ಮೈಸೂರು: ಕಳೆದ ಬಾರಿಗಿಂತ ಈ ಬಾರಿ ಹೂವಿನ ಬೆಲೆ ಏರಿದೆ. ಸೇವಂತಿ ಹೂವು ಹಿಂದೆ 10 ರಿಂದ 20 ರೂ ಗೆ ಸಿಗುತ್ತಿತ್ತು, ಆದರೆ ಇಂದು 70 ರಿಂದ 80 ರೂ ಆಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಾಗುವ ನಿರೀಕ್ಷೆಯಿದ್ದರೂ, ಪೂಜೆಗೆ ಹೂವೇ ಭೂಷಣವಾದ್ದರಿಂದ ಜನಸಾಮಾನ್ಯರು ಎಂದಿನಂತೆ ಹೂವು ಕೊಳ್ಳುತ್ತಿದ್ದಾರೆ.
ಬಾಳೆ ಎಲೆಗಳು ಕಾಲಕ್ಕೆ ತಕ್ಕಂತೆ ವ್ಯಾಪಾರವಾಗುವುದರಿಂದ ಅದರ ವ್ಯಾಪಾರ ಕಡಿಮೆಯಾಗಿದೆ. ದೃಷ್ಟಿ ತೆಗೆಯಲು ಬಳಸುವ ಬೂದುಗುಂಬಳಕಾಯಿ ನಿತ್ಯ ಕೆ.ಜಿ.ಗೆ 7 ರಿಂದ 8 ರೂಪಾಯಿ ಆದರೆ ಇಂದಿನಿಂದ ಇದರ ಬೆಲೆ 80 ರಿಂದ 100 ರೂಪಾಯಿ ಆಗುವ ನಿರೀಕ್ಷೆ ಇದೆ. ಆಯುಧ ಪೂಜೆಗೆ ಬೂದಗುಂಬಳಕಾಯಿ ಬೇಕೇ ಬೇಕು. ಈ ಸಮಯದಲ್ಲಿಯೇ ಸ್ವಲ್ಪ ವ್ಯಾಪಾರ ಜೋರು. ಬೆಲೆಯೂ ದುಪ್ಪಟ್ಟಾಗಲಿದೆ.
ವರ್ಷಕ್ಕೊಮ್ಮೆ ಬರುವ ಈ ವಿಶೇಷ ನಾಡಹಬ್ಬ ದಸರಾದಂದು ನಿತ್ಯ ಅದಿದೇವತೆಗೆ ವಿಶೇಷ ರೀತಿಯ ವಿಭಿನ್ನ ಅವತಾರಗಳಲ್ಲಿ ಆರಾಧಿಸಿ, ಪೂಜಿಸಲು ಸಿದ್ಧತೆ ನಡೆದಿರುವ ಕಾರಣ, ಬೆಲೆಯ ಹೆಚ್ಚಳಕ್ಕೆ ತಲೆಕಡೆಸಿಕೊಳ್ಳದೇ ವೈಭವಯುತವಾಗಿ ಆಚರಿಸಬೇಕೆಂಬ ಆಶಯದಿಂದ ನಾಡಹಬ್ಬ ದಸರಾ ತಯಾರಿ ನಡೆಯತ್ತಿದೆ.
ನಾಡಹಬ್ಬ ಮೈಸೂರು ದಸರಾ ಪಾಡ್ಯದಿಂದ ಹಿಡಿದು ದಶಮಿಯವರೆಗೂ ಪ್ರತಿ ದಿನವೂ ವಿಶೇಷವೇ ಆಗಿದೆ.