News Kannada
Friday, September 30 2022

ಮೈಸೂರು

ರೈತದಸರಾದಲ್ಲಿ ನಗರಕ್ಕೆ ಬಂದ ಎತ್ತಿನಗಾಡಿಗಳು - 1 min read

Photo Credit :

ರೈತದಸರಾದಲ್ಲಿ ನಗರಕ್ಕೆ ಬಂದ ಎತ್ತಿನಗಾಡಿಗಳು

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ನಾಡಹಬ್ಬ ದಸರಾ ಮಹೋತ್ಸವವು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಅನ್ನದಾತ ರೈತನಿಗೆ ನೆರವಾಗಬಲ್ಲ ಕೃಷಿ ಮೇಳಕ್ಕೆ ಚಾಲನೆ ಸಿಕ್ಕಿದೆ. ಇದಕ್ಕೂ ಮುಂಚೆ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಎತ್ತಿನಗಾಡಿಗಳು, ಸ್ತಬ್ದ ಚಿತ್ರಗಳೊಂದಿಗೆ ನಡೆದ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ರೈತ ದಸರಾಕ್ಕೆ ಮೆರಗು ನೀಡಿತು.

ನಾಡಿನೆಲ್ಲೆಡೆ ರೈತರಿಗೆ ಕಾವೇರಿ ಸಂಕಷ್ಟ ಒದಗಿರುವ ಸಂದರ್ಭದಲ್ಲೇ ಆರಂಭವಾದ ನಾಡಹಬ್ಬದಲ್ಲಿ ಇಂದು ಅನ್ನದಾತ ರೈತರನ್ನು ಸ್ಮರಿಸುವ ಅತ್ಯಪೂರ್ಣ ಕಾರ್ಯ ನಡೆಯಿತು. ರೈತರಿಗೆ ಉಪಯುಕ್ತ ಮಾಹಿತಿ ನೀಡಬಲ್ಲ ಕೃಷಿ ಮೇಳದಲ್ಲಿ ಅತ್ಯಾಧುನಿಕ ಕೃಷಿ ಯಂತ್ರಗಳ ಪ್ರದರ್ಶನ ನಡೆಯಿತು. ಕೃಷಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ನಾರಾಯಣಗೌಡರು ಕೃಷಿ ಮೇಳಕ್ಕೆ ಚಾಲನೆ ನೀಡಿದರು. ಬಳಿಕ ಕೃಷಿ ಆಯೋಗದ ಅಧ್ಯಕ್ಷ ದಯಾನಂದ ಮೂರ್ತಿ ಅವರೊಂದಿಗೆ ಕೃಷಿ ಮೇಳ ವೀಕ್ಷಿಸಿದರು.

ಈಗ ಮಳೆಯ ಅಭಾವದಿಂದಾಗಿ ಬರಗಾಲ ಆವರಿಸಿರುವ ಹಿನ್ನೆಲೆ ಜಲಾಶಯಗಳಲ್ಲಿ ನೀರಿಲ್ಲದೆ ಬೆಳೆಗಳು ಒಣಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೃಷಿ ಇಲಾಖೆ ಈ ಬಾರಿ ಕಡಿಮೆ ನೀರನ್ನು ಬಳಸಿ ಬೆಳೆ ತೆಗೆಯುವುದು ಹೇಗೆ ಎಂಬುದರ ಕುರಿತು ಪ್ರಾತ್ಯಕ್ಷಿಕೆಗಳನ್ನು ಕೃಷಿ ಮೇಳದಲ್ಲಿ ಇರಿಸಿದ್ದರು. ಇದರ ಜೊತೆಗೆ ಆಧುನಿಕ ಕೃಷಿ ಯಂತ್ರಗಳ, ಸುಧಾರಿತ ತಂತ್ರಜ್ಞಾನದ ತಳಿ, ಶೂನ್ಯ ಬೇಸಾಯ, ತುಂತುರು ನೀರಾವರಿ ಬಗ್ಗೆ ಮೇಳದಲ್ಲಿ ಮಾಹಿತಿ ನೀಡಲಾಯಿತು. ಕೃಷಿ ಮೇಳ ಆಯೋಜನೆ ಬಗ್ಗೆ ರೈತರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

 

See also  ಮೈಸೂರಿನಿಂದ ತರಕಾರಿ ಕೊಂಡುಕೊಂಡ ನಟಿ ಶೃತಿ, ಶ್ವೇತಾ ಶ್ರೀವಾತ್ಸವ್, ಅಮೃತಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು