ತಿದ್ದಾರೆ. ಇಂದು ಬೆಳಗ್ಗೆ ಸಹ ನಗರದ ಮೂರು ಕಡೆ ವೃದ್ಧೆಯವರ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ.

ರಾಮಕೃಷ್ಣ ನಗರದ ಐ ಬ್ಲಾಕ್ ನಿವಾಸಿ ಚೂಡಾಮಣಿ ಎಂಬುವವರ 45 ಗ್ರಾಂ ಚಿನ್ನದ ಸರ ಕಸಿದುಕೊಂಡ  ಖದೀಮರು, ನಂತರ  ಹೆಬ್ಬಾಳು ನಿವಾಸಿ ಶಕೀಲಾ ಬೇಗಂ ಎಂಬುವವರ ಮನೆಗೆ ನುಗ್ಗಿ 60 ಗ್ರಾಂ ನೆಕ್ಲೇಸ್ ಕಿತ್ತುಕೊಂಡಿದ್ದಾರೆ. ಇದಾದ ನಂತರ ಟಿಕೆ ಲೇಔಟ್ ನಿವಾಸಿ ಗೌರಮ್ಮ ಅವರ ಬಳಿ 60 ಗ್ರಾಂ ಸರ ಕಳವು ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಸಿಪಿ ರುದ್ರಮುನಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಕುವೆಂಪುನಗರ, ವಿಜಯನಗರ ಹಾಗೂ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ರೈತರಿಂದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು