News Kannada
Thursday, September 29 2022

ಮೈಸೂರು

ಧನುರ್ ಲಗ್ನದಲ್ಲಿ ದಸರಾ ಉದ್ಘಾಟನೆ, ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ: ಮಹಾದೇವಪ್ಪ - 1 min read

Photo Credit :

ಧನುರ್ ಲಗ್ನದಲ್ಲಿ ದಸರಾ ಉದ್ಘಾಟನೆ, ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ: ಮಹಾದೇವಪ್ಪ

ಮೈಸೂರು: ಧನುರ್ ಲಗ್ನದಲ್ಲಿ ದಸರಾ ಉದ್ಘಾಟನೆಯಾಗಲಿದ್ದು ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ಈ ಬಾರಿ 11 ದಿನದ ದಸರಾ ಕಾರ್ಯಕ್ರಮದ ಅಧಿಕೃತ ವಿವರ ನೀಡಿದರು.

ಅಕ್ಟೋಬರ್ 1ರಂದು ಚಾಮುಂಡಿಬೆಟ್ಟದಲ್ಲಿ ನಾಡೋಜ ಚೆನ್ನವೀರಕಣವಿ ಧನುರ್ ಲಗ್ನದಲ್ಲಿ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ದೊರೆಯಲಿದ್ದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಗಣ್ಯರು ಉಪಸ್ಥಿತರಿರುತ್ತಾರೆ. ಅಕ್ಟೋಬರ್ 11ರಂದು ಮಕರ ಲಗ್ನದಲ್ಲಿ ಮದ್ಯಾಹ್ನ 2.16ನಿಮಿಷಕ್ಕೆ ನಂದಿಧ್ವಜಕ್ಕೆ ಅರಮನೆಯ ಬಲರಾಮ ದ್ವಾರದ ಬಳಿ ಸಿಎಂ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ದ್ವರಯಲಿದ್ದು 2.45 ನಿಮಿಷಕ್ಕೆ ದಸರಾ ಜಂಬೂ ಸವಾರಿ ಮೆರವಣಿಗೆಗೆ ಅರಮನೆ ಮುಂಭಾಗದಲ್ಲಿ ಚಾಲನೆ ನೀಡಲಿದ್ದು, ಈ ಬಾರಿ 36 ಸ್ತಬ್ದ ಚಿತ್ರಗಳ 30 ಕಲಾತಂಡಗಳು ಇರುತ್ತವೆ ಎಂದು ಸಚಿವರು ಸ್ಪಷ್ಟ ಪಡಿಸಿದರು.

ಅಕ್ಟೋಬರ್ 11ರ ಸಂಜೆ 8 ಗಂಟೆಗೆ ಬನ್ನಿಮಂಟಪದ ಮೈದಾನದಲ್ಲಿ ಟಾರ್ಚ್ ಲೈಟ್ ಪೇರೆಡ್ ನಡೆಯಲಿದ್ದು, ಇದರ ನೇರ ಪ್ರದರ್ಶನವನ್ನು ದೊಡ್ಡ ಎಲ್ಇಡಿ ಪರದೆಯ ಮೂಲಕ ಚಾಮುಂಡಿ ವಿಹಾರ ಕ್ರೀಡಾಂಗಣ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗ ಮಂದಿರದಲ್ಲಿ ಪ್ರದರ್ಶನ ನೋಡಬಹುದಾಗಿದೆ ಎಂದರು.
ಈ ಬಾರಿ ದಸರಾ ಮಹೋತ್ಸವದಲ್ಲಿ ಅಕ್ಟೋಬರ್ 1ರಿಂದ 11ರವರೆಗೆ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಉಪಸಮಿತಿಗಳಿಂದ ಸುಮಾರು 203 ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ವಿಶೇಷವಾಗಿ ಜಲಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಜೀವಜಲ ಶೀರ್ಷಿಕೆಯಡಿ ಒಂದು ನೃತ್ಯ ರೂಪಕ ಏರ್ಪಡಿಸಲಾಗಿದೆ.
ಮೈಸೂರು ಜಿಲ್ಲೆ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಗೆ ಸೇರಿದ ತಾಲ್ಲೂಕುಗಳಿಂದ ಪ್ರತಿ ತಾಲ್ಲೂಕಿಗೆ 4 ಬಸ್ಗಳ ಮೂಲಕ ಗ್ರಾಮಾಂತರ ಪ್ರದೇಶದ ವಾಸಿಗಳು ಮೈಸೂರು ನಗರದ ದರ್ಶನಕ್ಕೆ ಉಚಿತ ಅವಕಾಶ ಕಲ್ಪಿಸಲಾಗಿದೆ.

ಆಗಸದಿಂದ ಮೈಸೂರು: ಈ ಬಾರಿ ದಸರಾ ಮಹೋತ್ಸವದಲ್ಲಿ ಲಲಿತ ಮಹಲ್ ಹೆಲಿಪ್ಯಾಡ್ನಲ್ಲಿ ಆಗಸದಿಂದ ಮೈಸೂರು ಎಂಬ ಕಾರ್ಯಕ್ರಮ ಏರ್ಪಡಿಸಿದ್ದು, ಹೆಲಿಕಾಪ್ಟರ್ ಮೂಲಕ 10 ನಿಮಿಷಗಳ ಕಾಲ ಮೈಸೂರು ನಗರ ವೀಕ್ಷಣೆಗೆ ಅವಕಾಶ ಕಲ್ಲಿಸಲಾಗಿದೆ. ವಯಸ್ಕರಿಗೆ 2499ರೂ ಮತ್ತು ಹತ್ತನೇ ತರಗತಿಯ ಒಳಗಿನ ಮಕ್ಕಳಿಗೆ ಮತ್ತು ವಿಕಲಚೇತನರಿಗೆ 2299ರೂ ದರ ನಿಗದಿಪಡಿಸಲಾಗಿದೆ.

ಪ್ಯಾಲೆಸ್ ಆನ್ ವೀಲ್ಸ್: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಪ್ಯಾಲೆಸ್ ಆನ್ ವೀಲ್ಸ್ ಎಂಬ ಕಾರ್ಯಕ್ರಮ ಏರ್ಪಡಿಸಿದ್ದು ಅಕ್ಟೋಬರ್ 2ರಿಂದ 9ರವರೆಗೆ ನಗರದಲ್ಲಿರುವ 8 ಅರಮನೆಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು ಪ್ರತಿಯೊಬ್ಬರಿಗೆ 999ರೂ ನಿಗದಿಪಡಿಸಲಾಗಿದೆ. ನೆನಪಿನ ಕಾಣಿಕೆಯಾಗಿ ಒಂದು ಕಲಾತ್ಮಕ ಕೀಚೈನ್, ಸಿಹಿತಿಂಡಿ, ಕುಡಿಯುವ ನೀರು ಮತ್ತು ನುರಿತ ಗೈಡ್ನ ವ್ಯವಸ್ಥೆ ಮಾಡಲಾಗಿದ್ದು ಮಧ್ಯಾಹ್ನದ ಊಟವನ್ನು ಲಲಿತಮಹಲ್ ಹೋಟೆಲ್ನಲ್ಲಿ ಹಾಗೂ ಸಂಜೆ ಅಲೋಕ ಅರಮನೆಯಲ್ಲಿ ಕಾಫಿ ಮತ್ತು ತಿಂಡಿ ವ್ಯವಸ್ಥೆ ಮಾಡಲಾಗಿದೆ ಎಂದರು.

See also  ರಾಜು ಹಂತಕರ ಸುಳಿವು ನೀಡಿದರೆ ಬಹುಮಾನ: ನಗರ ಪೊಲೀಸ್ ಆಯುಕ್ತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು